Home Karnataka State Politics Updates Parliament Election: ಮಾರ್ಚ್ 15 ರಂದು ಬೆಳಗ್ಗೆ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ : ಚುನಾವಣಾ...

Parliament Election: ಮಾರ್ಚ್ 15 ರಂದು ಬೆಳಗ್ಗೆ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ : ಚುನಾವಣಾ ದಿನಾಂಕ ನಿಗದಿಗೂ ಮುನ್ನವೇ ಪ್ರಚಾರಕ್ಕೆ ಚಾಲನೆ ನೀಡಲಿರುವ ಮೋದಿ

Parliament Election

Hindu neighbor gifts plot of land

Hindu neighbour gifts land to Muslim journalist

ಲೋಕಸಭೆ ಚುನಾವಣೆ ರಂಗೇರಿತಿರುವಂತಹ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಬಹುದೊಡ್ಡ ಬೆಳವಣಿಗೆಯೊಂದು ನಡೆದಿದೆ. ಲೋಕಸಭಾ ಚುನಾವಣೆ ನಿಗದಿಗೂ ಮುನ್ನವೇ ಇದೀಗ ಪ್ರಧಾನಿ ಮೋದಿ ಅವರು ಚಿಕ್ಕಬಳ್ಳಾಪುರದ ದೇವನಹಳ್ಳಿಯಲ್ಲಿ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮಾಜಿ ಸಚಿವ ಕೆ ಸುಧಾಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Parliment election: 18 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಫೈನಲ್ ಮಾಡಿದ ಬಿಜೆಪಿ !! ಕಗ್ಗಂಟಾಗಿ ಉಳಿದ 8 ಕ್ಷೇತ್ರಗಳು

ಮೋದಿ ಚಿಕ್ಕಬಳ್ಳಾಪುರದಲ್ಲಿ ಪ್ರಚಾರಕ್ಕೆ ಬರುತ್ತಿರುವ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಸಭೆ ನಡೆಸಿದ್ದು ಪ್ರಚಾರದ ಸಿದ್ಧತೆಯ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಲೋಕಸಭಾ ಚುನಾವಣೆ ಕುರಿತು ಮಾತನಾಡಿದ ಅವರು ಅವಕಾಶ ಕೊಟ್ಟರೆ ಈ ಬಾರಿ ಚುನಾವಣೆ ನಿಲ್ಲುತ್ತೇನೆ. ನಾನು ಈಗಾಗಲೇ ಮೂರು ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ನನಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಮತ್ತಷ್ಟು ಬಲ ತುಂಬುವ ಕೆಲಸ ಮಾಡುತ್ತೇನೆ. ನನ್ನ ಕೆಲಸವನ್ನು ನೋಡಿ ನನಗೆ ಟಿಕೆಟ್ ನೀಡಲಿ ಎಂದು ಚಿಕ್ಕಬಳ್ಳಾಪುರದಲ್ಲಿ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.