Home Social Pre Wedding Photoshoot: ವಿಷಕಾರಿ ಹಾವಿನ ಜತೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ; ಹಾವು ಹಿಡಿಯಲು...

Pre Wedding Photoshoot: ವಿಷಕಾರಿ ಹಾವಿನ ಜತೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ; ಹಾವು ಹಿಡಿಯಲು ಬಂದವನಿಗೆ ಹಾವಿನೊಂದಿಗೆ ಸಿಕ್ಕಿತ್ತು ಹೂವು !!

Pre wedding photoshoot
Image source: news 18

Hindu neighbor gifts plot of land

Hindu neighbour gifts land to Muslim journalist

Pre Wedding Photoshoot: ಇತ್ತೀಚಿನ ದಿನಗಳಲ್ಲಿ ನವಜೋಡಿಯ ಮದುವೆಗೆ ಮೊದಲು ನಡೆಯುವ ಫೋಟೋ ಶೂಟ್ ಎಲ್ಲೆಡೆ ಕಾಮನ್. ವಧು-ವರ ಪರಸ್ಪರ ಅಪ್ಪಿಕೊಳ್ಳುವ, ರೋಮ್ಯಾನ್ಸ್ ಮಾಡುವ ಹೀಗೆ ಹತ್ತು ಹಲವು ಫೋಟೋಗಳನ್ನು ಫೋಟೋಗ್ರಾಫರ್ ಗಳು ತಮ್ಮ ಕಲ್ಪನೆಯ ಕ್ಯಾಮೆರಾದಲ್ಲಿ ಹುಟ್ಟುಹಾಕುವುದು ಸ್ವಭಾವಿಕ. ಅಂತೆಯೇ ಇದೀಗ ನವ ಜೋಡಿಗಳು ಹಾವಿನ ಜತೆ ಪ್ರೀ ವೆಡ್ಡಿಂಗ್ ಫೋಟೋಶೂಟ್ (Pre Wedding Photoshoot) ಮಾಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Pre wedding photoshoot
Image source: News 18

ಈ ಫೋಟೋಶೂಟ್ ಕಥೆಯ ರೀತಿಯಲ್ಲಿ ಮೂಡಿಬಂದಿದ್ದು, ಸಖತ್ ಆಗಿದೆ. ಹೌದು, ಇಲ್ಲಿ ಹಾವು ಹಿಡಿಯಲು ಬಂದವನಿಗೆ ಹೂವು ಸಿಕ್ಕಿದೆ ಎಂದರೆ ತಪ್ಪಾಗಲಾರದು. ಯುವತಿ ಮನೆಯ ಹಿತ್ತಲಲ್ಲಿ ಹಾವನ್ನು ಕಂಡಿದ್ದು, ಗಾಬರಿಗೊಂಡ ಆಕೆ ತಕ್ಷಣ ಹಾವು ಹಿಡಿಯುವಾತನಿಗೆ ಕರೆ ಮಾಡಿ ವಿಷಯ ತಿಳಿಸಿ ಬರುವುದಕ್ಕೆ ಹೇಳುತ್ತಾಳೆ. ಕೆಲ ಸಮಯದ ನಂತರ ಬಂದ ಆತ ಹಾವನ್ನು ಹಿಡಿದು ಪೆಟ್ಟಿಗೆಯಲ್ಲಿ ಹಾಕಿ ಕೊಂಡೊಯ್ಯುತ್ತಾನೆ. ಆದರೆ, ಈ ಮಧ್ಯೆ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿರುತ್ತದೆ.

ಆತ ಹಾವು (Snake) ಹಿಡಿಯುವಾಗ ಯುವತಿ ಅರ್ಧಮುಖ ಕಾಣುವಂತೆ ಹಾವು ಹಿಡಿಯುವುದನ್ನು ಇಣುಕಿ ನೋಡುವ ವೇಳೆ ಇಬ್ಬರ ಮನಸ್ಸು ವಾಲಿರುತ್ತದೆ. ಕಣ್ಣುಗಳು ಪರಸ್ಪರ ನೋಟ ಬೀರುತ್ತವೆ. ಮುಖ ಮುಗುಳ್ನಗುತ್ತದೆ. ಕೊನೆಗೆ ಪ್ರೀತಿ ಶುರುವಾಗಿರುತ್ತದೆ. ಈ ಎಲ್ಲಾ ಅಂಶಗಳು ಫೋಟೋ ಶೂಟ್ ನಲ್ಲಿ ಸುಂದರವಾಗಿ ಕಟ್ಟಿಕೊಡಲಾಗಿದೆ.

Pre Wedding Photoshoot
Image source: news 18

ವಿಷಕಾರಿ ಹಾವಿನೊಂದಿಗಿನ ಫೋಟೋಶೂಟ್ ಗೆ ಅಚ್ಚರಿಯ ಜೊತೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಈ ಪ್ರಿ ವೆಡ್ಡಿಂಗ್​ ಶೂಟ್​​ನ ಫೋಟೋಗಳನ್ನು ಟ್ವಿಟ್ಟರ್ ಬಳಕೆದಾರ ವಿವೇಕ್ ಹಂಚಿಕೊಂಡಿದ್ದಾರೆ.ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಒಟ್ಟಾರೆ ಕ್ಯಾಮೆರಾ ಮ್ಯಾನ್ ಕೈಚಳಕದಿಂದ ವಿಭಿನ್ನ ಫೋಟೋಶೂಟ್ ಮೂಡಿಬಂದಿದೆ.

ಇದನ್ನೂ ಓದಿ: Free Electricity: ಇವರಿಗೆ ಮಾತ್ರ 200 ಯೂನಿಟ್ ವಿದ್ಯುತ್ ?: ನಿಮಗೂ ವಿದ್ಯುತ್ ಉಚಿತ ಸಿಗಲು ಜಸ್ಟ್ ಈ ರೂಲ್ಸ್ ಫಾಲೋ ಮಾಡಿ!