Home Karnataka State Politics Updates K S Eshwarappa: ಈಶ್ವರಪ್ಪ ಪ್ರತ್ಯೇಕ ಸ್ಪರ್ಧೆ ಕುರಿತು ಕೇಂದ್ರ ನಾಯಕರಿಂದ ಮೊದಲ ಪ್ರತಿಕ್ರಿಯೆ ಹೀಗಿತ್ತು...

K S Eshwarappa: ಈಶ್ವರಪ್ಪ ಪ್ರತ್ಯೇಕ ಸ್ಪರ್ಧೆ ಕುರಿತು ಕೇಂದ್ರ ನಾಯಕರಿಂದ ಮೊದಲ ಪ್ರತಿಕ್ರಿಯೆ ಹೀಗಿತ್ತು !!

K S Eshwarappa

Hindu neighbor gifts plot of land

Hindu neighbour gifts land to Muslim journalist

K S Eshwarappa: ತಮ್ಮ ಮಗ ಕಾಂತೇಶ್ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪನವರು(KS Eshwarappa) ಶಿವಮೊಗ್ಗದಿಂದ ಪಕ್ಷೇತರ ಸ್ಪರ್ಧೆಗಿಳಿಯುತ್ತೇನೆಂದು ಮುಂದಾಗಿದ್ದಾರೆ. ಇದೀಗ ಈ ಬಗ್ಗೆ ಕೇಂದ್ರ ನಾಯಕರು ಮೊದಲ ರಿಯಾಕ್ಷನ್ ನೀಡಿದ್ದಾರೆ.

ಇದನ್ನೂ ಓದಿ: Basavaraj Bommai: ಬಿ ಸಿ ಪಾಟೀಲ್ ಕಾಲಿಗೆ ಬೀಳಲು ಹೋದ ಬೊಮ್ಮಾಯಿ – ಅರೆ ಇದೇನಿದು ಮಾಜಿ ಸಿಎಂ ವಿಚಿತ್ರ ನಡೆ ?!

ಹೌದು, ಕೇಂದ್ರ ನಾಯಕ ಹಾಗೂ ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಷಿಯವರು(Prahalad joshi) ಪ್ರತಿಕ್ರಿಯಿಸಿ ಲೋಕಸಭೆ ಟಿಕೆಟ್ ಸಿಗದಿದ್ದರಿಂದ ಈಶ್ವರಪ್ಪ ಅವರಿಗೆ ಬೇಸರ ಆಗಿರಬಹುದು ಅವರ ಮನವೊಲಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ. ಟಿಕೇಟ್ ಸಿಗದೇ ಇದ್ದಾಗ ಸಹಜವಾಗಿಯೇ ಎಲ್ಲರಿಗೂ ಬೇಸರ ಆಗುತ್ತದೆ. ಹಾಗಾಗಿ ಪರ-ವಿರೋಧ ಅಭಿಪ್ರಾಯ ಸಾಮಾನ್ಯವಾಗಿರುತ್ತದೆ. ಆದರೆ, ಪಕ್ಷದ ಹೈಕಮಾಂಡ್ ಅದೆಲ್ಲವನ್ನು ಸರಿಪಡಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Lok Sabha Election 2024: ಲೋಕಸಭೆ ಚುನಾವಣೆ 2024; ದಿನಾಂಕ, ವೇಳಾಪಟ್ಟಿ ಇಂದು ಘೋಷಣೆ ಕುರಿತು ಆಯೋಗದ ಸುದ್ದಿಗೋಷ್ಠಿಯ ನೇರ ಪ್ರಸಾರ ನೋಡಲು ಇಲ್ಲಿದೆ ಲಿಂಕ್‌

ಅಲ್ಲದೆ ಈಶ್ವರಪ್ಪ ಅವರು ಅತ್ಯಂತ ಹಿರಿಯ ನಾಯಕರು. ನನಗಿಂತ ಮೊದಲೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇದ್ದವರು. ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಅನ್ಯ ಯೋಚನೆ ಮಾಡಲಾರರು ಎಂದು ಜೋಶಿ ಹೇಳಿದರು. ಈಶ್ವರಪ್ಪ ಅವರನ್ನು ಸದ್ಯದಲ್ಲೇ ನಾನೂ ಭೇಟಿ ಮಾಡಿ ಮಾತನಾಡುವೆ. ಅವರ ಮನವೊಲಿಸುವ ವಿಶ್ವಾಸವಿದೆ ಎಂದರು.