Home Karnataka State Politics Updates Parliament election : ದಕ್ಷಿಣ ಕನ್ನಡದಲ್ಲಿ ಅಚ್ಚರಿ ಮೂಡಿಸಿದ ಸಮೀಕ್ಷಾ ವರದಿ – ಜನ ಬೆಂಬಲ...

Parliament election : ದಕ್ಷಿಣ ಕನ್ನಡದಲ್ಲಿ ಅಚ್ಚರಿ ಮೂಡಿಸಿದ ಸಮೀಕ್ಷಾ ವರದಿ – ಜನ ಬೆಂಬಲ ಬಿಜೆಪಿಗೋ ಇಲ್ಲ ಪುತ್ತಿಲ ಪರಿವಾರಕ್ಕೋ?

Parliament Election

Hindu neighbor gifts plot of land

Hindu neighbour gifts land to Muslim journalist

Parliment electionಗೆ ಕರ್ನಾಟಕದಲ್ಲಿ ಮೂರು ಪಕ್ಷಗಳು ಸಮರ ಸಾರಿವೆ. ಕಾಂಗ್ರೆಸ್ ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದರೂ ಬಿಜೆಪಿ(BJP) ಇನ್ನೂ ಮಾಡಿಲ್ಲ. ಈ ನಡುವೆ ಕೆಲವು ಸಮೀಕ್ಷಾ ವರದಿಗಳು ಭಾರೀ ಅಚ್ಚರಿ ಮೂಡಿಸಿವೆ. ಅಂತೆಯೇ ಇದೀಗ ಕರ್ನಾಟಕದ ಹೈವೋಲ್ಟೇಜ್ ಕ್ಷೇತ್ರವಾದ ದ.ಕ(D.K)ದಲ್ಲಿ ಬಿಡುಗಡೆಯಾದ ಸಮೀಕ್ಷಾ ವರದಿ ಭಾರೀ ಕುತೂಹಲ ಕೆರಳಿಸಿದೆ.

ಹಿಂದುತ್ವದ ಭದ್ರ ಕೋಟೆಯಾದ ಕರಾವಳಿಯಲ್ಲಿ ಈ ಸಲವೂ ಹಾಲಿ ಸಂಸದರಿಗೆ ಟಿಕೆಟ್ ನೀಡಿದರೆ ಬಿಜೆಪಿ ಲೆಕ್ಕಾಚಾರ ತಲೆಕೆಳಗಾಗಲಿದೆ. ಯಾಕೆಂದರೆ ಅಂದಲ್ಲಿ ಮತ್ತೊಬ್ಬ ಹಿಂದುತ್ವವಾದಿ, ಜನ ನಾಯಕ ಅರುಣ್ ಕುಮಾರ್ ಪುತ್ತಿಲ(Arun kumar puttila) ಅವರು ಪಕ್ಷೇತರ ಸ್ಪರ್ಧೆಗೆ ಅಣಿಯಾಗಿ ನಿಂತಿದ್ದಾರೆ. ವಿಧಾನಸಭಾ ಚುನಾವಣೆಯಂತೆ ಈ ಸಲವು ಕರಾವಳಿಯಲ್ಲಿ ಬಿಜೆಪಿ ತಪ್ಪು ಮಾಡಿದರೆ, ಕಾರ್ಯಕರ್ತರ ವಿರುದ್ಧ ನಡೆದರೆ ಮತ್ತೆ ಮುಗ್ಗರಿಸೋದು ಫಿಕ್ಸ್ ಆಗಿದೆ. ಇದು ಸುಖಾಸುಮ್ಮನೆ ಹೇಳುವುದಲ್ಲ, ಜನರಿಂದ ನಡೆಸಿದ ಸಮೀಕ್ಷಾ ವರದಿಯೇ ಅಚ್ಚರಿ ಸಂಗತಿಯನ್ನು ಹೊರಹಾಕಿದೆ. ಅಂದರೆ ಪುತ್ತಿಲರಿಗೆ ಜೈ ಎಂದಿದೆ.

ಹೌದು, ಅಚ್ಚರಿ ಬೆಳವಣಿಗೆ ಎಂದರೆ ಬಿಜೆಪಿಯಿಂದ ಬಂಡಾಯ ಸಾರಿ ಕಮರ ಪಡೆಯಿಂದ ಅಂತರ ಕಾಯ್ದುಕೊಂಡು, ಒಂಟಿತನದ ಸಮರ ಸಾರಿರುವ ಅರುಣ್‌ ಕುಮಾರ್ ಪುತ್ತಿಲ‌ (Arun Puthila) ಅವರನ್ನೇ ಕರಾವಳಿಯ ಅತಿ ಹೆಚ್ಚು ಮಂದಿ ಮೆಚ್ಚಿದ್ದಾರೆ. ಖಾಸಗಿ ವಾಹಿನಿಯೊಂದು ನಡೆಸಿದ ಸರ್ವೇಯಲ್ಲಿ ಅವರಿಗೇ ಅತಿ ಹೆಚ್ಚು ಮತಗಳು ಬಂದಿದ್ದು, ಬ್ರಿಜೇಶ್ ಚೌಟ (Brijesh Chauta) ಎರಡನೇ ಸ್ಥಾನದಲ್ಲಿದ್ದಾರೆ. ವಿಚಿತ್ರ ಅಂದ್ರೆ ಹ್ಯಾಟ್ರಿಕ್ ಭಾರಿಸಿ, ಹಿಂದೂ ಹುಲಿ ಎಂದು ‘ಕರೆಸಿಕೊಳ್ಳುವ’ ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ (Nalin Kumar Kateel) ನಾಲ್ಕನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ.

ಈ ರೀತಿ ಬರುವ ಅನೇಕ ಸಮೀಕ್ಷೆಯ ವರದಿಗಳನ್ನಾದರೂ ನೋಡಿ ಈ ಸಲ ಬಿಜೆಪಿ ಹೈಕಮಾಂಡ್ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಕಳೆದ ಸಲ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಾದ ಪ್ರಮಾಧವೇ ಇಲ್ಲಾಗುತ್ತದೆ. ವೋಟು ಹಂಚಿಕೆಯಾಗಿ ಕಾಂಗ್ರೆಸ್ ಗೆಲುವಿನ ನಗೆ ಬೀರೋದು ಬಹುತೇಕ ಫಿಕ್ಸ್ ಆಗುತ್ತದೆ.

ಖಾಸಗಿ ವಾಹಿನಿಯ ಫೋನ್ ಪೋಲಿಂಗ್ ವಿವರ ಇಲ್ಲಿದೆ. 

ಒಟ್ಟು ಕರೆಗಳು ಏನು- ಪಕ್ಷಗಳ ಶೇಕಡಾವಾರು ಮತ

ಒಟ್ಟು ಕರೆಗಳು : 21000

ಸ್ವೀಕರಿಸಿದ ಕರೆಗಳು : 6009

ಬಿಜೆಪಿ – 4,716 – 78%

ಕಾಂಗ್ರೆಸ್ – 1,293 – 22%

ಅರುಣ್ ಪುತ್ತಿಲ – 1211

ಬ್ರಿಜೇಶ್ ಚೌಟ – 911

ಸತ್ಯಜಿತ್ ಸುರತ್ಕಲ್ – 695

ನಳಿನ್‌ಕುಮಾರ್ ಕಟೀಲ್ – 400