Home Karnataka State Politics Updates DV Sadananda Gowda: ಬಿಜೆಪಿಗೆ ಮತ್ತೊಂದು ಭಾರೀ ದೊಡ್ಡ ಆಘಾತ!! ಪಕ್ಷದಿಂದ ಮಾಜಿ ಸಿ ಎಂ...

DV Sadananda Gowda: ಬಿಜೆಪಿಗೆ ಮತ್ತೊಂದು ಭಾರೀ ದೊಡ್ಡ ಆಘಾತ!! ಪಕ್ಷದಿಂದ ಮಾಜಿ ಸಿ ಎಂ ಔಟ್ ?!

DV Sadananda Gowda
Image source: The statesman

Hindu neighbor gifts plot of land

Hindu neighbour gifts land to Muslim journalist

DV Sadananda Gowda : ಈ ಬಾರಿ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಸರ್ಕಾರದ ಆಳ್ವಿಕೆ ನಂತರ ಬಿಜೆಪಿ ಪಕ್ಷದಲ್ಲಿ ಹಲವಾರು ಗೊಂದಲಗಳು, ಭಿನ್ನಾಭಿಪ್ರಾಯ ಗಳು, ರಾಜೀನಾಮೆಗಳು, ಪಕ್ಷ ಬದಲಾವಣೆ ಬೆಳಕಿಗೆ ಬರುತ್ತಿದೆ. ಅಂತೆಯೇ ಇದೀಗ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಡಿ.ವಿ. ಸದಾನಂದ ಗೌಡರು(DV Sadananda Gowda), ರಾಜ್ಯಾಧ್ಯಕ್ಷರ ಆಯ್ಕೆಯಾದ ಬಳಿಕ ನನ್ನ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದು ಕುತೂಹಲದ ಹೇಳಿಕೆ ನೀಡಿದ್ದಾರೆ.

ಡಿ.ವಿ. ಸದಾನಂದ ಗೌಡರ ಪ್ರಕಾರ, ಬಿಜೆಪಿ ನನಗೆ ಎಲ್ಲವನ್ನು ನೀಡಿದೆ. ನಾನು ಪಕ್ಷಕ್ಕೆ ಏನು ನೀಡಬೇಕೆಂಬುದನ್ನು ನೋಡಬೇಕಿದೆ. ಆದ್ದರಿಂದ ನನ್ನ ಮುಂದಿನ ನಿರ್ಧಾರ ಏನು ಎಂದು ಈಗಲೇ ಹೇಳುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಆಗುತ್ತಿದ್ದಂತೆಯೇ ಪತ್ರಿಕಾಗೋಷ್ಠಿ ಕರೆದು ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ನನಗೂ ಹಳೆ ಮೈಸೂರು ಸೇರಿ ರಾಜ್ಯಾದ್ಯಂತ ಹಿತೈಷಿಗಳು, ಅಭಿಮಾನಿಗಳು ಇದ್ದಾರೆ ಎಂದು ಭಾವಿಸುವೆ. ಪಕ್ಷದ ಹೊಸ ರಾಜ್ಯಾಧ್ಯಕ್ಷರ ನೇಮಕವಾಗುತ್ತಿದ್ದಂತೆ ನನ್ನ ಅಭಿಪ್ರಾಯ ತಿಳಿಸುತ್ತೇನೆ. ಈಗಲೇ ನಿರ್ಧಾರ ಹೇಳಿ ಪಕ್ಷಕ್ಕೆ ಮುಜುಗರ ಉಂಟುಮಾಡುವುದಿಲ್ಲ. ಆ ನಿರ್ಧಾರ ಏನೆಂಬುದನ್ನು ಈಗಲೇ ಹೇಳಲಾರೆ ಎಂದು ತಿಳಿಸಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷ ತೊರೆಯುವ ಸಾಧ್ಯತೆ ಇದೆ ಎಂದೆಲ್ಲಾ ರಾಜಕೀಯ ವಲಯದಲ್ಲಿ ಚರ್ಚೆಯಾಗಿದೆ ಎನ್ನಲಾಗುತ್ತಿದ್ದು, ಸದಾನಂದಗೌಡ ಅವರು ನೀಡಿರುವ ಹೇಳಿಕೆ ಪಕ್ಷದವರಲ್ಲಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: Bengaluru Bandh: ಬೆಂಗಳೂರು ಬಂದ್ ಗೆ ಹೊಸ ಟ್ವಿಸ್ಟ್! ಸಾರಿಗೆ ಸಚಿವರ ಮಾಸ್ಟರ್ ಪ್ಲಾನ್ ರೆಡಿ, ಯಾವ ಪ್ಲಾನ್ ಗೊತ್ತಾ?