Home Karnataka State Politics Updates Shakti Scheme: ಉಚಿತ ಶಕ್ತಿ ಬಸ್ ಪ್ರಯಾಣಕ್ಕೆ ಒರಿಜಿನಲ್ ಐಡಿ ಅಗತ್ಯವಿಲ್ಲ, ಮಹಿಳೆಯರಿಗೆ ಗುಡ್ ನ್ಯೂಸ್...

Shakti Scheme: ಉಚಿತ ಶಕ್ತಿ ಬಸ್ ಪ್ರಯಾಣಕ್ಕೆ ಒರಿಜಿನಲ್ ಐಡಿ ಅಗತ್ಯವಿಲ್ಲ, ಮಹಿಳೆಯರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ !

Shakti Scheme

Hindu neighbor gifts plot of land

Hindu neighbour gifts land to Muslim journalist

Shakti Scheme: ಉಚಿತ ಶಕ್ತಿ ಯೋಜನೆಯ ( Shakti Scheme ) ಅಡಿಯಲ್ಲಿ ಮಹಿಳೆಯರು ಕರ್ನಾಟಕ ಸಾರಿಗೆ ( KSRTC) ಬಸ್ಸುಗಳಲ್ಲಿ ಪ್ರಯಾಣಿಸಲು ಒರಿಜಿನಲ್ ಐಡಿ ಕಾರ್ಡ್ ಕಡ್ಡಾಯ ಎಂದು ಈ ಹಿಂದೆ ಕೆಎಸ್ಆರ್‌ಟಿಸಿ ಹೊರಡಿಸಿದ ಮೂಲ ಆದೇಶದಲ್ಲಿ ತಿಳಿಸಿತ್ತು. ಆದರೆ ಇದೀಗ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಹೊಸ ಆದೇಶ ಹೊರಡಿಸಿದೆ. ಉಚಿತ ವಸ್ತುಗಳಲ್ಲಿ ಪ್ರಯಾಣಿಸಲು ಬಯಸುವ ಮಹಿಳೆಯರು ತಮ್ಮ ಐಡೆಂಟಿಟಿ ಪ್ರೂಫ್ ನ ನಕಲು ಪ್ರತಿಗಳನ್ನು ತೋರಿಸಿ ಬಸ್ಸಿನಲ್ಲಿ ಪ್ರಯಾಣಿಸಬಹುದು ಎಂದು ಪರಿಷ್ಕೃತ ಆದೇಶ ನೀಡಿದೆ.

ಪತ್ರಿಕಾ ಪ್ರಕಟಣೆ ನೀಡಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಮುಖ್ಯ ವ್ಯವಸ್ಥಾಪಕರು ತಿದ್ದುಪಡಿ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಕರ್ನಾಟಕ ರಾಜ್ಯದ ಮಹಿಳೆಯರಿಗೆ ನಾಲ್ಕು ನಿಗಮಗಳ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸಂಬಂಧ ಶಕ್ತಿ ಯೋಜನೆಯ ಅಡಿಯಲ್ಲಿ ನಿರ್ದೇಶನ ನೀಡಲಾಗಿತ್ತು. ಆಗ ಐಡೆಂಟಿಟಿ ದಾಖಲಾತಿಗಳ ಮೂಲ ಪ್ರತಿ ಅಗತ್ಯ ಎಂದಿತ್ತು. ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಾಗಿ ತೋರಿಸಬೇಕಾದ ದಾಖಲಾತಿಗಳಲ್ಲಿ ‘ ಮೂಲ ಗುರುತಿನ ಚೀಟಿ ಅಥವಾ ಡಿಜಿಲಾಕರ್ ‘ ಮುಖೇನ ತಮ್ಮ ಗುರುತು ಸಾಬೀತುಬೇಕಾಗಿರುತ್ತದೆ ಎಂದು ತಿಳಿಸಲಾಗಿತ್ತು ಎಂದಿದ್ದಾರೆ.

ಈಗ ಮೂಲ ಪ್ರತಿ ಯಾವುದು ಕಾರಣಕ್ಕಾಗಿ ನೀಡಬೇಕು ಎಂದು ಪ್ರಶ್ನೆಗಳು ಎದ್ದ ಕಾರಣ ಈಗ ಗುರುತಿನ ಚೀಟಿಗಳ ನಕಲು ಪ್ರತಿಯನ್ನು ಸಹ ಮಾನ್ಯ ಮಾಡಲು ನಿರ್ಧರಿಸಿದೆ ಸಾರಿಗೆ ನಿಗಮ. ಇನ್ನು ಮಹಿಳಾ ಪ್ರಯಾಣಿಕರು ಗುರುತಿನ ಚೀಟಿಯ ನಕಲು ತೋರಿಸಿದರೆ ಸಾಕು. ಒರಿಜಿನಲ್ ಪ್ರತಿ ಪ್ರತಿಸಲ ಒಯ್ಯಬೇಕಾದ ಅಗತ್ಯ ಇಲ್ಲ. ಮೂಲ, ನಕಲು, ಡಿಜಿಲಾಕರ್ ( ಹಾರ್ಡ್ / ಸಾಫ್ಟ್ ಕಾಪಿ ) ಇವುಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ.

 

ಇದನ್ನು ಓದಿ: Benglore: ಬೆಂಗಳೂರಿಗೆ ಬಂದಿದ್ದ ನೆದರ್ಲ್ಯಾಂಡ್ ಯೂಟ್ಯೂಬರ್ ಮೇಲೆ ನವಾಬ್ ದರ್ಪ, ಪೋಲೀಸ್ ಅತಿಥಿಯಾದ ಪುಂಡ !!