Home Interesting ಬಿಜೆಪಿ ಕಾರ್ಯಕರ್ತನ ಪಾದ ಮುಟ್ಟಿ ನಮಸ್ಕಾರ ಮಾಡಿದ ಪ್ರಧಾನಿ ಮೋದಿ| ವೇದಿಕೆಯಲ್ಲೇ ನಡೆದ ಈ ಘಟನೆ|...

ಬಿಜೆಪಿ ಕಾರ್ಯಕರ್ತನ ಪಾದ ಮುಟ್ಟಿ ನಮಸ್ಕಾರ ಮಾಡಿದ ಪ್ರಧಾನಿ ಮೋದಿ| ವೇದಿಕೆಯಲ್ಲೇ ನಡೆದ ಈ ಘಟನೆ| ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ಸಖತ್ ವೈರಲ್

Hindu neighbor gifts plot of land

Hindu neighbour gifts land to Muslim journalist

ಭಾನುವಾರ ಉತ್ತರ ಪ್ರದೇಶದಲ್ಲಿ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡುತ್ತಾ ಇರುವ ಸಂದರ್ಭದಲ್ಲಿ ಒಂದು ಘಟನೆ ನಡೆದಿದೆ. ಪ್ರಧಾನಿ ಮೋದಿ ಅವರು‌ ಶ್ರೀರಾಮನ ಮೂರ್ತಿ ನೀಡಿದ ಕಾರ್ಯಕರ್ತನ ಪಾದ ಮುಟ್ಟಿ ನಮಸ್ಕರಿಸಿದ ವೀಡಿಯೋ ಒಂದು ವೈರಲ್ ಆಗಿದೆ.

ಚುನಾವಣಾ ಸಭೆಯ ವೇದಿಕೆಯಲ್ಲಿ ಶ್ರೀರಾಮ‌ನ ವಿಗ್ರಹವನ್ನು ನೀಡಿದ ಬಿಜೆಪಿ ಕಾರ್ಯಕರ್ತನ ಪಾದಗಳನ್ನು ಪ್ರಧಾನಿ ಮೋದಿ ಸ್ಪರ್ಶಿಸಿದರು. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಭಾರೀ ವೈರಲ್ ಆಗಿದೆ.

ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಉನ್ನಾವೊಗೆ ಆಗಮಿಸಿದಾಗ, ಜಿಲ್ಲಾಧ್ಯಕ್ಷ‌ ಅವಧೇಶ್ ಕಟಿಯಾರ್ ಅವರಿಗೆ ಶ್ರೀರಾಮನ ವಿಗ್ರಹವನ್ನು ನೀಡಿದಾಗ,ಅವಧೇಶ್ ಕಟಿಯಾರ್ ಮೊದಲು ಪ್ರಧಾನಿ‌ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡುತ್ತಾರೆ. ನಂತರ‌ ಪ್ರಧಾನಿ ಮೋದಿ ಅವರು ಈ ರೀತಿ ಮಾಡಬೇಡಿ ಎಂದು ಅವಧೇಶ್ ಕಟಿಯಾರ್ ಅವರ ಪಾದಗಳನ್ನು ಮುಟ್ಟಿದ್ದಾರೆ.

ಬಿಜೆಪಿ ಮುಖಂಡ ಅರುಣ್ ಯಾದವ್ ಅವರು ಈ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.