Home Karnataka State Politics Updates ಸಂಸತ್ತಿನಲ್ಲಿ ಅಶ್ಲೀಲ ವೀಡಿಯೋ ವೀಕ್ಷಣೆ !! | ತನ್ನ ತಪ್ಪು ಒಪ್ಪಿಕೊಂಡು ರಾಜೀನಾಮೆ ನೀಡಿದ ಶಾಸಕ

ಸಂಸತ್ತಿನಲ್ಲಿ ಅಶ್ಲೀಲ ವೀಡಿಯೋ ವೀಕ್ಷಣೆ !! | ತನ್ನ ತಪ್ಪು ಒಪ್ಪಿಕೊಂಡು ರಾಜೀನಾಮೆ ನೀಡಿದ ಶಾಸಕ

Hindu neighbor gifts plot of land

Hindu neighbour gifts land to Muslim journalist

ಶಾಸಕರೊಬ್ಬರು ಸಂಸತ್ತಿನಲ್ಲಿ ತಮ್ಮ ಫೋನ್‌ನಲ್ಲಿ 2 ಬಾರಿ ಅಶ್ಲೀಲ ವೀಡಿಯೋಗಳನ್ನು ನೋಡಿದ್ದೇನೆ ಎಂದು ಒಪ್ಪಿಕೊಂಡು ರಾಜೀನಾಮೆ ನೀಡಿರುವ ಘಟನೆ ಬ್ರಿಟನ್ ನಲ್ಲಿ ನಡೆದಿದೆ.

ಶಾಸಕ ನೀಲ್ ಪ್ಯಾರಿಶ್ ಸಂಸತ್ತಿನಲ್ಲಿ ಪೋರ್ನ್ ವೀಕ್ಷಣೆ ಮಾಡಿರುವುದಾಗಿ ಆರೋಪಿಸಲಾಗಿದ್ದು, ಅವರನ್ನು ಶುಕ್ರವಾರ ಅಮಾನತುಗೊಳಿಸಲಾಗಿತ್ತು. ಬಳಿಕ ಶನಿವಾರ ತಮ್ಮ ತಪ್ಪನ್ನು ಒಪ್ಪಿಕೊಂಡ ನೀಲ್ ಪ್ಯಾರಿಶ್ ರಾಜೀನಾಮೆ ನೀಡಿದ್ದಾರೆ. ತನ್ನ ತಪ್ಪನ್ನು ಒಪ್ಪಿಕೊಂಡ ಪ್ಯಾರಿಶ್, ಮೊದಲ ಬಾರಿಗೆ ವೀಕ್ಷಿಸಿದಾಗ ಅದು ತಮ್ಮ ಫೋನಿನಲ್ಲಿ ಆಕಸ್ಮಿಕವಾಗಿ ತೆರೆದುಕೊಂಡಿತ್ತು. ಆದರೆ ಎರಡನೇ ಬಾರಿ ನಾನು ಉದ್ದೇಶಪೂರ್ವಕವಾಗಿ ನೋಡಿರುವುದಾಗಿ ತಿಳಿಸಿದ್ದಾರೆ.

ನಾನು ಮಾಡಿರುವುದು ಅತ್ಯಂತ ದೊಡ್ಡ ಅಪರಾಧ. ಅದು ನನ್ನ ಹುಚ್ಚುತನದ ಕ್ಷಣವಾಗಿತ್ತು. ನಾನು ಮಾಡಿರುವ ಕೃತ್ಯದ ಬಗ್ಗೆ ನನಗೆ ಹೆಮ್ಮೆ ಇಲ್ಲ. ನನ್ನ ತಪ್ಪನ್ನು ಸಮರ್ಥಿಸಿಕೊಳ್ಳಲು ನಾನು ಬಯಸುವುದಿಲ್ಲ. ಇದರಲ್ಲಿ ಸಂಪೂರ್ಣ ತಪ್ಪಿರುವುದರಿಂದ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.