Home Karnataka State Politics Updates Droupadi murmu: ರಾಷ್ಟ್ರಪತಿ ಅಭ್ಯರ್ಥಿ ಎಂದು ತಿಳಿಸಲು ಎಷ್ಟು ಫೋನ್ ಮಾಡಿದ್ರೂ; ಫೋನ್ ಎತ್ತದೆ ಪಜೀತಿ...

Droupadi murmu: ರಾಷ್ಟ್ರಪತಿ ಅಭ್ಯರ್ಥಿ ಎಂದು ತಿಳಿಸಲು ಎಷ್ಟು ಫೋನ್ ಮಾಡಿದ್ರೂ; ಫೋನ್ ಎತ್ತದೆ ಪಜೀತಿ ತಂದಿದ್ರು ದ್ರೌಪದಿ ಮುರ್ಮು..! ನಂತರ ಏನಾಯ್ತು?

Droupadi murmu
Image source- Hindustan Times

Hindu neighbor gifts plot of land

Hindu neighbour gifts land to Muslim journalist

Droupadi murmu: ಭಾರತದ ಮುಂದಿನ ರಾಷ್ಟ್ರಪತಿಯಾಗಲು(Indian president) ಎನ್‌ಡಿಎ(NDA) ಅಭ್ಯರ್ಥಿಯಾಗಿ ನೀವು ನಾಮ ಪತ್ರ ಸಲ್ಲಿಸಬೇಕೆಂದು ದ್ರೌಪದಿ ಮುರ್ಮು(Droupadi murmu) ಅವರಿಗೆ ಪ್ರಧಾನಿ ಕಛೇರಿಯಿಂದ ಕರೆಮಾಡಿದಾಗ, ಮುರ್ಮು ಅವರು ಫೋನ್ ಎತ್ತದೆ ಭಾರೀ ಪಜೀತಿ ಉಂಟುಮಾಡಿದ್ರು. ನಂತರ ಏನಾಯ್ತು ಗೊತ್ತಾ?

ಹೌದು, ರಾಷ್ಟ್ರಪತಿ ಹುದ್ದೆಗೆ ನಡೆದ ಚುನಾವಣೆಯಲ್ಲಿ(President election) ಎನ್‌ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವಂತೆ ಮಾಹಿತಿ ನೀಡಲು ಮಾಡಿದ್ದ ಕರೆಯನ್ನು ದ್ರೌಪದಿ ಮುರ್ಮು ಅವರು ಸ್ವೀಕರಿಸಿರಲಿಲ್ಲ. ಕೊನೆಗೆ, ಪ್ರಧಾನ ಮಂತ್ರಿ ಕಚೇರಿಯಿಂದ(PM Office) ಕರೆ ಬಂದಿದ್ದನ್ನು ಅವರ ಮಾಜಿ ವಿಶೇಷ ಕರ್ತವ್ಯ ಅಧಿಕಾರಿಯೇ ಖುದ್ದಾಗಿ ಹೋಗಿ ತಿಳಿಸಿದ್ದರು.

ಅದು 2022ರ ಜೂನ್ 21. ಸಾಮಾನ್ಯವಾಗಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಹುದ್ದೆಗೇರುವುದಕ್ಕೂ ಮುನ್ನ ಹೆಚ್ಚಾಗಿ ಮೊಬೈಲ್ ಬಳಸುತ್ತಿರಲಿಲ್ಲ. ಮುರ್ಮು ಅವರು ಒಡಿಶಾ(Odisha) ರಾಜಧಾನಿ ಭುವನೇಶ್ವರ(Bhuvaneshwara)ದಿಂದ 275 ಕಿ.ಮೀ. ದೂರದಲ್ಲಿರುವ ರಾಯರಂಗಪುರ(Rayarangapura) ದಲ್ಲಿದ್ದರು. ಬಿಜೆಪಿಯು ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯನ್ನು ಘೋಷಿಸಬೇಕಿತ್ತು. ಎಲ್ಲರೂ ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದರು. ವಿದ್ಯುತ್‌ ನಿಲುಗಡೆ ಕಾರಣ ಮುರ್ಮು ಹಾಗೂ ಅವರ ಕುಟುಂಬ ಸದಸ್ಯರು ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಸುದ್ದಿ ನೋಡಲು ಆಗಿರಲಿಲ್ಲ. ಅಲ್ಲದೆ ತಮ್ಮನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಲಾಗುತ್ತದೆ ಎಂದುಕೊಂಡಿರಲಿಲ್ಲ. ಆದರೆ, ಕೆಲವೇ ಹೊತ್ತಿನಲ್ಲಿ ಎಲ್ಲಾ ಸುದ್ದಿವಾಹಿನಿಗಳಲ್ಲಿ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಿದ್ದ ಸುದ್ದಿ ಬಿತ್ತರವಾಗಿತ್ತು’.

ಈ ವಿಚಾರವನ್ನು ಅಂದರೆ ಬಿಜೆಪಿ(BJP) ಮೈತ್ರೀ ಕೂಟದ ವತಿಯಿಂದ ರಾಷ್ಟ್ರಪತಿ ಅಭ್ಯರ್ಥಿ ನೀವೇ ಎಂದು ಮುರ್ಮು ಅವರಿಗೆ ತಿಳಿಸಲು ಪ್ರಧಾನ ಮಂತ್ರಿ ಕಛೇರಿಯಿಂದ ಕರೆ ಮಾಡಲಾಗಿದೆ. ಆದರೆ ಎಷ್ಟು ಕರೆಮಾಡಿದರೂ ಮುರ್ಮು ಅವರು ಕರೆ ಸ್ವೀಕರಿಸಿಲ್ಲ. ಮುರ್ಮು ಅವರು ಕರೆಯನ್ನು ಸ್ವೀಕರಿಸದಿದ್ದಾಗ, ರಾಯರಂಗಪುರದಲ್ಲಿ ಔಷಧ ಅಂಗಡಿ(Medical store) ನಡೆಸುತ್ತಿದ್ದ ಅವರ ಮಾಜಿ ವಿಶೇಷ ಕರ್ತವ್ಯ ಅಧಿಕಾರಿಯೇ ಆಗಿದ್ದ ಮೊಹಂತೊ ಅವರಿಗೆ ಪಿಎ ಕಛೇಯಿಂದ ಕರೆ ಮಾಡಲಾಯಿತು. ಕೊನೆಗೆ ವಿಷಯವನ್ನು ಗ್ರಹಿಸಿದ ಅವರು ಗಡಿಬಿಡಿಯಿಂದ ಅಂಗಡಿಯನ್ನು ಬಂದ್ ಮಾಡಿ, ಮೊಬೈಲ್‌ ಫೋನ್‌ನೊಂದಿಗೆ ಮುರ್ಮು ಅವರ ನಿವಾಸದತ್ತ ಓಡಿಬಂದು, ಇಡೀ ವಿಷಯವನ್ನು ತಿಳಿಸಿದರು’

ಅಂದಹಾಗೆ ಈ ಕುತೂಹಲಕಾರಿ ಘಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜೀವನಚರಿತ್ರೆ ‘ದ್ರೌಪದಿ ಮುರ್ಮು: ಫ್ರಂ ಟ್ರೈಬಲ್ ಹಿಂಟರ್‌ಲ್ಯಾಂಡ್ಸ್‌ ಟು ರೈಸಿನಾ ಹಿಲ್’ ಕೃತಿಯಲ್ಲಿ ದಾಖಲಿಸಲಾಗಿದೆ. ಪತ್ರಕರ್ತ ಕಸ್ತೂರಿ ರೇ ಅವರು ಬರೆದಿರುವ ಈ ಕೃತಿಯನ್ನು ರೂಪ ಪಬ್ಲಿಕೇಷನ್ಸ್‌ ಪ್ರಕಟಿಸಿದೆ.