Home Karnataka State Politics Updates ಕಾಂಗ್ರೆಸ್ ಬಲಿಷ್ಠವಾಗಬೇಕು, ಯಾರೂ ಪಕ್ಷ ಬಿಡಬಾರದು.ಈಗ ಸೋತರೂ ಮುಂದೆ ಜಯವಿದೆ-ಕೇಂದ್ರ ಸಚಿವ ನಿತಿನ್ ಗಡ್ಕರಿ ಅಚ್ಚರಿಯ...

ಕಾಂಗ್ರೆಸ್ ಬಲಿಷ್ಠವಾಗಬೇಕು, ಯಾರೂ ಪಕ್ಷ ಬಿಡಬಾರದು.ಈಗ ಸೋತರೂ ಮುಂದೆ ಜಯವಿದೆ-ಕೇಂದ್ರ ಸಚಿವ ನಿತಿನ್ ಗಡ್ಕರಿ ಅಚ್ಚರಿಯ ಹೇಳಿಕೆ

Hindu neighbor gifts plot of land

Hindu neighbour gifts land to Muslim journalist

ಮುಂಬೈ : ದೇಶದ ಪ್ರಜಾ ಪ್ರಭುತ್ವಕ್ಕೆ ಬಲಿಷ್ಠ ಕಾಂಗ್ರೆಸ್ ಪಕ್ಷದ ಅಗತ್ಯವಿದೆ. ಕಾಂಗ್ರೆಸ್ ನಾಯಕರು ಸೋಲಿನಿಂದ ಎದೆಗುಂದಬಾರದು. ಈಗ ಸೋತಿದ್ದರೂ ಮುಂದೊಂದು ದಿನ ಜಯ ಕಾದಿದೆ. ಹೀಗಾಗಿ ಅದರ ನಾಯಕರು ಪಕ್ಷ ತೊರೆಯಬಾರದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿರುವುದು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.

ಸತತ ಚುನಾವಣಾ ಸೋಲುಗಳಿಂದ ಹೈರಾಣಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಯ ಮಾಜಿ ಅಧ್ಯಕ್ಷರೂ ಆಗಿರುವ ಹಾಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಾಂತ್ವನದ ಮಾತುಗಳನ್ನು ಹೇಳಿದ್ದಾರೆ.

ಪ್ರಜಾಪ್ರಭುತ್ವಕ್ಕೆ ಬಲಿಷ್ಠ ಕಾಂಗ್ರೆಸ್ ಪಕ್ಷದ ಅವಶ್ಯವಿದೆ. ಸತತ ಸೋಲಿ ನಿಂದ ಜರ್ಜರಿತವಾಗಿರುವ ಕಾಂಗ್ರೆಸ್ ಬಲಿಷ್ಠ ವಾಗಬೇಕು ಹಾಗೂ ಅದರ ನಾಯಕರಾರೂ ಪಕ್ಷ ತೊರೆಯಬಾರದು ಎಂಬುದು ನನ್ನ ಪ್ರಾಮಾಣಿಕ ಬಯಕೆ’ ಎಂದು ಬಹಿರಂಗ ವೇದಿಕೆಯೊಂದರಲ್ಲಿ ಗಡ್ಕರಿ ಹೇಳಿರುವುದು ಸಂಚಲನಕ್ಕೆ ಕಾರಣವಾಗಿದೆ.

‘ಕಾಂಗ್ರೆಸ್ ಮುಕ್ತ ಭಾರತ’ಕ್ಕೆ ಬಿಜೆಪಿ ಪಣ ತೊಟ್ಟಿರುವಾಗಲೇ, ಅದೇ ಪಕ್ಷದ ನಾಯಕರೊ ಬ್ಬರು ಕಾಂಗ್ರೆಸ್ ಬಲಿಷ್ಠವಾಗಬೇಕೆಂದು ವಾದ ಮಂಡಿಸಿರುವುದು ಕುತೂಹಲ ಕೆರಳಿಸಿದೆ.