Mandya Lokasabha: ಮಂಡ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಎಚ್ ಡಿ ರೇವಣ್ಣರಿಂದ ಅಚ್ಚರಿಯ ಸ್ಪರ್ಧೆ !!

Mandya lokasabha: ಲೋಕಸಭಾ ಚುನಾವಣೆಯ ಮಟ್ಟಿಗೆ ಕೂಡಾ ಮಂಡ್ಯ(Mandya Lokasabha) ಹೈವೋಲ್ವೇಜ್ ಕ್ಷೇತ್ರ. ಕಳೆದ ಬಾರಿ ಸುಮಲತಾ ಅಂಬರೀಶ(Sumalatha Ambrish) ಸ್ಪರ್ಧಿಸಿದ್ದ ಮಂಡ್ಯದಲ್ಲಿ ಈ ಸಾರಿ ಬಿಜೆಪಿ ಮತ್ತು ಜೆಡಿಎಸ್‌(BJP-JDS) ಮೈತ್ರಿ ನಡೆದಿದೆ. ಅದರಂತೆ ಮಂಡ್ಯದ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(H D Kumarswamy) ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಎಚ್.ಡಿ.ರೇವಣ್ಣ ಕೂಡಾ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಅಣ್ಣ ತಮ್ಮ ಪರಸ್ಪರ ಸ್ಪರ್ಧಿಸುತ್ತಿದ್ದಾರೆಯೇ ಎನ್ನುವ ಕುತೂಹಲ ಒಂದು ಸಾರಿ ಉಂಟಾಗುವುದು ಸಹಜ.

ಇದನ್ನೂ ಓದಿ: Parliament Election: ಲೋಕಸಭಾ ಚುನಾವಣೆಗೆ ಮುನ್ನ ದಕ್ಷಿಣ ಕನ್ನಡದಲ್ಲಿ ಬರೋಬ್ಬರಿ 90 ಸಾವಿರ ಲೀಟ‌ರ್ ಮದ್ಯ ವಶ

ಎಚ್ ಡಿ ರೇವಣ್ಣ(H D Revanna) ಎಂಬ ಹೆಸರಿನ ವ್ಯಕ್ತಿಯೊಬ್ಬರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಕೋಡಿಹಳ್ಳಿ ಗ್ರಾಮದ ದೊಡ್ಡಗೌಡ ಎಂಬವರ ಮಗ ನಲವತ್ತೆಂಟು ವರ್ಷದ ಎಚ್.ಡಿ.ರೇವಣ್ಣ ಪೂರ್ವಾಂಚಲ್ ಮಹಾ ಪಂಚಾಯತ್ ಎಂಬ ಪಾರ್ಟಿಯಿಂದ ಸ್ಪರ್ಧೆ ಬಯಸಿದ್ದು, ಜಿಲ್ಲಾ ಚುನಾವಣಾಧಿಕಾರಿ ಡಾ.ಕುಮಾರ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: Ugadi Festival: ಯುಗಾದಿಯಂದು ಈ ಪೂಜೆ ಮಾಡಿದರೆ ವರ್ಷಪೂರ್ತಿ ಒಳ್ಳೆಯದಾಗುತ್ತದೆ! ಇಲ್ಲಿದೆ ನೋಡಿ ಜ್ಯೋತಿಷ್ಯ ಸಲಹೆ

ಪ್ರತಿಷ್ಟಿತ ಕ್ಷೇತ್ರಗಳಲ್ಲಿ ಪ್ರಭಾವಿ ಅಭ್ಯರ್ಥಿಗಳ ವಿರುದ್ಧ ಅವರದೇ ಹೆಸರಿನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದನ್ನು ನಾವು ನೋಡಿದ್ದೇವೆ. ಗೆದ್ದಾಗಿದ್ದಿನ ಕ್ಷೇತ್ರಗಳಲ್ಲಿ ಎದುರಾಳಿಗಳನ್ನು ಕನ್ಫ್ಯೂಸ್ ಮಾಡಲು ಈ ತಂತ್ರ ಬಳಸಲಾಗುತ್ತದೆ. ಇದೀಗ ಸ್ವಲ್ಪ ಬದಲಾವಣೆಯೆನ್ನುವಂತೆ ಹೆಚ್. ಡಿ. ಕುಮಾರಸ್ವಾಮಿಯ ಅಣ್ಣನಾದ ಎಚ್ ಡಿ ರೇವಣ್ಣ ಹೆಸರಿನ ಇನ್ನೋರ್ವ ಅಭ್ಯರ್ಥಿ ಕಣಕ್ಕೆ ಇಳಿದಿರುವುದು ಕೌತುಕ ಮೂಡಿಸಿದೆ.

Leave A Reply

Your email address will not be published.