Home Karnataka State Politics Updates PM Modi: ರಾಜ್ಯೋತ್ಸವದಂದು ಕರ್ನಾಟಕಕ್ಕೆ ಹೊಸ ಹೆಸರಿಟ್ಟ ಪ್ರಧಾನಿ ಮೋದಿ!!

PM Modi: ರಾಜ್ಯೋತ್ಸವದಂದು ಕರ್ನಾಟಕಕ್ಕೆ ಹೊಸ ಹೆಸರಿಟ್ಟ ಪ್ರಧಾನಿ ಮೋದಿ!!

PM Modi

Hindu neighbor gifts plot of land

Hindu neighbour gifts land to Muslim journalist

PM Modi: ಕನ್ನಡಿಗರಿಗಿಂದು 68ನೇ ವರ್ಷದ ಕನ್ನಡ ರಾಜ್ಯೋತ್ಸವದ ಸಂಭ್ರಮ. ಇದರೊಂದಿಗೆ ಮೈಸೂರು ರಾಜ್ಯವೆಂಬುದು ‘ಕರ್ನಾಟಕ ರಾಜ್ಯ'(Karnataka State) ಎಂದು ನಾಮಕರಣವಾಗಿ ಇಂದಿಗೆ 50 ವರ್ಷ. ಹೀಗಾಗಿ ಈ ವರ್ಷದ ರಾಜ್ಯೋತ್ಸವ ಕನ್ನಡಿಗರಿಗೆ ತುಂಬಾ ವಿಶೇಷವಾದದ್ದು. ಒಟ್ಟಿನಲ್ಲಿ ಎರಡು ಸಂಭ್ರಮದಲ್ಲಿ ಇಂದು ಕನ್ನಡದ ಜನತೆ ಮಿಂದೆದ್ದಾರೆ. ಈ ಸುದಿನದಂದು ಪ್ರಧಾನಿ ಮೋದಿ(PM Modi) ಕರ್ನಾಟಕಕ್ಕೆ ಹೊಸ ಹೆಸರಿಟ್ಟಿದ್ದಾರೆ.

ಹೌದು, ಪ್ರಧಾನಿ ನರೇಂದ್ರ ಮೋದಿಯವರಿಗೆ ಕರ್ನಾಟಕ ದೊಂದಿಗೆ ಅವಿನಾಭಾವ ಸಂಬಂಧ. ಅದರಲ್ಲಿಯೂ ಕೂಡ ದಕ್ಷಿಣ ಭಾರತ ರಾಜ್ಯಗಳಲ್ಲಿ ಕರ್ನಾಟಕವೆಂದರೆ ಅವರಿಗೆ ಅಚ್ಚುಮೆಚ್ಚು. ಕರ್ನಾಟಕದಲ್ಲಿ ಯಾವುದೇ ಹಬ್ಬ ಹರಿದಿನಗಳು ನಡೆಯಲಿ ಪ್ರಧಾನಿ ಮೋದಿಯವರು ಟ್ವೀಟ್ ಮೂಲಕ ಸಂದೇಶವನ್ನು ರವಾನಿಸಿ ಶುಭವನ್ನು ಕೋರುತ್ತಾರೆ. ಅಂತೆ ಇಂದು ರಾಜ್ಯೋತ್ಸವದ ಸಂಭ್ರಮದಲ್ಲಿರುವ ನಾಡಿನ ಜನತೆಗೆ ಪ್ರಧಾನಿ ಮೋದಿಯವರು ಶುಭವನ್ನು ಕೋರಿದ್ದಾರೆ. ಇದರೊಂದಿಗೆ ವಿಶೇಷ ಎಂಬಂತೆ ಕರ್ನಾಟಕ ಅವರು ಕರ್ನಾಟಕಕ್ಕೆ ‘ಪ್ರಾಚೀನ ಆವಿಷ್ಕಾರ ಮತ್ತು ಆಧುನಿಕ ಉದ್ಯಮದ ತೊಟ್ಟಿಲು’ ಹೊಸ ಬಿರುದನ್ನು ನೀಡಿದ್ದಾ

ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಕರ್ನಾಟಕದ ಜನತೆಗೆ ರಾಜ್ಯೋತ್ಸವಕ್ಕಾಗಿ ಶುಭ ಹಾರೈಸಿರುವ ಪ್ರಧಾನಿ ಮೋದಿಯವರು, ‘ಈ ಕನ್ನಡ ರಾಜ್ಯೋತ್ಸವದಂದು ನಾವು ಕರ್ನಾಟಕದ ಚೈತನ್ಯವನ್ನು ಸಂಭ್ರಮಿಸುತ್ತಿದ್ದೇವೆ. ಪ್ರಾಚೀನ ಆವಿಷ್ಕಾರ ಮತ್ತು ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ. ಪ್ರೀತಿ ಮತ್ತು ಬುದ್ಧಿವಂತಿಕೆ ಎರಡರ ಮಿಳಿತವಾಗಿರುವ ಕನ್ನಡಿಗರು, ಕರ್ನಾಟಕ ರಾಜ್ಯವು ಶ್ರೇಷ್ಠತೆಯ ಕಡೆಗೆ ಸತತ ಮುನ್ನಡೆಯುವಂತೆ ಉತ್ತೇಜಿಸುತ್ತಿದ್ದಾರೆ. ಕರ್ನಾಟಕ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿ, ಇನ್ನಷ್ಟು ನಾವೀನ್ಯತೆಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಲಿ’ ಎಂದು ಶುಭ ಕೋರಿದ್ದಾರೆ.