Home Karnataka State Politics Updates CM Siddaramaiah: ಸರ್ಕಾರಕ್ಕೆ ಹೊಸ ತಲೆನೋವು: ಸಿದ್ರಾಮಯ್ಯ ಸಾಲ ಮನ್ನಾ ಅಂದಿದ್ರು, ನಾವ್ ದುಡ್ಡು ಕಟ್ಟಲ್ಲ-ಬ್ಯಾಂಕ್...

CM Siddaramaiah: ಸರ್ಕಾರಕ್ಕೆ ಹೊಸ ತಲೆನೋವು: ಸಿದ್ರಾಮಯ್ಯ ಸಾಲ ಮನ್ನಾ ಅಂದಿದ್ರು, ನಾವ್ ದುಡ್ಡು ಕಟ್ಟಲ್ಲ-ಬ್ಯಾಂಕ್ ಸಿಬ್ಬಂದಿಗೆ ಸ್ತ್ರಿಶಕ್ತಿ ಮಹಿಳೆಯರಿಂದ ಘೇರಾವ್ !

CM Siddaramaiah
image source: public tv

Hindu neighbor gifts plot of land

Hindu neighbour gifts land to Muslim journalist

CM Siddaramaiah: ರಾಜ್ಯ ಕಾಂಗ್ರೆಸ್ ಸರ್ಕಾರ (Karnataka Government) ಜನರಿಗೆ ನೀಡಿದ್ದ 5 ಗ್ಯಾರಂಟಿ ಭರವಸೆಗಳನ್ನು ಅರಮರ್ಧ ಜಾರಿಗೆ ತರಲೂ ಕಾಂಗ್ರೆಸ್ ಹೆಣಗಾಡುತ್ತಿದೆ. ಅದಕ್ಕೆ ಹಾಕಿರುವ ನಾನಾ ಷರತ್ತುಗಳು ಜನರನ್ನು ಕೆರಳಿಸಿದೆ. ಈ ನಡುವೆ ನೂತನ ಸರ್ಕಾರಕ್ಕೆ ಮತ್ತೊಂದು ಹೊಸ ತಲೆನೋವು ಶುರುವಾಗಿದೆ. ಅದು ಕೂಡಾ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯ (Siddaramaiah) ಅವತ್ತು ಜನರಿಗೆ ನೀಡಿದ ವಾಗ್ದಾನ.

ಚುನಾವಣೆ ಎದುರಿಸುವ ಸಂದರ್ಭದಲ್ಲಿ ನೀಡಿದ್ದ ಗ್ಯಾರಂಟಿಗಳ (Congress Guarantee) ಜೊತೆಗೆ ಮಹಿಳೆಯರಿಗೆ ಸಿದ್ದರಾಮಯ್ಯ (CM Siddaramaiah) ನೀಡಿದ್ದ ಮತ್ತೊಂದು ಭರವಸೆಯನ್ನು ಮಹಿಳೆಯರು ಈಗ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಸರ್ಕಾರ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಶ್ವಾಸನೆ ಕೊಟ್ಟಿದ್ದರು
ಈಗ ಸಿಎಂ ಅವರ ಅದೇ ಹೇಳಿಕೆ ಕೋಲಾರ ಡಿಸಿಸಿ ಬ್ಯಾಂಕ್ ಸಿಬ್ಬಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಂದ ಸಾಲ ವಸೂಲಿ ಮಾಡಲು ಹೋದಾಗ ಮಹಿಳೆಯರೆಲ್ಲರೂ ತಿರುಗಿ ಬಿದ್ದಿದ್ದಾರೆ.
ಮಹಿಳೆಯರ ಮನವೊಲಿಕೆಗೆ ಬ್ಯಾಂಕ್ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಗ್ಯಾರಂಟಿ ಯೋಜನೆಗಳ ಬಳಿಕ ಈಗ ಸಾಲಮನ್ನಾ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಲಿದೆಯೇ ಕಾದು ನೋಡಬೇಕು

ಐದು ಲಕ್ಷದವರೆಗಿನ ಬಡ್ಡಿ ರಹಿತವಾಗಿ ನೀಡಿದ ಸಾಲವನ್ನು ಮನ್ನಾ ಮಾಡುವುದಾಗಿ ಸಿದ್ದರಾಮಯ್ಯ ಮೊದಲು ಕೋಲಾರದಲ್ಲಿ ಘೋಷಣೆ ಮಾಡಿದ್ದರು. ಅಷ್ಟೇ ಅಲ್ಲದೆ, ಈಗಿರುವ ಸಾಲದ ಮೊತ್ತವನ್ನು ಹೆಚ್ಚಿಸಿ, ಮಹಿಳಾ ಸ್ವಸಹಾಯ ಗುಂಪುಗಳಿಗೆ 1 ಲಕ್ಷ ರೂ. ನಷ್ಟು ಏರಿಕೆ ಮಾಡುವುದಾಗಿ ಭರವಸೆ ನೀಡಿದ್ದರು. ಗ್ಯಾರಂಟಿ ಮತ್ತು ಭರವಸೆಗಳನ್ನು ನಂಬಿ ಅದರ ಆಸೆಯಿಂದ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಎನ್ನುವುದನ್ನು ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ಇವತ್ತು ನಂಬಿಕೊಂಡಿದೆ. ಮಹಿಳೆಯರ ಅದೃಷ್ಟಕ್ಕೆ ಸಿದ್ದರಾಮಯ್ಯನವರೇ ಸಿಎಂ ಆಗಿದ್ದಾರೆ. ಈಗ ಇದೇ ಕಾರಣ ನೀಡಿ ಮಹಿಳೆಯರು ಸಾಲ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಗ್ಯಾರಂಟಿಗಳಿಗೆ ದುಡ್ಡು ಹೊಂಚಲು ಕಷ್ಟಪಡುವ ಕಾಂಗ್ರೆಸ್ ಗೆ ಇದೀಗ ಹೊಸ ತಲೆನೋವು ಶುರುವಾಗಿದ್ದು, ಸರ್ಕಾರ ನಿಧಾನವಾಗಿ ವಚನಭೃಷ್ಟತೆಯತ್ತ ಮುಖಮಾಡುತ್ತಿದೆಯಾ ಎನ್ನುವ ಮಾತು ಕೇಳಿಬರುತ್ತಿದೆ.

 

ಇದನ್ನು ಓದಿ: Miss World pageant: 27ವರ್ಷಗಳ ನಂತರ ಭಾರತದಲ್ಲಿ ನಡೆಯಲಿದೆ ಮಿಸ್‌ವರ್ಲ್ಡ್‌ ಕಾಂಪಿಟೇಶನ್‌!