Home Karnataka State Politics Updates PM Modi: ‘ಡಿಜಿಟಲ್ ಅರೆಸ್ಟ್’ ಅನ್ನೋ ಕಾನೂನೇ ದೇಶದಲ್ಲಿ ಇಲ್ಲ, ಹುಷಾರಾಗಿರಿ- ಡಿಜಿಟಲ್ ಅರೆಸ್ಟ್ ಬಗ್ಗೆ...

PM Modi: ‘ಡಿಜಿಟಲ್ ಅರೆಸ್ಟ್’ ಅನ್ನೋ ಕಾನೂನೇ ದೇಶದಲ್ಲಿ ಇಲ್ಲ, ಹುಷಾರಾಗಿರಿ- ಡಿಜಿಟಲ್ ಅರೆಸ್ಟ್ ಬಗ್ಗೆ ಜನತೆಗೆ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ !!

Hindu neighbor gifts plot of land

Hindu neighbour gifts land to Muslim journalist

PM Modi: ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರ ಮನ್‌ ಕೀ ಬಾತ್‌(Mann Ki Baat) ಕಾರ್ಯಕ್ರಮದ 115 ನೇ ಸಂಚಿಕೆ ಇಂದು ಪ್ರಸಾರವಾಗಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಸೈಬರ್‌ ಕ್ರೈಂ ಬಗ್ಗೆ ಪ್ರಸ್ತಾಪಿಸಿ ಡಿಜಿಟಲ್ ಅರೆಸ್ಟ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಹೌದು, ಮೋದಿ ಅವರು ‘ಡಿಜಿಟಲ್ ಅರೆಸ್ಟ್” ಎಂಬ ಸೈಬರ್ ಅಪರಾಧದ ಬಗ್ಗೆ ಮಾತನಾಡಿ, ಈ ಬಗ್ಗೆ ದೇಶದ ಜನತೆಗೆ ಎಚ್ಚರಿಕೆ ನೀಡಿದ್ದಾರೆ. ಭಾನುವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸೈಬರ್ ಕ್ರೈಂ ಹಗರಣಗಳು ಇಂದು ಎಲ್ಲಾ ವರ್ಗದ ಜನರ ಮೇಲೆ ಪರಿಣಾಮ ಬೀರುತ್ತಿದೆ, ಇಂತಹ ಸಂದರ್ಭಗಳಲ್ಲಿ ಜನರು ಯೋಚಿಸುವುದನ್ನು ನಿಲ್ಲಿಸಿ ಕ್ರಮ ಕೈಗೊಳ್ಳುವ ಮಂತ್ರವನ್ನು ಅಳವಡಿಸಿಕೊಳ್ಳಬೇಕು. ಡಿಜಿಟಲ್ ವಂಚನೆಗಳ ಬಗ್ಗೆ ಎಚ್ಚರದಿಂದಿರಿ. ಇಂತಹ ತನಿಖೆಗಳಿಗೆ ಯಾವುದೇ ತನಿಖಾ ಸಂಸ್ಥೆಯು ಫೋನ್ ಅಥವಾ ವೀಡಿಯೊ ಕರೆ ಮೂಲಕ ನಿಮ್ಮನ್ನು ಸಂಪರ್ಕಿಸುವುದಿಲ್ಲ ಎಂದು
ಜನರನ್ನು ಎಚ್ಚರಿಸಿದರು.

ಅಲ್ಲದೆ ಮೋದಿ ಅವರು ವಂಚನೆ ಗ್ಯಾಂಗ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಿದರು. ಈ ಕಿಡಿಗೇಡಿಗಳು ನಿಮ್ಮ ಬಗ್ಗೆ ತುಂಬಾ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ನಂತರ ತನಿಖಾ ತಂಡದಿಂದ ಕರೆ ಮಾಡುತ್ತಿರುವುದಾಗಿ ಹೇಳಿ ನಿಮ್ಮ ಹೆದರಿಸುತ್ತಾರೆ. ನಿಮಗೆ ಅಂತಹ ಕರೆ ಬಂದರೆ, ಭಯಪಡಬೇಡಿ, ಯಾವುದೇ ತನಿಖಾ ಸಂಸ್ಥೆಯು ಫೋನ್ ಮೂಲಕ ವಿಚಾರಣೆ ಮಾಡುವುದಿಲ್ಲ ಎಂಬುದು ತಿಳಿದಿರಬೇಕು. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ನೀಡಬೇಡಿ. ಸಾಧ್ಯವಾದರೆ, ಸ್ಕ್ರೀನ್ ಶಾಟ್‌ಗಳು ಮತ್ತು ರೆಕಾರ್ಡಿಂಗ್‌ಗಳನ್ನು ಮಾಡಿಟ್ಟುಕೊಳ್ಳಿ ಎಂದು ಅರಿವು ಮೂಡಿಸಿದರು.

ಜೊತೆಗೆ ರಾಷ್ಟ್ರೀಯ ಸೈಬರ್ ಸಹಾಯವಾಣಿಯೊಂದಿಗೆ ಸಂಪರ್ಕ ಸಾಧಿಸಲು ಅಥವಾ ಅದರ ಪೋರ್ಟಲ್‌ನೊಂದಿಗೆ ಸಂಪರ್ಕ ಸಾಧಿಸಲು 1930 ನಂಬರ್ ಡಯಲ್ ಮಾಡಲು ಮತ್ತು ಅಂತಹ ಅಪರಾಧದ ಬಗ್ಗೆ ಪೊಲೀಸರಿಗೆ ತಿಳಿಸಿ. ಇಂತಹ ಕರೆಗಳು ಬಂದಾಗ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿ ಸ್ಕ್ರೀನ್‌ಶಾಟ್‌ಗಳನ್ನು ತೆಗೆದು ದೂರು ನೀಡಿ ಎಂದರು.

ಡಿಜಿಟಲ್ ಅರೆಸ್ಟ್ ಎಂದರೇನು?
ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ವಂಚಿಸಲು ಸೈಬರ್ ವಂಚಕರು ಬಳಸುತ್ತಿರುವ ಮಾರ್ಗವನ್ನು ಡಿಜಿಟಲ್ ಅರೆಸ್ಟ್ ಎನ್ನಲಾಗುತ್ತದೆ. ಪೊಲೀಸ್, ಸಿಬಿಐ, ಇಡಿ ಮತ್ತಿತರ ತನಿಖಾ ಸಂಸ್ಥೆಗಳ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡುವ ವಂಚಕರು, “ನಿಮ್ಮ ಅಥವಾ ನಿಮ್ಮ ಆತ್ಮೀಯರ ಹೆಸರಿನಲ್ಲಿ ಬಂದಿರುವ ಅಥವಾ ನಿಮ್ಮ ಹೆಸರಿನಲ್ಲಿ ವಿದೇಶಕ್ಕೆ ಕಳಿಸಲಾಗುತ್ತಿರುವ ಪಾರ್ಸೆಲ್‌ನಲ್ಲಿ ಮಾದಕ ಪದಾರ್ಥ, ನಕಲಿ ಪಾಸ್‌ಪೋರ್ಟ್‌ಗಳು ಮತ್ತಿತರ ವಸ್ತುಗಳಿವೆ” ಎಂದು ಮೊದಲು ಬೆದರಿಸುತ್ತಾರೆ. ತನಿಖೆ ಮುಗಿಯುವವರೆಗೂ ವಿಡಿಯೋ ಕಾಲ್ ಕಟ್ ಮಾಡಲು ಅವಕಾಶವಿಲ್ಲ ಎನ್ನುತ್ತಾ ಹೆದರಿಸುತ್ತಾರೆ. ಹಣ ವರ್ಗಾವಣೆ ಆದ ಬಳಿಕ ಈ ಕರೆ ಬಂದ್​ ಆಗುತ್ತದೆ.