Home Karnataka State Politics Updates Parliament Election: ಲೋಕಸಭಾ ಚುನಾವಣೆ ಸ್ಪರ್ಧೆಗೆ ಅವಕಾಶ ಸಿಕ್ಕರೆ ನಿರಾಕರಿಸಲ್ಲ : ಚಕ್ರವರ್ತಿ ಸೂಲಿಬೆಲೆ ಅಚ್ಚರಿ...

Parliament Election: ಲೋಕಸಭಾ ಚುನಾವಣೆ ಸ್ಪರ್ಧೆಗೆ ಅವಕಾಶ ಸಿಕ್ಕರೆ ನಿರಾಕರಿಸಲ್ಲ : ಚಕ್ರವರ್ತಿ ಸೂಲಿಬೆಲೆ ಅಚ್ಚರಿ ಹೇಳಿಕೆ

Parliament Election

Hindu neighbor gifts plot of land

Hindu neighbour gifts land to Muslim journalist

ರಾಜ್ಯದಲ್ಲಿ ಲೋಕಸಭಾ ಸಮರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಯುವ ಬ್ರಿಗೇಡ್ ಮುಖ್ಯಸ್ಥ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಯಾರು ಊಹಿಸದ ಹೇಳಿಕೆಯೊಂದನ್ನು ನೀಡಿದ್ದಾರೆ.

ಇದನ್ನೂ ಓದಿ: DK Shivakumar: ಬಿಜೆಪಿ ಬೆಳವಣಿಗೆಯ ಕುರಿತು ಕಾದು ನೋಡುವ ತಂತ್ರ : ಡಿ ಕೆ ಶಿವಕುಮಾರ್

“ನಾನು ಚುನಾವಣೆ ಟಿಕೆಟ್ ಕೇಳಿಕೊಂಡುಹೋಗುವುದಿಲ್ಲ. ಒಂದು ವೇಳೆ ಅಂತಹ ಅವಕಾಶ ಒದಗಿ ಬಂದರೆ ಸರ್ಧಿಸಲು ವಿರೋಧಿಸುವುದಿಲ್ಲ, ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ನಮೋ ಬ್ರಿಗೇಡ್ ವತಿಯಿಂದ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲು ಪುತ್ತೂರಿಗೆ ಆಗಮಿಸಿದ್ದ ಅವರು, ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸುವ ವಿಚಾರ ಸದ್ಯ ವದಂತಿಯಷ್ಟೆ, 2014, 2019ರಲ್ಲೂ ಸಹ ಇಂತಹ ವದಂತಿ ಹರಡಿತ್ತು.

ಇದೀಗ 2024ರಲ್ಲೂ ವದಂತಿ ಹರಡಿದೆ. ರಾಜಕೀಯ ಆಸಕ್ತಿಯ ಪ್ರಶ್ನೆ ಬೇರೆ. ಅದಕ್ಕೆ ನನ್ನ ವಿರೋಧವಿಲ್ಲ, ಆದರೆ ಸೀಟ್ ಕೇಳಿಕೊಂಡು ಹೋಗುವುದಿಲ್ಲ, ಅಂಥ ಅವಕಾಶ ಬಂದರೆ ವಿರೋಧ ಇಲ್ಲ ಎಂದು ಹೇಳಿದರು.

ಬಿಜೆಪಿ ಇದುವರೆಗೂ ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಯನ್ನು ಪ್ರಕಟಿಸದೆ ಇರುವುದರಿಂದ ಸುಲಿಬೆಲೆ ಅವರು ಆ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಆ ಕ್ಷೇತ್ರದ ಟಿಕೆಟ್ ಅನ್ನು ವಿಶ್ವೇಶ್ವರ ಹೆಗಡೆ ಕಾವೇರಿ ಅವರಿಗೆ ನೀಡಬೇಕು ಎಂಬ ಒತ್ತಾಯ ಸಹ ಕೇಳಿಬರುತ್ತಿದೆ.