Home Karnataka State Politics Updates ಜನರ ಸಂಕಷ್ಟದ ಮಧ್ಯೆ ಸಂಸದರ ತಮಾಷೆ!! ತೇಜಸ್ವಿ ಸೂರ್ಯ ನಡೆಗೆ ವ್ಯಕ್ತವಾಗಿದೆ ಭಾರೀ ಆಕ್ರೋಶ!!

ಜನರ ಸಂಕಷ್ಟದ ಮಧ್ಯೆ ಸಂಸದರ ತಮಾಷೆ!! ತೇಜಸ್ವಿ ಸೂರ್ಯ ನಡೆಗೆ ವ್ಯಕ್ತವಾಗಿದೆ ಭಾರೀ ಆಕ್ರೋಶ!!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಮಹಾಮಳೆಗೆ ಸ್ಮಾರ್ಟ್ ಸಿಟಿ, ರಾಜಧಾನಿ ಬೆಂಗಳೂರು ಅಕ್ಷರಶಃ ಮುಳುಗಡೆಯಾಗಿ ಜನಜೀವನ ಅಸ್ತವ್ಯಸ್ತವಾಗಿರುವುದು ಒಂದೆರಡು ದಿನಗಳಿಂದ ಕಂಡುಬರುತ್ತಿದೆ. ನಗರದ ತುಂಬೆಲ್ಲಾ ನೀರು ತುಂಬಿ ರಸ್ತೆಗಳ ಸಹಿತ ವಾಹನ ಮುಳುಗಿದ್ದು ಓರ್ವ ಯುವತಿಯ ಸಾವಿಗೂ ಕಾರಣವಾಗಿದೆ. ಈ ನಡುವೆ ಸಂಸದ ತೇಜಸ್ವಿ ಸೂರ್ಯ ಅವರ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೂ, ಸ್ವತಃ ತೇಜಸ್ವಿ ಅವರೇ ಫೋಟೋ ಶೇರ್ ಮಾಡಿ ಟೀಕೆಗೆ ಒಳಗಾಗಿದ್ದಾರೆ.

ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು ನಲುಗಿರುವ ಬೆನ್ನಲ್ಲೇ ಜವಾಬ್ದಾರಿಯುತ ಸಂಸದ ಇನ್ಸ್ಟಾಗ್ರಾಮ್ ನಲ್ಲಿ ದೋಸೆ ಫೋಟೋ ನೋಡಿ ಟೆಂಪ್ಟ್ ಆಗಿ ಪದ್ಮನಾಭನಗರದ ಹೋಟೆಲ್ ಗೆ ಭೇಟಿ ನೀಡಿ ದೋಸೆ ತಿನ್ನುತ್ತಿದ್ದೇನೆ ಎಂದು ಫೋಟೋ ಸಹಿತ ಬರೆದುಕೊಂಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂಸದರ ವಿರುದ್ಧ ನೆಟ್ಟಿಗರು ಮೌನ ಮುರಿದಿದ್ದು, ಜನಜೀವನವೇ ಸಂಕಷ್ಟಕ್ಕೆ ಸಿಲುಕಿದ್ದು, ಐಟಿ ಬಿಟಿ ಉದ್ಯೋಗಳಿಂದ ತುಂಬಿರುವ ಬೆಂಗಳೂರಿನಲ್ಲಿ ನಡೆದಾಡಲು ಸಹ ಪರದಾಡಬೇಕಾದ ಅನಿವಾರ್ಯತೆ ಎದುರಾಗಿದ್ದು,ಈ ನಡುವೆ ಸಂಸದರು ದೋಸೆ ಫೋಟೋ ಹಂಚಿಕೊಂಡು ದೋಸೆ ತಿನ್ನಲು ತೆರಳಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.