Home Karnataka State Politics Updates Parliament Election: ಬಿಜೆಪಿ ಅಭ್ಯರ್ಥಿ ಸಿ ಎನ್ ಮಂಜುನಾಥ್ ಹೆಸರಿನಲ್ಲಿ 4 ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ...

Parliament Election: ಬಿಜೆಪಿ ಅಭ್ಯರ್ಥಿ ಸಿ ಎನ್ ಮಂಜುನಾಥ್ ಹೆಸರಿನಲ್ಲಿ 4 ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಪ್ರತಿಪಕ್ಷಗಳು

Parliament Election

Hindu neighbor gifts plot of land

Hindu neighbour gifts land to Muslim journalist

Parliament Election: ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚುತ್ತಿದೆ. ಚುನಾವಣೆಯ ಭಾಗವಾಗಿ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿ ಸಿಎನ್ ಮಂಜುನಾಥ್ ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ: Mandya Lokasabha: ಮಂಡ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಎಚ್ ಡಿ ರೇವಣ್ಣರಿಂದ ಅಚ್ಚರಿಯ ಸ್ಪರ್ಧೆ !!

ಆದರೆ ಇಲ್ಲಿ ವಿರೋಧ ಪಕ್ಷಗಳು ಮಂಜುನಾಥ್ ಅವರ ವಿರುದ್ಧ ಆಟ ಕಟ್ಟಿದ್ದು, ಸಿಎನ್ ಮಂಜುನಾಥ್ ಹೆಸರಿನ ವಿವಿಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಇದನ್ನೂ ಓದಿ: Kota Shrinivas Poojary : ಸಿಂಪಲ್ ನಾಯಕ ಕೋಟ ಶ್ರೀನಿವಾಸ ಪೂಜಾರಿ 3.5 ಕೋಟಿ ಆಸ್ತಿ ಒಡೆಯ !!

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಂಜುನಾಥ್ ಅವರು, ಇವು ಬಹಳ ಹಳೆಯ ತಂತ್ರಗಳು. ನನ್ನ ಸ್ಪರ್ಧೆಯಿಂದ ಕೆಲವರು ಭಯಭೀತರಾಗಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಕಾಂಗ್ರೆಸ್ ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಜನ ಬುದ್ಧಿವಂತರು, ವಿದ್ಯಾವಂತರು ಮತ್ತು ಚಿಂತನಶೀಲರಾಗಿದ್ದು. ನಾನು ರಾಷ್ಟ್ರೀಯ ಪಕ್ಷ ಬಿಜೆಪಿಯಿಂದ ಕಮಲದ ಚಿಹ್ನೆಯ ಮೇಲೆ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂಬುದು ಜನರಿಗೆ ತಿಳಿದಿದೆ ಎಂದು ಮಂಜುನಾಥ್ ತಿಳಿಸಿದ್ದಾರೆ.