Home Karnataka State Politics Updates Free current Scheme: ಕಾಂಗ್ರೆಸ್ಸಿನ ಉಚಿತ ವಿದ್ಯುತ್ ಎಫೆಕ್ಟ್, ಎಲ್‌ಪಿಜಿ ಗ್ಯಾಸನ್ನು ಮೂಲೆಗೆ ಹಾಕಿ ಕರೆಂಟ್...

Free current Scheme: ಕಾಂಗ್ರೆಸ್ಸಿನ ಉಚಿತ ವಿದ್ಯುತ್ ಎಫೆಕ್ಟ್, ಎಲ್‌ಪಿಜಿ ಗ್ಯಾಸನ್ನು ಮೂಲೆಗೆ ಹಾಕಿ ಕರೆಂಟ್ ಒಲೆ ಖರೀದಿಸುತ್ತಿರುವ ಜನ!

Free current Scheme
Image source- Treehugger, Times of india

Hindu neighbor gifts plot of land

Hindu neighbour gifts land to Muslim journalist

Free current Scheme : ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ(Karnataka Assembly election) ಮುಕ್ತಾಯವಾಗಿ, ಕಾಂಗ್ರೆಸ್(Congress) ಪಕ್ಷ ಅಭೂತಪೂರ್ವ ಜಯ ಗಳಿಸಿ, ಅನೇಕ ಕಸರತ್ತುಗಳ ಮೂಲಕ ಸರ್ಕಾರವನ್ನೂ ರಚಿಸಿ ಪ್ರಮಾಣವಚನವನ್ನೂ ಪಡೆದಾಗಿದೆ. ಈ ನಡುವೆ ಕಾಂಗ್ರೆಸ್ ನ 5 ಗ್ಯಾರಂಟಿಗಳು(5 Guaranty) ಭಾರೀ ಸದ್ಧು ಮಾಡುತ್ತಿದ್ದು, ಸದ್ಯ ಇದೀಗ ನೂತನ ಗೌರ್ಮೆಂಟ್(New Government) ಸಂಪುಟ ಸಭೆ ನಡೆಸಿ ಅವುಗಳ ಜಾರಿಗೆ ತಾತ್ವಿಕವಾದ ಒಪ್ಪಿಗೆಯನ್ನೂ ಪಡೆದುಕೊಂಡಿದೆ. ಆದರೆ ಈ ಮೊದಲೇ ಇಲ್ಲೊಂದೆಡೆ ಗ್ಯಾರಂಟಿ ಭರವಸೆಗಳಲ್ಲಿ ಒಂದಾದ ಪ್ರತಿ ಮನೆಗೆ 200 ಯೂನಿಟ್‌ ಉಚಿತ(200 Unit Current Free) ವಿದ್ಯುತ್‌ ಯೋಜನೆ ನಂಬಿ ಜನರು ವಿದ್ಯುತ್‌ ಒಲೆಗಳ ಮೊರೆ ಹೋಗುತ್ತಿದ್ದಾರೆ!

ಹೌದು, ಅಡುಗೆ ಅನಿಲದ ಸಿಲಿಂಡರ್‌(LPG) ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ಇದೀಗ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಉಚಿತ ವಿದ್ಯುತ್  ಯೋಜನೆಯು (Free current Scheme ) ಭಾರೀ ಖುಷಿನೀಡಿದ್ದು, ಇದನ್ನೇ ಜನ ಪರ್ಯಾಯವಾಗಿ ಬಳಸಲು ಮುಂದಾಗಿದ್ದಾರೆ. ಯಾಕೆಂದರೆ ಇಂತಹ ಸಂಕಷ್ಟದ ಕಾಲದಲ್ಲಿ ಕಾಂಗ್ರೆಸ್‌ ಪಕ್ಷ ಪ್ರತಿ ಮನೆಗೆ 200 ಯೂನಿಟ್‌ ಉಚಿತ ವಿದ್ಯುತ್‌ನ ಗ್ಯಾರಂಟಿ ನೀಡಿದೆ. ನೂತನ ಸರ್ಕಾರದ ಮೊದಲ ಸಂಪುಟ ಸಭೆಯಲ್ಲೇ ಈ ಯೋಜನೆ ಜಾರಿಯಾಗಿದ್ದು, ಉಚಿತ ವಿದ್ಯುತ್‌ ಯೋಜನೆ ನಂಬಿಕೊಂಡು ವಿಜಯನಗರ(Vijyanagar) ಜಿಲ್ಲೆಯ ಹೂವಿನಹಡಗಲಿಯ(Huvinahadagali) ಜನ ಮನೆಯಲ್ಲಿನ ಗ್ಯಾಸ್‌ ಸಿಲಿಂಡರ್‌ಗಳನ್ನು ಮೂಲೆಗೆ ಸರಿಸಿ, ವಿದ್ಯುತ್‌ ಒಲೆಗಳನ್ನು(Current Stowe) ಖರೀದಿಸುತ್ತಿದ್ದಾರೆ.

ಸಾಧಾರಣವಾಗಿ ಹಳ್ಳಿಯ ಮನೆಗಳಲ್ಲಿ ತಿಂಗಳಿಗೆ ಸರಾಸರಿ 20ರಿಂದ 50 ಯೂನಿಟ್‌ ವಿದ್ಯುತ್‌ ಬಳಕೆಯಾಗುತ್ತದೆ. ಈಗ ಸರ್ಕಾರ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ಹೇಳಿದೆ. ನಿತ್ಯ ವಿದ್ಯುತ್‌ ಒಲೆ ಬಳಸಿದರೂ ತಿಂಗಳಿಗೆ 200 ಯೂನಿಟ್‌ ಗಡಿ ತಲುಪುವುದಿಲ್ಲ. ಹೀಗಾಗಿ, ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಯಿಂದ ರೋಸಿಹೋಗಿರುವ ಇಲ್ಲಿಯ ಜನ ದುಬಾರಿ ಸಿಲಿಂಡರ್‌ನ ಸಹವಾಸವೇ ಬೇಡ ಎನ್ನುತ್ತಿದ್ದಾರೆ.

ಅಂದಹಾಗೆ ಹೂವಿನಹಡಗಲಿ(Huvinadagali) ಪಟ್ಟಣದ ವಿವಿಧ ಅಂಗಡಿಗಳಲ್ಲಿ ನಾನಾ ಮಾದರಿಯ ವಿದ್ಯುತ್‌ ಒಲೆಗಳು ಹೊಸದಾಗಿ ಮಾರಾಟಕ್ಕೆ ಬಂದಿವೆ. ಇದನ್ನು ಗಮನಿಸಿದ ಜನ ವಿದ್ಯುತ್‌ ಒಲೆ ಖರೀದಿಗೆ ಒಲವು ತೋರುತ್ತಿದ್ದಾರೆ. ನಿತ್ಯ ಇಲ್ಲಿನ ಅಂಗಡಿಗಳಲ್ಲಿ 30ರಿಂದ 40 ವಿದ್ಯುತ್‌ ಒಲೆಗಳು ಮಾರಾಟವಾಗುತ್ತಿವೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಸ್ಥರು.

ಜೊತೆಗೆ, ವ್ಯಾಪಾರಸ್ಥರು ಟಂಟಂ ವಾಹನಗಳಲ್ಲಿ ವಿದ್ಯುತ್‌ ಒಲೆಗಳನ್ನು ತುಂಬಿಕೊಂಡು ಗ್ರಾಮೀಣ ಪ್ರದೇಶಗಳಿಗೆ ತೆರಳಿ, ಮಾರಾಟ ಮಾಡುತ್ತಿದ್ದಾರೆ. ಮಹಿಳೆಯರು ಮುಗಿಬಿದ್ದು ಈ ವಿದ್ಯುತ್‌ ಒಲೆಗಳನ್ನು ಖರೀದಿಸುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಸ್ಥರು. ಹೀಗಾಗಿ, ಈಗ ತಾಲೂಕಿನ ಬಹುತೇಕ ಮನೆಗಳಲ್ಲಿ ವಿದ್ಯುತ್‌ ಒಲೆಗಳು ಬಂದು ಕುಳಿತಿವೆ. ಕೆಲವರು ಈಗಾಗಲೇ ಬಳಸುತ್ತಿದ್ದರೆ, ಇನ್ನೂ ಕೆಲವರು ಉಚಿತ ವಿದ್ಯುತ್‌ ಗ್ಯಾರಂಟಿಯ ಅನುಷ್ಠಾನಕ್ಕಾಗಿ ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ:ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಮೇ. 23 ರಿಂದ: ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!