Home Karnataka State Politics Updates ಭಾರತ್‌ ಜೋಡೊ ಯಾತ್ರೆಯಲ್ಲಿ ಕಡ್ಡಾಯ ಕೋವಿಡ್‌ ನಿಯಮ ಪಾಲಿಸಿ : ಕೇಂದ್ರ ಆರೋಗ್ಯ ಸಚಿವರಿಂದ ರಾಹುಲ್‌...

ಭಾರತ್‌ ಜೋಡೊ ಯಾತ್ರೆಯಲ್ಲಿ ಕಡ್ಡಾಯ ಕೋವಿಡ್‌ ನಿಯಮ ಪಾಲಿಸಿ : ಕೇಂದ್ರ ಆರೋಗ್ಯ ಸಚಿವರಿಂದ ರಾಹುಲ್‌ ಗಾಂಧಿಗೆ ಪತ್ರ

Hindu neighbor gifts plot of land

Hindu neighbour gifts land to Muslim journalist

ಚೀನಾ ಮತ್ತು ಪೂರ್ವ ಏಷ್ಯಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ನಡುವೆ ಆರೋಗ್ಯ ಸಚಿವರು ಆದೇಶ ಹೊರಡಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಅಶೋಕ್ ಗೆಹ್ಲೋಟ್ ಅವರಿಗೆ ಬರೆದ ಪತ್ರದಲ್ಲಿ, ಮಾಂಡವಿಯಾ ಅವರು ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಮತ್ತು ಮಾಸ್ಕ್, ಸ್ಯಾನಿಟೈಸರ್ ಬಳಕೆಯನ್ನು ಜಾರಿಗೆ ತರಬೇಕು ಎಂದು ಹೇಳಿದ್ದಾರೆ.

“ಭಾರತ್ ಜೋಡೋ ಯಾತ್ರೆಯಲ್ಲಿ ಲಸಿಕೆ ಪಡೆದ ಜನರು ಮಾತ್ರ ಭಾಗವಹಿಸಬೇಕು. ಕೋವಿಡ್ ನಿಯಮಗಳನ್ನ ಅನುಸರಿಸಿ ಅಥವಾ ಯಾತ್ರೆಯನ್ನ ಸ್ಥಗಿತಗೊಳಿಸಿ” ಎಂದು ಪತ್ರದಲ್ಲಿ ಬರೆಯಲಾಗಿದೆ.

ಕೋವಿಡ್ ಶಿಷ್ಟಾಚಾರವನ್ನು ಅನುಸರಿಸಲು ಸಾಧ್ಯವಾಗದಿದ್ದರೆ, ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಹಿತದೃಷ್ಟಿಯಿಂದ ಭಾರತ್ ಜೋಡೋ ಯಾತ್ರೆಯನ್ನ ಮುಂದೂಡಬೇಕೆಂದು ಕೇಂದ್ರ ಆರೋಗ್ಯ ಸಚಿವರು ಪತ್ರದಲ್ಲಿ ವಿನಂತಿಸಿದ್ದಾರೆ.