Home Karnataka State Politics Updates ಯಡಿಯೂರಪ್ಪ ಸ್ವ ಕ್ಷೇತ್ರ ಶಿಕಾರಿಪುರದಲ್ಲಿ ಬಿ ವೈ ವಿಜಯೇಂದ್ರಗೆ ಭಾರೀ ವಿರೋಧ ಪ್ರತಿಭಟನೆ ಬಿಸಿ: ತಾಂಡಾ...

ಯಡಿಯೂರಪ್ಪ ಸ್ವ ಕ್ಷೇತ್ರ ಶಿಕಾರಿಪುರದಲ್ಲಿ ಬಿ ವೈ ವಿಜಯೇಂದ್ರಗೆ ಭಾರೀ ವಿರೋಧ ಪ್ರತಿಭಟನೆ ಬಿಸಿ: ತಾಂಡಾ ಸಮುದಾಯದವರಿಂದ ತೀವ್ರ ವಿರೋಧ

Yediyurappa

Hindu neighbor gifts plot of land

Hindu neighbour gifts land to Muslim journalist

Protects from Tanda community: ಹಿಂದೆ ತಮ್ಮ ಅಪ್ಪ ಯಡಿಯೂರಪ್ಪ ಮತ್ತೀಗ ತಾವು ಪ್ರತಿನಿಧಿಸುತ್ತಿರುವ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದ ತರಲಘಟ್ಟ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಬಿ ವೈ ವಿಜಯೇಂದ್ರ ಅವರಿಗೆ ಅಲ್ಲಿನ ಬಂಜಾರ ( ತಾಂಡಾ) ಸಮುದಾಯದವರ ಭಾರೀ ಪ್ರತಿಭಟನೆ (Protects from Tanda community) ಬಿಸಿ ಸಿಕ್ಕಿದೆ.

ಬಂಜಾರ ಸಮುದಾಯದವರು ಈ ಹಿಂದೆ ಕೂಡಾ ಶಿವಮೊಗ್ಗದ ಬಿ ಎಸ್ ಯಡಿಯೂರಪ್ಪ ನಿವಾಸಕ್ಕೆ ನುಗ್ಗಲು ಪ್ರಯತ್ನಿಸಿ ಕಲ್ಲು ತೂರಾಟ ನಡೆಸಿದ್ದರು. ಆಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಶಾಂತಗೊಳಿಸಲಾಗಿತ್ತು. ಇದೀಗ ಇಂದು ಮತ್ತೆ ಬಿಜೆಪಿ ಸರ್ಕಾರ ಇತ್ತೀಚೆಗೆ ತಂದಿರುವ ಒಳ ಮೀಸಲಾತಿ ನೀತಿ ವಿರೋಧಿಸಿ ಬಿಜೆಪಿ ಸರ್ಕಾರದ ವಿರುದ್ಧ ಅವರು ಘೋಷಣೆಯನ್ನು ಕೂಗಿದ್ದಾರೆ.

ಶಿಕಾರಿಪುರದ ತರಲಘಟ್ಟ ಗ್ರಾಮದಲ್ಲಿ ಇಂದು ತಾಂಡಾ ಸಮುದಾಯದವರಿಂದ ವಿಜಯೇಂದ್ರ ಅವರಿಗೆ ವಿರೋಧ ವ್ಯಕ್ತವಾಗಿದೆ.