Home Karnataka State Politics Updates Ram Mandir inauguration: ರಾಮಮಂದಿರ ಪ್ರತಿಷ್ಠಾಪನೆಗೆ ಶೃಂಗೇರಿ ಪೀಠದಿಂದ ಅಸಮಾಧಾನ- ಮಠದ ವತಿಯಿಂದ ಸ್ಪಷನೆ!!!

Ram Mandir inauguration: ರಾಮಮಂದಿರ ಪ್ರತಿಷ್ಠಾಪನೆಗೆ ಶೃಂಗೇರಿ ಪೀಠದಿಂದ ಅಸಮಾಧಾನ- ಮಠದ ವತಿಯಿಂದ ಸ್ಪಷನೆ!!!

Hindu neighbor gifts plot of land

Hindu neighbour gifts land to Muslim journalist

Ram Mandir: ಶೃಂಗೇರಿ ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪೀಠಗಳಲ್ಲಿ ಒಂದಾಗಿರುವ ಶೃಂಗೇರಿ ಮಠದ ಶ್ರೀಗಳು ಅಯೋಧ್ಯೆ ರಾಮಮಂದಿರದ ಪ್ರಾಣಪ್ರತಿಷ್ಠೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿ ಸಂಚಲನ ಮೂಡಿಸಿತ್ತು. ಸದ್ಯ, ಈ ಕುರಿತು ಶೃಂಗೇರಿ ಮಠದ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

ರಾಮಮಂದಿರ ಪ್ರತಿಷ್ಠಾಪನೆಗೆ ಶೃಂಗೇರಿ ಪೀಠದಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ರೀತಿ ಎಲ್ಲೆಡೆ ಸುದ್ದಿ ಹಬ್ಬಿರುವುದಕ್ಕೆ ಶೃಂಗೇರಿ ಪೀಠಾಧೀಶರು ಈ ರೀತಿಯ ಯಾವುದೇ ಪೋಸ್ಟ್ ಅನ್ನೂ ಮಠದ ವತಿಯಿಂದ ಪ್ರಕಟಿಸಲಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ದುಷ್ಕರ್ಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೆಬ್ ಸೈಟ್ ಒಂದರ ಹೆಸರು ಬಳಸಿ ದಕ್ಷಿಣಾಮಯ ಶೃಂಗೇರಿ ಶಾರದ ಪೀಠಾಧೀಶ್ವರ, ಪರಮಪೂಜ್ಯರ ಚಿತ್ರವಿರುವ ಪೋಸ್ಟ್‌ಗಳು ಹರಿದಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈಗ ಹರಿದಾಡಿರುವುದು ಸುಳ್ಳು ಪೋಸ್ಟ್ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಠದಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: Criminal Case: ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸ್ತೀರಾ? ಅಷ್ಟೇ, ಬೀಳುತ್ತೆ ಕ್ರಿಮಿನಲ್‌ ಕೇಸ್‌ ಮಕ್ಕಳೇ!!!

ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠೆ ನಡೆಯುತ್ತಿರುವುದು ಸಂತಸದ ವಿಷಯವೆಂದು ಶ್ರೀಗಳು ಸಂದೇಶ ನೀಡಿದ್ದಾರೆ. ಸುಮಾರು ಐದು ಶತಮಾನಗಳ ಹೋರಾಟದ ಬಳಿಕ ಪುಷ್ಯ ಶುಕ್ಲ ದ್ವಾದಶಿಯಂದು (22) ಪವಿತ್ರ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಕ್ಷೇತ್ರದಲ್ಲಿ ಭಗವಾನ್ ಶ್ರೀರಾಮನಿಗೆ ನಿರ್ಮಿಸಲಾದ ಸುಂದರವಾದ ದೇವಾಲಯದಲ್ಲಿ ಪ್ರಾಣಪ್ರತಿಷ್ಠೆ ನಡೆಯುತ್ತಿರುವುದು ಎಲ್ಲಾ ಆಸ್ತಿಕರಿಗೆ ಸಂತೋಷ ತರುವ ಸಂಗತಿಯಾಗಿದೆ ಎಂದು ಶೃಂಗೇರಿ ಮಠದ ಶ್ರೀಗಳು ಮಾಹಿತಿ ನೀಡಿದ್ದಾರೆ.