

Toddler Viral Video :ಮಕ್ಕಳ ಕಲ್ಪನೆಗಳು ನಮ್ಮ ಆಲೋಚನೆಗೆ ನಿಲುಕದ್ದು. ಕಲ್ಪನೆ ವಿಷ್ಯದಲ್ಲಿ ಮಕ್ಕಳು ಮನೋವಿಜ್ಞಾನಿಗಳು, ವಯಸ್ಕರನ್ನು ಮೀರಿಸುತ್ತಾರೆ. ಅವರು ಪ್ರತಿಯೊಂದನ್ನು ನೋಡುವುದು, ಅರಿಯುವುದು, ಅರಿತು ಮಾತನಾಡುವುದು ಎಲ್ಲವೂ ಚಂದವೇ. ಅವುಗಳ ಮುಗ್ಧ ಮನಸ್ಸನ್ನು ನಾವು ಮುಗ್ಧವಾಗಿಯೇ ಅರ್ಥೈಸಿಕೊಳ್ಳಬೇಕು, ಅದೇ ಮುಗ್ಧತೆಯಿಂದಲೇ ಉತ್ತರಿಸಬೇಕು. ಅಂತೆಯೇ ಇಲ್ಲೊಂದೆಡೆ ತಾಯಿ, ಮಗುವಿನ ಮುಗ್ಧ ಸಂಭಾಷಣೆ ವಿಡಿಯೋ (Toddler Viral Video) ಒಂದು ಸಖತ್ ವೈರಲ್ ಆಗ್ತಿದೆ.
ಹೌದು, ಮಕ್ಕಳ ಕಣ್ಣಿಗೆ ಕಾಣುವ ಪ್ರತಿಯೊಂದು ವಸ್ತುವಿನ ಮೇಲೂ ಅವರಿಗೆ ಕುತೂಹಲವಿರುತ್ತದೆ. ಅದರ ಮೇಲೆ ಅವರಿಗೆ ನೂರು ಪ್ರಶ್ನೆಗಳಿರುತ್ತವೆ. ಅವರ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ನೀಡೋದು ಕಷ್ಟ. ಅದರಲ್ಲೂ ಗರ್ಭಿಣಿಯರನ್ನು ಕಂಡಾಗ ಅವರ ಪ್ರಶ್ನೆ ಡಬಲ್ ಆಗುತ್ತದೆ. ನಾನು ಎಲ್ಲಿಂದ ಬಂದೆ, ಅಮ್ಮನ ಹೊಟ್ಟೆಯಿಂದ ಹೇಗೆ ಹೊರಬಂದೆ, ಅಮ್ಮನ ಹೊಟ್ಟೆ ಸೇರಿದ್ದು ಹೇಗೆ?, ಹೀಗೆ ನಾನಾ ಪ್ರಶ್ನೆಗಳನ್ನು ತಂದೆ ತಾಯಿ, ಕುಟುಂಬದ ಮುಂದೆ ಕೇಳ್ತಾರೆ. ಅವರಿಗೆ ಉತ್ತರ ಹೇಳಿ ಹೇಳಿ ಸಾಕಾಗಬಹುದು. ಈಗ ಅಂಥಹದ್ದೇ ಒಂದು ಪ್ರಶ್ನೆಯನ್ನು ಮಗವೊಂದು ತನ್ನ ತಾಯಿಗೆ ಕೇಳಿದೆ.
ಮಗನ ಪ್ರಶ್ನೆಗೆ ಆರಂಭದಲ್ಲಿ ತಾಳ್ಮೆಯಿಂದ ಉತ್ತರ ನೀಡುವ ತಾಯಿ, ನಂತ್ರ ಸುಸ್ತಾಗಿ ಸ್ಮಾಟ್ ಉತ್ತರ ನೀಡ್ತಾಳೆ. ಆಕೆ ಈ ಉತ್ತರ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ (Viral) ಆಗಿದೆ. ಇದ್ರಲ್ಲಿ ಹುಡುಗನೊಬ್ಬ ಕುಳಿತು ತಾಯಿಯ ಬಳಿ ಪ್ರಶ್ನೆ ಕೇಳ್ತಿದ್ದಾನೆ. ಪ್ರಶ್ನೆ ಕೇಳುವ ಸಂದರ್ಭದಲ್ಲಿ ಆತನಿಗೆ ದುಃಖ ಉಕ್ಕಿ ಬರ್ತಿದೆ. ಹುಡುಗ, ನನ್ನನ್ನು ಏಕೆ ನೀನು ತಿಂದಿದ್ದೆ ಎಂದು ಪ್ರಶ್ನೆ ಕೇಳುತ್ತಾನೆ. Truelaugh ಹೆಸರಿನ ಇನ್ಸ್ಟಾದಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಮಗು, ತಾಯಿ ಹೊಟ್ಟೆಯಿಂದ ಬರುತ್ತದೆ ಎಂದು ಪಾಲಕರು ಹೇಳ್ತಾರೆ. ಹೊಟ್ಟೆಯಿಂದ ಬರಬೇಕೆಂದ್ರೆ ಹೊಟ್ಟೆ ಒಳಗೆ ಹೋಗಿದ್ದು ಹೇಗೆ? ಅಂದ್ರೆ ಅಮ್ಮ ನನ್ನನ್ನು ನುಂಗಿದ್ದಕ್ಕೆ ನಾನು ಅಮ್ಮನ ಹೊಟ್ಟೆಗೆ ಹೋದೆ. ನೀನ್ಯಾಕೆ ನನ್ನನ್ನು ನುಂಗಿದೆ ಎಂದು ಆತ ಪ್ರಶ್ನೆ ಕೇಳ್ತಾನೆ. ಆತನ ಪ್ರಶ್ನೆಗೆ ತಾಯಿ ಉತ್ತರ ನೀಡುವ ಪ್ರಯತ್ನ ನಡೆಸ್ತಾಳೆ. ಆದ್ರೆ ಆತನಿಗೆ ತೃಪ್ತಿಯಾಗೋದಿಲ್ಲ. ನಿರಾಸೆಗೊಂಡು, ಆಘಾತಕ್ಕೊಳಗಾಗಿ ಮತ್ತೆ ಪ್ರಶ್ನೆ ಕೇಳ್ತಾನೆ. ಅದಕ್ಕೆ ತಾಯಿ ತುಂಬಾ ಆಸಕ್ತಿದಾಯಕ ಮತ್ತು ಚುರುಕಾದ ಉತ್ತರವನ್ನು ನೀಡುತ್ತಾಳೆ.ಮಗುವು ನೀನ್ಯಾಕೆ ನನ್ನನ್ನು ನುಂಗಿದೆ ಎಂದು ಕೊನೆಯದಾಗಿ ತಾಯಿಯನ್ನು ಕೇಳುತ್ತದೆ. ಅದಕ್ಕೆ ತಾಯಿ, ನೀನು ತುಂಬಾ ರುಚಿಯಾಗಿದ್ದೆ. ಹಾಗಾಗಿ ನಾನು ನಿನ್ನನ್ನು ನುಂಗಿದೆ ಎಂದು ಹೇಳ್ತಾಳೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಕ್ಕಳೊಂದಿಗೆ ಯಾರೂ ವಾದಿಸಲು ಸಾಧ್ಯವಿಲ್ಲ. ಏಕೆಂದರೆ ಅವರ ಸೃಜನಶೀಲತೆ ಮತ್ತು ಕಲ್ಪನೆ ನಮಗೆ ನಿಲುಕದ್ದು. ಸಾಕಷ್ಟು ತಾಳ್ಮೆ ಮತ್ತು ತಿಳುವಳಿಕೆ ಪಾಲಕರಿಗೆ ಅಗತ್ಯವಿರುತ್ತದೆ. ಮಕ್ಕಳು ಹಾಗೂ ಪಾಲಕರು ಇಬ್ಬರಿಗೂ ಮುಜುಗರಕ್ಕೀಡು ಮಾಡದಂತೆ ಉತ್ತರ ನೀಡಬೇಕು. ನಾವು ನೀಡುವ ಉತ್ತರ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಮಕ್ಕಳ ಮನಸ್ಸು ಹಸಿ ಗೋಡೆ ಇದ್ದಂತೆ. ಏನು ಎಸೆದರೂ ಅಂಟಿಕೊಳ್ಳುತ್ತೆ. ಹಾಗಾಗಿ ಅವರೊಂದಿಗೆ ವ್ಯವಹರಿಸುವಾಗಾ, ಉತ್ತರಿಸುವಾಗ ತುಂಬಾ ಜಾಗರೂಕರಾಗಿರಬೇಕು.
https://www.instagram.com/reel/CotMndFPzn4/?igshid=MDJmNzVkMjY=













