Home Karnataka State Politics Updates ವರ್ಕ್ ಫ್ರಂ ಹೋಂ: ಹೊಸ ನಿಯಮ ಜಾರಿಗೊಳಿಸಿದ ಸರಕಾರ

ವರ್ಕ್ ಫ್ರಂ ಹೋಂ: ಹೊಸ ನಿಯಮ ಜಾರಿಗೊಳಿಸಿದ ಸರಕಾರ

Hindu neighbor gifts plot of land

Hindu neighbour gifts land to Muslim journalist

ವಾಣಿಜ್ಯ ಇಲಾಖೆ ಹೊಸ ನಿಯಮವನ್ನು ರೂಪಿಸಿದ್ದು, ವಿಶೇಷ ಆರ್ಥಿಕ ವಲಯಗಳಿಗೆ ಮನೆಯಿಂದ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಲು ಸೂಚಿಸಿದೆ.

ವಾಣಿಜ್ಯ ಇಲಾಖೆಯು ಹೊಸ ನಿಯಮದ ಪ್ರಕಾರ, ವಿಶೇಷ ಆರ್ಥಿಕ ವಲಯಗಳಲ್ಲಿ ಮನೆಯಿಂದ ಕೆಲಸ ಮಾಡುವ ನಿಯಮ ಮಾರ್ಪಡಿಸಿ ದೇಶಾದ್ಯಂತ ಎಲ್ಲಾ ವಿಶೇಷ ಆರ್ಥಿಕ ವಲಯಗಳಲ್ಲಿ ಏಕರೂಪದ ಮನೆಯಿಂದ ಕೆಲಸ ನಿರ್ವಹಿಸುವ ನೀತಿಯನ್ನು ಉದ್ಯಮದ ಬೇಡಿಕೆಯ ಮೇರೆಗೆ ಹೊರಡಿಸಲಾಗಿದೆ.

ಹೊಸ ಅಧಿಸೂಚನೆಯ ಪ್ರಕಾರ, ಯೂನಿಟ್ ನ ಗುತ್ತಿಗೆ ನೌಕರರು ಸೇರಿದಂತೆ ಒಟ್ಟು ಉದ್ಯೋಗಿಗಳ ಗರಿಷ್ಠ ಶೇ. 50 ರಷ್ಟರವರೆಗೆ ಮನೆಯಿಂದ ಕೆಲಸ ಮಾಡುವುದನ್ನು ವಿಸ್ತರಿಸಬಹುದು. ಒಂದು ವರ್ಷದ ಅವಧಿಗೆ ಅನುಮತಿಸಲಾಗಿದ್ದು ಘಟಕಗಳ ಕೋರಿಕೆಯ ಮೇರೆಗೆ ಅಭಿವೃದ್ಧಿ ಆಯುಕ್ತರು ಇದನ್ನು ವಿಸ್ತರಿಸಬಹುದು ಎಂದು ಹೇಳಲಾಗಿದೆ.