Home Latest Sports News Karnataka IPL 2023: ಐಪಿಎಲ್​ 2023ರಲ್ಲಿ ಬರಲಿದೆ ಹೊಸ ನಿಯಮ!

IPL 2023: ಐಪಿಎಲ್​ 2023ರಲ್ಲಿ ಬರಲಿದೆ ಹೊಸ ನಿಯಮ!

IPL 2023

Hindu neighbor gifts plot of land

Hindu neighbour gifts land to Muslim journalist

IPL 2023: ಐಪಿಎಲ್​ 2023(IPL 2023) ಈ ಬಾರಿ ಮಾರ್ಚ್​ 31ರಿಂದ ಆರಂಭವಾಗಲಿದೆ. ಪ್ರೇಕ್ಷಕರು, ಕ್ರಿಕೆಟ್(cricket) ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಇದೀಗ ಟಿ20 ಮಾದರಿಯನ್ನು ಬದಲಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಿಯಮ ತಂದಿದೆ.

ಟಿ20 ಮಾದರಿಯನ್ನು ಇನ್ನಷ್ಟು ರೋಚಕವಾಗಿಸಲು ಬಿಸಿಸಿಐ ‘ಇಂಪ್ಯಾಕ್ಟ್ ಪ್ಲೇಯರ್ ‘ ಎಂಬ ನಿಯಮ (impact player rule) ಮಾಡಿದೆ. ಇಂಪ್ಯಾಕ್ಟ್​ ಪ್ಲೇಯರ್​ ನಿಯಮದಲ್ಲಿ, ಟಾಸ್ ಸಮಯದಲ್ಲಿ, ಎರಡೂ ತಂಡಗಳು ತಮ್ಮ 11 ಆಟಗಾರರ ಅಂತಿಮ ತಂಡವನ್ನು ಪ್ರಕಟಿಸುತ್ತವೆ. ಮತ್ತು ಅಂಪೈರ್‌ಗಳಿಗೆ 4 ಹೆಚ್ಚಿನ ಆಟಗಾರರ ಪಟ್ಟಿಯನ್ನು ನೀಡಬೇಕು. ಎರಡೂ ತಂಡಗಳು ತಮ್ಮ ಇಂಪ್ಯಾಕ್ಟ್​ ಪ್ಲೇಯರ್ ಪಟ್ಟಿಯಿಂದ ಒಬ್ಬ ಆಟಗಾರನನ್ನು ಅಂತಿಮ ತಂಡದಲ್ಲಿ ಸೇರಿಸಿಕೊಳ್ಳುವ ಆಯ್ಕೆಯನ್ನು ಹೊಂದಿವೆ.

ಆದರೆ, ಇಂಪೆಕ್ಟ್​​ ಪ್ಲೇಯರ್​ನನ್ನು ಮೊದಲ 14 ಓವರ್‌ಗಳಲ್ಲಿ ಅಂತಿಮ ತಂಡಕ್ಕೆ ಸೇರಿಸಬೇಕು. ಇದು ಎರಡೂ ಇನ್ನಿಂಗ್ಸ್‌ಗೆ ಕೂಡ ಅಪ್ಲೈ ಆಗುತ್ತದೆ. ಇದರಲ್ಲಿ ಎರಡೂ ತಂಡಗಳು ಒಬ್ಬ ಆಟಗಾರನನ್ನು ಮಾತ್ರ ಬದಲಾಯಿಸಲು ಅನುಮತಿ ಇರುತ್ತದೆ.

ಹಾಗೆಯೇ ಇಂಪ್ಯಾಕ್ಟ್ ಪ್ಲೇಯರ್ ಅನ್ನು 15 ರಿಂದ 20 ಓವರ್‌ಗಳ ನಡುವೆ ತೆಗೆಯಲಾಗುವುದಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಅನ್ನು ಬಳಸುವಾಗ, ನಾಯಕ ಫೀಲ್ಡ್ ಅಂಪೈರ್ ಅಥವಾ ನಾಲ್ಕನೇ ಅಂಪೈರ್‌ನೊಂದಿಗೆ ಮಾತನಾಡಬೇಕು. ಒಮ್ಮೆ ಹೋದ ಆಟಗಾರನಿಗೆ ಮತ್ತೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಅವಕಾಶ ಇರುವುದಿಲ್ಲ. ಇದರಿಂದ ಇಂಪ್ಟಕ್ಟ್​ ಪ್ಲೇಯರ್​ಗೆ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡಲು ಅವಕಾಶವಿರುತ್ತದೆ.

ಇದನ್ನೂ ಓದಿ : ಇನ್ಮುಂದೆ IPL ಲೈವ್ ಪಂದ್ಯಗಳನ್ನು ವೀಕ್ಷಿಸಲು ರೀಚಾರ್ಜ್ ಮಾಡಿಸಬೇಕಿಲ್ಲ!

ವಿದೇಶಿ ಆಟಗಾರರು ಆಡಬೇಕು ಎಂದಾದರೆ, ಟಾಸ್ ವೇಳೆ ಘೋಷಿಸಲಾದ ಅಂತಿಮ ತಂಡದಲ್ಲಿ ಕೇವಲ ಮೂವರು ವಿದೇಶಿ ಆಟಗಾರರು ಇರಬೇಕು. ಯಾಕಂದ್ರೆ ನಿಯಮಗಳ ಪ್ರಕಾರ, 4 ವಿದೇಶಿ ಆಟಗಾರರಿಗೆ ಮಾತ್ರವೇ ಅಂತಿಮ ತಂಡದಲ್ಲಿ ಆಡುವ ಅವಕಾಶ ಇರುತ್ತದೆ.

‘ಇಂಪ್ಯಾಕ್ಟ್ ಪ್ಲೇಯರ್’ ತನ್ನ ಓವರ್‌ಗಳ ಸಂಪೂರ್ಣ ಹಂಚಿಕೆಯನ್ನು ಬ್ಯಾಟಿಂಗ್ ಮತ್ತು ಬೌಲ್ ಮಾಡಲು ಅನುಮತಿಸಲಾಗುತ್ತದೆ. ಆದರೆ, “ಪ್ಲೇಯಿಂಗ್ ಇಲೆವೆನ್‌ನಲ್ಲಿ ನಾಲ್ಕಕ್ಕಿಂತ ಕಡಿಮೆ ವಿದೇಶಿ ಆಟಗಾರರು ಇರದ ಹೊರತು ಇಂಪ್ಯಾಕ್ಟ್ ಪ್ಲೇಯರ್ ಭಾರತೀಯ ಆಟಗಾರರಾಗಿರಬಹುದು” ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.