Home Social ಅಬ್ಬಬ್ಬಾ | ದೇವರ ಮೇಲೆ ಕಾಲಿಟ್ಟು ಪೂಜೆ ಮಾಡುವ ಅರ್ಚಕ!!!

ಅಬ್ಬಬ್ಬಾ | ದೇವರ ಮೇಲೆ ಕಾಲಿಟ್ಟು ಪೂಜೆ ಮಾಡುವ ಅರ್ಚಕ!!!

Hindu neighbor gifts plot of land

Hindu neighbour gifts land to Muslim journalist

ದೇವರ ಮೇಲಿನ ನಂಬಿಕೆ ಎಲ್ಲರಿಗೂ ಒಂದೇ. ಆದರೆ ಪೂಜಿಸುವ ವಿಧಾನಗಳು ವಿಭಿನ್ನ ಆಗಿರಬಹುದು ಅಷ್ಟೇ. ದೇವರನ್ನು ಹೀಗೆಯೇ ಪೂಜಿಸಬೇಕು ಎಂದು ದೇವರೇ ಬಂದು ಹೇಳದಿದ್ದರೂ ಸಹ ಅನಾಧಿಕಾಲದಿಂದ ಬಂದ ಸಂಪ್ರದಾಯ ಪದ್ಧತಿಗಳ ಆಧಾರದಲ್ಲಿ ಇಂದಿನ ಪೀಳಿಗೆಯವರು ದೇವರ ಪೂಜೆಗಳನ್ನು ಮಾಡುವುದು ರೂಢಿ ಆಗಿದೆ.

ಇಲ್ಲೊಂದು ಕಡೆ ದೇವರ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡುವ ವಿಚಿತ್ರ ಅರ್ಚಕ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದ ಮಹೇಶ್ವರಯ್ಯ ಎಂಬ ಅರ್ಚಕ ದೇವರ ತಲೆ ಮೇಲೆ ಪಾದವಿಟ್ಟು ದೇವರಿಗೆ ಜಲಾಭಿಷೇಕ ಮಾಡಿದ ವಿಡಿಯೋ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗುತ್ತಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದ ಮಹೇಶ್ವರಯ್ಯ ಎಂಬ ಅರ್ಚಕ ವಿಚಿತ್ರ ಪೂಜೆಯಿಂದ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಬೇಡರ ಕಣ್ಣಪ್ಪ ಶಿವನಿಗೆ ಒಂದು ಕಣ್ಣು ದಾನ ಕೊಟ್ಟು ಇನ್ನೊಂದು ಕಣ್ಣು ಕೊಡಲು ಶಿವಲಿಂಗದ ಮೇಲೆ ಕಾಲಿಡುವಂತೆ ಈ ಅರ್ಚಕ ಮಹೇಶ್ವರಯ್ಯ, ಆಂಜನೇಯ ಸ್ವಾಮೀ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡುತ್ತಾರೆ. ಅರ್ಚಕನ ಪೂಜೆ ವಿಧಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಅನೇಕರು ಅರ್ಚಕನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಪ್ರತಿ ನಿತ್ಯ ದೇವರ ಪೂಜೆ ಮಾಡುವಾಗ ಅದರದೇ ಆದ ಕೆಲವು ನೀತಿ-ನಿಯಮಗಳನ್ನು ಪಾಲಿಸಬೇಕಾಗುತ್ತೆ. ಆದರೆ ಇದು ಯಾವುದೇ ದೇವರು ಮಾಡಿದ ರೂಲ್ಸ್ ಅಲ್ಲ ಎಂದು ವಿಡಿಯೋ ನೋಡಿ ಕೆಲವರು ಗೊಣಗುತ್ತಿದ್ದಾರೆ.