Modi Cabinet: ರಾಜ್ಯದ ಈ ಮೂವರು ಸಂಸದರಿಗೆ ಮೋದಿ ಸಂಪುಟದಲ್ಲಿ ಸ್ಥಾನ ?!

Modi Cabinet: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಂದ ಬಳಿಕ ಬಿಜೆಪಿ ತನ್ನ NDA ಮಿತ್ರಪಕ್ಷಗಳೊಂದಿಗೆ ಸಭೆ ನಡೆಸಿ, ಬೆಂಬಲ ಪಡೆದು ಸರ್ಕಾರ ರಚನೆಗೆ ಮುಂದಾಗಿದೆ. ಜೂ. 8 ಕ್ಕೆ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ಮೋದಿ ಸಂಪುಟದಲ್ಲಿ(Modi Cabinet) ಯಾರೆಲ್ಲಾ ಸಚಿವರಾಗಲಿದ್ದಾರೆ? ಎಂಬ ಚರ್ಚೆ ಶುರುವಾಗಿದೆ. ಅಂತೆಯೇ ಕರ್ನಾಟಕದಿಂದ(Karnataka) ಯಾವ ಸಂಸದರಿಗೆ ಸಚಿವ ಪಟ್ಟ ಒಲಿಯುತ್ತದೆ ಎಂಬುದು ತೀವ್ರ ಕುತೂಹಲವಾಗಿದೆ.

ಬಿಜೆಪಿಗೆ ದಕ್ಷಿಣ ಭಾರತದಿಂದ(South India) ಅತಿ ಹೆಚ್ಚು ಸಂಸದರನ್ನು ನೀಡಿದ ಹೆಗ್ಗಳಿಕೆ ಕರ್ನಾಟಕಕ್ಕಿದೆ. ಮುಂದಿನ ಕೇಂದ್ರ ಸಚಿವ ಸಂಪುಟಕ್ಕೆ ಕರ್ನಾಟಕದಿಂದ ಕನಿಷ್ಠ ಮೂವರು ಸಂಸದರು ಸ್ಥಾನ ಪಡೆಯುವ ಸಾಧ್ಯತೆಯಿದ್ದು ಮುಂದಿನ ಸಚಿವ ಸಂಪುಟದಲ್ಲಿ ಮೈತ್ರಿಕೂಟದ ಪಾಲುದಾರರಿಗೆ ಅವಕಾಶ ಕಲ್ಪಿಸುವ ಹರ ಸಾಹಸದಲ್ಲಿ ಬಿಜೆಪಿ ವರಿಷ್ಠರು ನಿರತರಾಗಿದ್ದರೂ ಕರ್ನಾಟಕಕ್ಕೆ ಉತ್ತಮ ಪಾಲು ಸಿಗುವ ಎಲ್ಲಾ ಲಕ್ಷಣಗಳು ಇವೆ ಎನ್ನಲಾಗಿದೆ.

ಇದನ್ನೂ ಓದಿ: ದ.ಕ; ಪಟಾಕಿ ಸಿಡಿಸಿ ಸಂಭ್ರಮಿಸಿದ ಬಜರಂಗದಳ ಕಾರ್ಯಕರ್ತನ ಮೇಲೆ ಕಾಂಗ್ರೆಸ್‌ ಕಾರ್ಯಕರ್ತನಿಂದ ಹಲ್ಲೆ ಆರೋಪ

ಕರ್ನಾಟಕದಿಂದ ಯಾರಾಗಬಹದು ಸಚಿವರು?
* ಮೋದಿ 2.0 ಸರ್ಕಾರದಲ್ಲಿ, ಕರ್ನಾಟಕದಿಂದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ಎ ನಾರಾಯಣಸ್ವಾಮಿ ಭಗವಂತ ಖೂಬಾ ಹಾಗೂ ನಾರಾಯಣಸ್ವಾಮಿ ಸೇರಿ ಒಟ್ಟು 4 ಮಂದಿ ಸಚಿವರಾಗಿದ್ದರು. ಇದರಲ್ಲಿ ಖೂಬ ಸೋತಿದ್ದಾರೆ. ಅನುಭವಿ ಹಾಗೂ ಮೋದಿಯವರ ಪರಮಾಪ್ತ ಪ್ರಹಲ್ಲಾದ್ ಜೋಶಿ(Prahalad Joshi) ಈ ಬಾರಿಯೂ ಸಂಪುಟಕ್ಕೆ ಸೇರುತ್ತಾರೆ ಎಂಬ ನಿರೀಕ್ಷೆ ರಾಜ್ಯ ಬಿಜೆಪಿ ನಾಯಕರಲ್ಲಿದೆ.

* ಲಿಂಗಾಯತ ನಾಯಕರೊಬ್ಬರು ಸಚಿವರಾಗುವ ನಿರೀಕ್ಷೆಯಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಬಿಎಸ್ ಯಡಿಯೂರಪ್ಪ(B S Yadiyurappa) ಅವರ ಪುತ್ರ ಬಿವೈ ರಾಘವೇಂದ್ರ(B Y Raghavendra) ಅವರ ಸಹೋದರ ಕರ್ನಾಟಕ ಬಿಜೆಪಿಯ ನೇತೃತ್ವ ವಹಿಸಿರುವುದರಿಂದ ಅವರಿಗೆ ಕ್ಯಾಬಿನೆಟ್ ಸ್ಥಾನ ಸಿಗುವ ಸಾಧ್ಯತೆ ಇಲ್ಲ ಎಂದು ಪಕ್ಷದ ಒಳಗಿನವರು ಹೇಳಿದ್ದಾರೆ. ಜೊತೆಗೆ ಮಾಜಿ ಸಿಎಂಗಳಾದ ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಸೇರಿದಂತೆ ಇಬ್ಬರು ದೊಡ್ಡ ನಾಯಕರಿಗೂ ಅವಕಾಶ ದೊರಕಬಹುದು.

* ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಜೆಡಿಎಸ್, ತಾನು ಸ್ಪರ್ಧಿಸಿದ್ದ ಮೂರು ಸ್ಥಾನಗಳಲ್ಲಿ ಎರಡನ್ನು ಗೆದ್ದುಕೊಂಡಿದೆ. ಕುಮಾರಸ್ವಾಮಿ(H D Kumarswamy)ಕೂಡ ಸಚಿವ ಸಂಪುಟದ ಭಾಗವಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿ ಅವರ ಭಾವ ಡಾ.ಸಿ.ಎನ್.ಮಂಜುನಾಥ್(Dr C N Manjunath) ಹೆಸರೂ ಸದ್ದು ಮಾಡುತ್ತಿದೆ. ಚುನಾವಣೆ ಮುಂಚಿತವಾಗಿಯೇ ಈ ಇಬ್ಬರು ನಾಯಕರು ಗೆದ್ದರೆ ಮೋದಿ ಸಂಪುಟದಲ್ಲಿ ಇರುತ್ತಾರೆ ಎನ್ನಲಾಗಿತ್ತು.

ಇಷ್ಟಾದರೂ ಸಮ್ಮಿಶ್ರ ಸರಕಾರ ರಚನೆಯಾಗುತ್ತಿರುವ ಹಿನ್ನೆಲೆಯಲ್ಲಿ ಯಾರಿಗೆ ಮಂತ್ರಿ ಪಟ್ಟ ಒಲಿಯುತ್ತದೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: Congress Guarantees : ಚುನಾವಣೆ ಮುಗಿಯುತ್ತಿದ್ದಂತೆ ಗ್ಯಾರಂಟಿ ರದ್ಧು ಮಾಡಲು ಶಾಸಕರಿಂದಲೇ ಒತ್ತಾಯ – ಸಿದ್ದರಾಮಯ್ಯ ಹೇಳಿದ್ದೇನು?!

Leave A Reply

Your email address will not be published.