Home Karnataka State Politics Updates JP Nadda: ಕೆಲವೇ ದಿನಗಳ ಹಿಂದೆ ರಾಜ್ಯಸಭೆಗೆ ಆಯ್ಕೆಯಾಗಿದ್ದ ಜೆಪಿ ನಡ್ಡಾ ಸಂಸದ ಸ್ಥಾನಕ್ಕೆ ದಿಢೀರ್...

JP Nadda: ಕೆಲವೇ ದಿನಗಳ ಹಿಂದೆ ರಾಜ್ಯಸಭೆಗೆ ಆಯ್ಕೆಯಾಗಿದ್ದ ಜೆಪಿ ನಡ್ಡಾ ಸಂಸದ ಸ್ಥಾನಕ್ಕೆ ದಿಢೀರ್ ರಾಜೀನಾಮೆ !! ಅಚ್ಚರಿ ಮೂಡಿಸಿದ ಬಿಜೆಪಿ ಅಧ್ಯಕ್ಷರ ನಡೆ

JP Nadda

Hindu neighbor gifts plot of land

Hindu neighbour gifts land to Muslim journalist

JP Nadda: ಕೆಲವೇ ದಿನಗಳ ಹಿಂದಷ್ಟೇ ಗುಜರಾತ್ ನಿಂದ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ(J P Nadda) ಇದೀಗ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯ ಈ ರಾಜೀನಾಮೆ ವಿಚಾರ ಭಾರಿ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ: Trhipura: ಮಗನ ಶವದೊಂದಿಗೇ ತಾಯಿಯ ವಾಸ, ಅನುಮಾನಗೊಂಡು ಬಾಗಿಲು ಒಡೆದಾಗ ಬಯಲಾಯ್ತು ಬೆಚ್ಚಿಬೀಳೋ ಸಂಗತಿ !!

ಹೌದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ತಮ್ಮ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯನ್ನು ರಾಜ್ಯಸಭಾ ಅಧ್ಯಕ್ಷರು ಅಂಗೀಕರಿಸಿದ್ದಾರೆ. ಅಲ್ಲದೆ ಲೋಕಸಭಾ ಚುನಾವಣೆ ಸ್ಪರ್ಧಿಸುವ ನಿಟ್ಟಿನಲ್ಲಿ ಜೆಪಿ ನಡ್ಡಾ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಅಚ್ಚರಿ ಏನಂದರೆ ಹಿಮಾಚಲ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಜೆಪಿ ನಡ್ಡಾ ಅವರ ಅವಧಿಯು ಏಪ್ರಿಲ್‌ನಲ್ಲಿ ಕೊನೆಗೊಳ್ಳಲಿದೆ. ಹೀಗಾಗಿ ಹಿಮಾಚಲ ಪ್ರದೇಶದಿಂದ ಆಯ್ಕೆಯಾಗಿದ್ದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಗುಜರಾತ್ ನಿಂದ ಆದದ್ದಕ್ಕೆ ಅಲ್ಲ ಎನ್ನಲಾಗಿದೆ.