Home Karnataka State Politics Updates ಗಂಟೆ ಬಾರಿಸುವ ಹಿಂದುತ್ವವಾದಿಗಳು, ಬಾಬ್ರಿ ಮಸೀದಿ ಕೆಡವಿದಾಗ ಹೋಗಿ ಬಿಲ ಸೇರಿಕೊಂಡಿದ್ದೀರಿ- ಬಿಜೆಪಿ ವಿರುದ್ಧ ಹರಿಹಾಯ್ದ...

ಗಂಟೆ ಬಾರಿಸುವ ಹಿಂದುತ್ವವಾದಿಗಳು, ಬಾಬ್ರಿ ಮಸೀದಿ ಕೆಡವಿದಾಗ ಹೋಗಿ ಬಿಲ ಸೇರಿಕೊಂಡಿದ್ದೀರಿ- ಬಿಜೆಪಿ ವಿರುದ್ಧ ಹರಿಹಾಯ್ದ ಉದ್ಭವ್ ಠಾಕ್ರೆ

Hindu neighbor gifts plot of land

Hindu neighbour gifts land to Muslim journalist

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಅವರು
“ಆಝಾನ್ ಮತ್ತು ಹನುಮಾನ್ ಚಾಲೀಸ ಹಾಗೂ ಲೌಡ್‌ಸ್ಪೀಕರ್‌ಗಳ ಬಳಕೆ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಹಿಂದುತ್ವ ಗುರುತನ್ನು ಕದಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ” ಇಷ್ಟು ಮಾತ್ರವಲ್ಲದೇ, ಬಿಜೆಪಿಯನ್ನು “ಗಂಟೆ ಬಾರಿಸುವ ಹಿಂದುತ್ವವಾದಿಗಳು” ಎಂದು ಅವರು ವ್ಯಂಗ್ಯವಾಡಿದ್ದಾರೆ.

“ನೀವು ಹನುಮಾನ್ ಚಾಲೀಸ ಪಠಿಸಬೇಕು ಎಂದಾದರೆ ಮಾಡಿ… ಆದರೆ ದಾದಾಗಿರಿ ನಡೆಸಬೇಡಿ. ಹಾಗೆ ಮಾಡಿದರೆ ಅದನ್ನು ತುಂಡರಿಸುವುದು ಹೇಗೆ ಎಂದು ನನಗೆ ಗೊತ್ತು.. ದಾದಾಗಿರಿಯನ್ನು ಹತ್ತಿಕ್ಕುವುದು ಹೇಗೆ ಎಂದು ಬಾಳ ಸಾಹೇಬ್ ನಮಗೆ ಕಲಿಸಿಕೊಟ್ಟಿದ್ದಾರೆ ಎಂದು ಖಾರವಾಗಿಯೇ ಹೇಳಿದ್ದಾರೆ‌

ನೀವು ಶಿವಸೇನಾಕ್ಕೆ ಸವಾಲು ಹಾಕಿದರೆ ಭೀಮ ರೂಪ ಮತ್ತು ಮಹಾ ರೂಪ ಎಂದರೆ ಏನೆಂದು ನಾವು ನಿಮಗೆ ತೋರಿಸುತ್ತೇವೆ… ನಮ್ಮ ಹಿಂದುತ್ವವು ಹನುಮಾನ್‌ನಷ್ಟು ಶಕ್ತಿಶಾಲಿಯಾಗಿದೆ’ ಎಂದು ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

“ಬಾಬ್ರಿ ಮಸೀದಿಯನ್ನು ಕೆಡವಿದಾಗ ನೀವು ನಿಮ್ಮ ಬಿಲದ ಒಳಗೆ ಓಡಿ ಹೋಗಿದ್ದೀರಿ, ರಾಮ ಮಂದಿರ ನಿರ್ಮಿಸುವ ನಿರ್ಧಾರವನ್ನು ನೀವು ತೆಗೆದುಕೊಂಡಿದ್ದಲ್ಲ, ಅದು ನ್ಯಾಯಾಲಯದ ಆದೇಶ. ಅದನ್ನು ಕಟ್ಟುವ ಸಮಯ ಬಂದಾಗ ಜನರ ಮುಂದೆ ಜೋಳಿಗೆ ಹಿಡಿದು ಹೋಗಿದ್ದೀರಿ. ನಿಮ್ಮ ಹಿಂದುತ್ವ ಎಲ್ಲಿದೆ?” ಎಂದು ವಾಗ್ದಾಳಿ ನಡೆಸಿದ್ದಾರೆ.