Home Karnataka State Politics Updates Rachana Banerjee: ಪಶ್ಚಿಮ ಬಂಗಾಳದಲ್ಲಿ ಲೋಕಸಭೆಗೆ ಸ್ಪರ್ಧಿಸಿ, ಗೆದ್ದು ಬೀಗಿದ ಸ್ಯಾಂಡಲ್‌ವುಡ್ ನಟಿ !!

Rachana Banerjee: ಪಶ್ಚಿಮ ಬಂಗಾಳದಲ್ಲಿ ಲೋಕಸಭೆಗೆ ಸ್ಪರ್ಧಿಸಿ, ಗೆದ್ದು ಬೀಗಿದ ಸ್ಯಾಂಡಲ್‌ವುಡ್ ನಟಿ !!

Rachana Banerjee

Hindu neighbor gifts plot of land

Hindu neighbour gifts land to Muslim journalist

Rachana Banerjee: ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ಕೆಲವು ವಿಶೇಷತೆಗಳು ಬೆಳಕಿಗೆ ಬರುತ್ತಿವೆ ಅಂತೆಯೇ ಇದೀಗ ಸ್ಯಾಂಡಲ್ ವುಡ್(Sandalwood) ನಟಿ ರಚನಾ ಬ್ಯಾನರ್ಜಿ(Rachana Banerjee) ಪಶ್ಚಿಮ ಬಂಗಾಳದಲ್ಲಿ(West Bengal) ಚುನಾವಣೆಗೆ ನಿಂತು ಭರ್ಜರಿ ಜಯ ಗಳಿಸಿದ್ದಾರೆ.

ರಚನಾ ಬ್ಯಾನರ್ಜಿ ಹೆಸರು ಕೇಳಿದ ತಕ್ಷಣ ಬೆಂಗಾಳ್‌ನವರನ್ನ ಹೊರತು ಪಡಿಸಿದರೆ ಅನೇಕರಲ್ಲಿ ಯಾರು ಈಕೆ ಎಂಬ ಪ್ರಶ್ನೆ ಮೂಡಬಹುದು. ಅದು ಸಹಜ ಕೂಡ. ಯಾಕೆಂದರೆ.. ಆಧುನಿಕ ಕಾಲಘಟ್ಟದ ಚಿತ್ರ ಪ್ರೇಕ್ಷಕರಿಗೆ ರಚನಾ ಬ್ಯಾನರ್ಜಿ ಅಪರಿಚಿತರು. ಆದರೆ ಎರಡೂವರೆ ದಶಕದ ಹಿಂದೆ ಇದೇ ರಚನಾ ಬ್ಯಾನರ್ಜಿಗೆ ಕೇವಲ ಬೆಂಗಾಳದಲ್ಲಿ ಅಷ್ಟೇ ಅಲ್ಲ ನಾಲ್ಕು ದಿಕ್ಕಿನಲ್ಲಿರುವ ಚಿತ್ರರಂಗದಲ್ಲಿ ಕೂಡ ಚಿನ್ನದ ಬೇಡಿಕೆ ಇತ್ತು. ಅಂತೆಯೇ ಕನ್ನಡ ಚಿತ್ರರಂಗದಲ್ಲೂ ಈಕೆ ಮಿಂಚಿ, ಬೇಡಿಕೆಯ ನಟಿಯಾಗಿದ್ದರು.

ವಿಶೇಷ ಅಂದ್ರೆ ಕನ್ನಡದ ಸೂಪರ್ ಹೀರೋ, ನಟ, ನಿರ್ದೇಶಕರುಗಳಾದ ರಿಯಲ್ ಸ್ಟಾರ್ ಉಪೇಂದ್ರ(Upendra), ಕ್ರೇಜಿಸ್ಟಾರ್ ರವಿಚಂದ್ರನ್‌(Ravichandran)ಗೆ ನಾಯಕಿಯಾಗಿದ್ದರು ನಟಿ ರಚನಾ. ಸದ್ಯ ಇವರು ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣೆ ನಿಂತು ಗೆದ್ದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದ ಈ ನಟಿ ಇದೀಗ ಸಂಸದೆಯಾಗಿದ್ದಾರೆ. ಕೋಲ್ಕತ್ತಾದ ಹೂಗ್ಲಿ ಲೋಕಸಭಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಪರ ಅಖಾಡಕ್ಕಿಳಿದು ಬಿಜೆಪಿಯ ಪ್ರಬಲ ಎದುರಾಳಿ ಲಾಕೆಟ್ ಚಟರ್ಜಿ ಅವರನ್ನ ಸೋಲಿಸಿದ್ದಾರೆ. 60.000 ಮತಗಳ ಅಂತರದಿಂದ ಗೆದ್ದು ರಣಕೇಕೆ ಹಾಕಿದ್ದಾರೆ.

ಅಂದಹಾಗೆ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ದಕ್ಷಿಣ ಭಾರತದ ಸಿನಿ ಕ್ಷೇತ್ರದಲ್ಲಿ ರಚನಾ ಬ್ಯಾನರ್ಜಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಉಪೇಂದ್ರ ಅಭಿನಯದ ತೆಲುಗು ಚಿತ್ರದಲ್ಲೂ ರಚನಾ ನಾಯಕಿಯಾಗಿದ್ದರು. ಮೆಘಾಸ್ಟಾರ್ ಚಿರಂಜೀವಿ ಸೇರಿದಂತೆ ಹಲವು ತೆಲುಗು ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಬಾಲಿವುಡ್‌ನಲ್ಲೂ ರಚನಾ ಮೋಡಿ ಮಾಡಿದ್ದರು. ಅಭಿಷೇಕ್ ಬಚ್ಚನ್ ಅಭಿನಯದ ಸೂರ್ಯವಂಶ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ: Modi Cabinet: ರಾಜ್ಯದ ಈ ಮೂವರು ಸಂಸದರಿಗೆ ಮೋದಿ ಸಂಪುಟದಲ್ಲಿ ಸ್ಥಾನ ?!