

Little Girl playing Piano: ಕನ್ನಡ ಹಾಡಿಗೆ ಪಿಯಾನೋ ನುಡಿಸಿದ ಪುಟ್ಟ ಬಾಲಕಿಯ ( Little Girl playing Piano) ಪ್ರತಿಭೆಗೆ ಪ್ರಧಾನಿ ನರೇಂದ್ರ ಮೋದಿ ಮನಸೋತಿದ್ದು, ಆಕೆಯ ಪ್ರತಿಭೆಗೆ ತಮ್ಮ ಅಧಿಕೃತ ಟ್ಟಿಟ್ಟರ್ ಖಾತೆಯಲ್ಲಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪುಟಾಣಿ ಬಾಲೆಯ ತಾಯಿಯೂ ಮಧುರವಾದ ಸ್ವರದಿಂದ ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತಾ, ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತಾ ಎಂಬ ಕವಿ ಕೆಎಸ್ ನರಸಿಂಹಸ್ವಾಮಿ ಬರೆದ ಕನ್ನಡ ಹಾಡನ್ನು ಹಾಡುವಾಗ ಅದ್ಬುತವಾಗಿ ಪಿಯಾನೋ ನುಡಿಸಿದ್ದಾಳೆ. ಇದನ್ನು ಕಂಡ ಅನಂತ್ ಕುಮಾರ್ ಎಂಬುವವರು ಟ್ಟಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಇದನ್ನು ಪ್ರಧಾನಿ ನರೇಂದ್ರ ಮೋದಿಯವರು ಗಮನಿಸಿ ಮಗುವ ಪ್ರತಿಭೆಯನ್ನು ಶ್ಲಾಘಿಸಿ ರೀ ಟ್ಟೀಟ್ ಮಾಡಿದ್ದಾರೆ.
ಪುಟಾಣಿಯ ಕೈ ಬೆರಳುಗಳ ಮೂಲಕ ಅದ್ಬುತವಾಗಿ ಪಿಯಾನೋ ನುಡಿಸಿದ ಈ ಪುಟ್ಟ ಬಾಲಕಿಯ ಪ್ರತಿಭೆ ನಾಡಿನ ಜನತೆಯನ್ನು ಮಂತ್ರಮುಗ್ಧಗೊಳಿಸಿದಂತೂ ನಿಜ, ಈ ವಿಡಿಯೋ ಪ್ರತಿಯೊಬ್ಬರ ಮುಖದ ಮೇಲೆ ಮುಗುಳುನಗೆ ತರಿಸಬಹುದು. ಅನನ್ಯ ಪ್ರತಿಭೆ ಹಾಗು ಸೃಜನಶೀಲತೆ. ಶಾಲ್ಮಲಿಗೆ ಶುಭಹಾರೈಸಿದ್ದಾರೆ. ಅಷ್ಟೇ ಅಲ್ಲದೇ ಪುಟಾಣಿಯ ಚಾಣಕ್ಷತೆಯನ್ನು ಟ್ಟಿಟ್ಟರ್‌ನಲ್ಲಿ ಕಂಡ ಲಕ್ಷಾಂತರ ನೆಟ್ಟಿಗರು ಶ್ಗಾಘಿಸಿದ್ದಾರೆ.
ಇದನ್ನೂ ಓದಿ: Shani yoga: ಈ 5 ರಾಶಿಯವರಿಗೆ ಕಾದಿದೆ ಶನಿಯೋಗ, ಇದರಿಂದ ನೀವು ಶ್ರೀಮಂತರಾಗ್ತೀರ!













