Home Karnataka State Politics Updates Amit Shah: ಕಾಂಗ್ರೆಸ್’ಗೆ ಮತ ಹಾಕಿದ್ರೆ PFI ನಿಷೇಧ ವಾಪಸ್ ಪಡೆಯುತ್ತಾರೆ: ಗೃಹ ಮಂತ್ರಿ ಅಮಿತ್...

Amit Shah: ಕಾಂಗ್ರೆಸ್’ಗೆ ಮತ ಹಾಕಿದ್ರೆ PFI ನಿಷೇಧ ವಾಪಸ್ ಪಡೆಯುತ್ತಾರೆ: ಗೃಹ ಮಂತ್ರಿ ಅಮಿತ್ ಶಾ ಹೇಳಿಕೆ !

Amit Shah
Image source: Mint

Hindu neighbor gifts plot of land

Hindu neighbour gifts land to Muslim journalist

Amit shah: ಕಾಂಗ್ರೆಸ್ ಗೆ ವೋಟ್ ಹಾಕಬೇಡಿ. ಒಂದು ವೇಳೆ ಓಟ್ ಹಾಕಿದರೆ ಅವರು PFI ನಿಷೇಧ ವಾಪಸ್ ಪಡೆಯುತ್ತಾರೆ. ಹಾಗಾಗಿ ಕಾಂಗ್ರೆಸ್ ಗೆ ಮತ ಹಾಕದೇ ಬಿಜೆಪಿಗೆ ಮತ ಹಾಕಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಗೆ ಸಚಿವ ಅಮಿತ್ ಶಾ ಆಗಮಿಸಿ ಭರ್ಜರಿ ರೋಡ್ ಶೋ ನಡೆಸಿದರು. ಅಲ್ಲಿನ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅಮಿತ್ ಶಾ ಭಾಗವಹಿಸಿ ಮಾತನಾಡಿದರು.

ವಿಜಯಪುರ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಿ. ನಮ್ಮಿಂದ ಮುಳವಾಡ, ಬೂದಿಹಾಳದಲ್ಲಿ ನೀರಾವರಿ ಯೋಜನೆಗಳನ್ನು ನೀಡಲಾಗಿದೆ. ಕಾಂಗ್ರೆಸ್ ಯಾವುದೇ ಕೆಲಸ ಮಾಡಿಲ್ಲ. ನಮ್ಮನ್ನು ಬೆಂಬಲಿಸಿ, ಕಾಂಗ್ರೆಸ್ ಸೋಲಿಸಿ ಎಂದು ಅವರು ವಾಗ್ಧಾಳಿ ನಡೆಸಿದ್ದಾರೆ. ನಾವು PFI ಅನ್ನು ನಿಷೇಧಿಸಿದ್ದೇವೆ. ಒಂದು ವೇಳೆ ಜನರು ಕಾಂಗ್ರೆಸ್’ಗೆ ಮತ ನೀಡಿದರೆ ಕಾಂಗ್ರೆಸ್ PFI ನಿಷೇಧವನ್ನು ವಾಪಸ್ ಪಡೆಯುತ್ತಾರೆ. ಇದು ನಿಮಗೆ ಬೇಕಾ ಎಂದು ಗೃಹ ಸಚಿವ ಅಮಿತ್ ಶಾ ಅವರು ಸಮಾವೇಶದಲ್ಲಿ ಪ್ರಶ್ನಿಸಿದರು.

ಅತ್ತ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿಯವರು, ಜಯವಾಹಿನಿ ರೋಡ್ ಶೋ ಕಾರ್ಯಕ್ರಮಕ್ಕೆ ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿದೆ. ಜನರ ಉತ್ಸಾಹವೇ ರಾಜ್ಯದ ತುಂಬಾ ಬಿಜೆಪಿ ಅಲೆ ಇರುವುದಕ್ಕೆ ಸಾಕ್ಷಿಯಾಗಿದೆ ಎಂದರು. ಚುನಾವಣಾ ವಿಚಾರವಾಗಿ ಅಮಿತ್ ಶಾ ಅವರು ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಪ್ರಧಾನಿಯಿಂದ ಮತ್ತು ಇತರ ಪ್ರಮುಖರ ಕಾರ್ಯಕ್ರಮಗಳ ಮರು ಅವಲೋಕನ ಮಾಡಲು ಹೇಳಿದ್ದು ಕೆಲವು ಕಾರ್ಯಕ್ರಮಗಳನ್ನು ಇಂದು ರಾತ್ರಿ ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಇದನ್ನೂ ಓದಿ: Samantha English: ಇಂಗ್ಲೆಂಡ್​ ಜನರ ಥರ ಇಂಗ್ಲಿಷ್​ ಉದುರಿಸಲು ಹೋಗಿ ಟ್ರೋಲ್​ ಆದ ಸಮಂತಾ: Viral Video!!