Home latest Pro Kabaddi League 2023: ಪ್ರೊ ಕಬಡ್ಡಿ ಆರಂಭಕ್ಕೆ ಕ್ಷಣಗಣನೆ – ಇಂದು ಕಾದಾಡಲಿವೆ...

Pro Kabaddi League 2023: ಪ್ರೊ ಕಬಡ್ಡಿ ಆರಂಭಕ್ಕೆ ಕ್ಷಣಗಣನೆ – ಇಂದು ಕಾದಾಡಲಿವೆ ಈ ಎರಡು ಪ್ರಬಲ ತಂಡಗಳು

Pro Kabaddi League 2023
Image credit: Pro Kabaddi League

Hindu neighbor gifts plot of land

Hindu neighbour gifts land to Muslim journalist

Pro Kabaddi League 2023: ವಿವೋ ಪ್ರೊ ಕಬಡ್ಡಿ ಲೀಗ್‌ 2023 (Pro Kabaddi League 2023) ಸೀಸನ್‌ 10ರ ಹವಾ ಇಂದು ಅಂದರೆ ಡಿಸೆಂಬರ್ 2 ರಿಂದ ಪ್ರಾರಂಭವಾಗಲಿದೆ. ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನಲ್ಲಿ ಮೊದಲಿಗೆ ತೆಲುಗು ಟೈಟನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಕಣಕ್ಕಿಳಿಯಲಿದೆ. ಈ ರೋಚಕ ಪಂದ್ಯಾವಳಿಯ ಆರಂಭದಲ್ಲೇ ಸ್ಟಾರ್ ಆಟಗಾರರಾದ ಫಾಜೆಲ್ ಅತ್ರಾಚಲಿ ಮತ್ತು ಪವನ್ ಸೆಹ್ರಾವತ್ ಮುಖಾಮುಖಿಯಾಗಲಿದ್ದು, ಕುತೂಹಲ ಕೆರಳಿಸಿದೆ.

ಹಾಗೆಯೇ ಎರಡನೇ ಪಂದ್ಯ ಮುಂಬಾ ಮತ್ತು ಯುಪಿ ಯೋಧಾ (U-Mumba vs UP Yoddhas) ನಡುವೆ ನಡೆಯಲಿದೆ. ಪ್ರೊ ಕಬಡ್ಡಿ ಲೀಗ್‌ನ ಮೊದಲ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾದರೆ, ಎರಡನೇ ಪಂದ್ಯ ರಾತ್ರಿ 9 ಗಂಟೆಗೆ ನಡೆಯಲಿದೆ.

ವಿವೋ ಪ್ರೊ ಕಬಡ್ಡಿ ಲೀಗ್‌ 2023 ರ ಎಲ್ಲಾ 12 ತಂಡಗಳು ಇಂತಿವೆ:
ಗುಜರಾತ್ ಜೈಂಟ್ಸ್,
ತೆಲುಗು ಟೈಟಾನ್ಸ್,
ಯು ಮುಂಬಾ,
ಯುಪಿ ಯೋಧಾ,
ದಬಾಂಗ್ ದೆಹಲಿ,
ತಮಿಳ್ ತಲೈವಾಸ್,
ಬೆಂಗಳೂರು ಬುಲ್ಸ್,
ಪುಣೇರಿ ಪಲ್ಟನ್,
ಜೈಪುರ ಪಿಂಕ್ ಪ್ಯಾಂಥರ್ಸ್,
ಬೆಂಗಾಲ್ ವಾರಿಯರ್ಸ್,
ಪಾಟ್ನಾ ಪೈರೇಟ್ಸ್,
ಹರಿಯಾಣ ಸ್ಟೀಲರ್ಸ್.

ಇನ್ನು ಪ್ರೊ ಕಬಡ್ಡಿ ಲೀಗ್ 2023 ಪಂದ್ಯಗಳ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ಎಲ್ಲಾ ಚಾನಲ್‌ಗಳಲ್ಲಿ ಅಂದರೆ, ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ, ಸ್ಟಾರ್ ಸ್ಪೋರ್ಟ್ಸ್ 2 ನಲ್ಲಿ ಲಭ್ಯವಿರುತ್ತದೆ. ಮುಖ್ಯವಾಗಿ ಪ್ರೊ ಕಬಡ್ಡಿ ಲೀಗ್ 2023 ಪಂದ್ಯಗಳ ಉಚಿತ ಲೈವ್ ಸ್ಟ್ರೀಮಿಂಗ್ ಡಿಸ್ನಿ+ಹಾಟ್‌ಸ್ಟಾರ್ ಅಪ್ಲಿಕೇಶನ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: BMTC: ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ – ಬಸ್ ಪಾಸ್ ವಿಚಾರದಲ್ಲಿ ಹೊಸ ಘೋಷಣೆ ಹೊರಡಿಸಿದ ಸಾರಿಗೆ ಸಂಸ್ಥೆ