Home Karnataka State Politics Updates Mysore: ಅಮಿತ್ ಶಾರನ್ನು ಸ್ವಾಗತಮಾಡುವಾಗ ಹಿಗ್ಗಾಮುಗ್ಗ ಕಿತ್ತಾಡಿಕೊಂಡ ಪ್ರೀತಮ್ ಗೌಡ – ಪ್ರತಾಪ್ ಸಿಂಹ!!

Mysore: ಅಮಿತ್ ಶಾರನ್ನು ಸ್ವಾಗತಮಾಡುವಾಗ ಹಿಗ್ಗಾಮುಗ್ಗ ಕಿತ್ತಾಡಿಕೊಂಡ ಪ್ರೀತಮ್ ಗೌಡ – ಪ್ರತಾಪ್ ಸಿಂಹ!!

Hindu neighbor gifts plot of land

Hindu neighbour gifts land to Muslim journalist

Mysore: ಮೈಸೂರು ಏರ್ ಪೋರ್ಟ್ ನಲ್ಲಿ ಸಂಸದ ಪ್ರತಾಪ್ ಸಿಂಹ(PrathapSimha) ಹಾಗೂ ಮಾಜಿ ಶಾಸಕ ಪ್ರೀತಮ್ ಗೌಡ(Preetham Gowda) ಪರಸ್ಪರ ಕಿತ್ತಾಡಿಕೊಂಡ ಪ್ರಸಂಗ ನಡೆದಿದೆ.

 

ಹೌದು, ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಆಗಮನದ ವೇಳೆ ಸ್ವಾಗತ ಮಾಡಲು ಮೈಸೂರಿನ(Mysore)ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮೈಸೂರು – ಕೊಡಗು ಸಂಸದ ಪ್ರತಾಪ್‌ ಸಿಂಹ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ.

 

ಅಂದಹಾಗೆ ಕೇಂದ್ರ ಗೃಹ ಸಚಿವರ ಸ್ವಾಗತಕ್ಕೆ ಲೈನಪ್ ಬಗ್ಗೆ ಸೂಚನೆ, ಪೊಲೀಸರ ಅನುಮತಿಯನ್ವಯ ನಿಲ್ಲುವಂತೆ ಮನವಿ ವೇಳೆ ಮಾಜಿ ಶಾಸಕ ಪ್ರೀತಮ್ ಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಪ್ರತಾಪ್ ಸಿಂಹ ಇದೆಲ್ಲವನ್ನೂ ಹಾಸನದಲ್ಲಿ ಇಟ್ಕೋ, ನಮ್ಮಲ್ಲಿ ನಡೆಯಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪ್ರೀತಂ ಗೌಡ ಸುಮ್ಮನಾಗದೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಇಬ್ಬರ ನಡುವಿನ ಮಾತಿನ ಚಕಮಕಿಯನ್ನು ಸ್ಥಳೀಯ ನಾಯಕರು ಸುಮ್ಮನಾಗಿಸಿದ್ದಾರೆ.