Home Karnataka State Politics Updates ಲೋಕಸಭಾ ಚುನಾವಣೆ: ಕಾಂಗ್ರೆಸ್ 2ನೇ ಪಟ್ಟಿ ಪ್ರಕಟ ದಿನಾಂಕ ಬಹುತೇಕ ಫಿಕ್ಸ್, ತುದಿಗಾಲಲ್ಲಿ ನಿಂತ ಅಭ್ಯರ್ಥಿಗಳು...

ಲೋಕಸಭಾ ಚುನಾವಣೆ: ಕಾಂಗ್ರೆಸ್ 2ನೇ ಪಟ್ಟಿ ಪ್ರಕಟ ದಿನಾಂಕ ಬಹುತೇಕ ಫಿಕ್ಸ್, ತುದಿಗಾಲಲ್ಲಿ ನಿಂತ ಅಭ್ಯರ್ಥಿಗಳು !

Hindu neighbor gifts plot of land

Hindu neighbour gifts land to Muslim journalist

Congress Lokasabha Election:ಮುಂಬರುವ ಲೋಕಸಭಾ ಚುನಾವಣೆಗೆ 39 ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನಿನ್ನೆ ಶುಕ್ರವಾರ ಸಂಜೆ ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡುವ ದಿನಾಂಕ ಬಹುತೇಕ ಫಿಕ್ಸ್ ಆಗಿದೆ. ಕಾಂಗ್ರೆಸ್ ಲೋಕಸಭಾ (Congress Lokasabha Election)ಅಭ್ಯರ್ಥಿಗಳ ಎರಡನೇ ಪಟ್ಟಿ ಮಾರ್ಚ್ 11 ಮತ್ತು 13ರ ಒಳಗೆ ಪ್ರಕಟ ಮಾಡುವ ನಿರೀಕ್ಷೆಯಿದೆ. ಈಗಾಗಲೇ ಪ್ರತಿ ಲೋಕಸಭಾ ಸ್ಥಾನಕ್ಕೂ ಹಲವಾರು ಅಭ್ಯರ್ಥಿಗಳು ಟಿಕೆಟ್ ಗಾಗಿ ಕಾಯುತ್ತಿದ್ದು ಟಿಕೆಟ್ ಆಕಾಂಕ್ಷಿಗಳ ಟೆನ್ಶನ್ ಹೆಚ್ಚಿದೆ. ದೆಹಲಿಯ ಮಟ್ಟದಲ್ಲಿ ಬಹುದೊಡ್ಡ ಲಾಭಿ ನಡೆಯುತ್ತಿದೆ. ದುಡ್ಡಿರುವವರು ಪ್ರಭಾವಿಗಳ ಕೈ ಸಹಜವಾಗಿ ಮೇಲಾಗುತ್ತಿದೆ.

 

ಈ ಬಗ್ಗೆ ಸುದ್ದಿಗಾರರೊಂದಿಗೆ ನಿನ್ನೆ ರಾತ್ರಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು, ಸೋಮವಾರ ಮತ್ತೂಂದು ಸುತ್ತಿನ ಸ್ಕ್ರೀನಿಂಗ್ ಸಮಿತಿ ಸಭೆ ನಡೆಯಲಿದೆ. ತದನಂತರ ಎರಡನೇ ಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ ಎಂದರು.

 

ಇನ್ನೂ ಹಲವರ ಹೆಸರುಗಳು ಸ್ಕ್ರೀನಿಂಗ್ ಸಮಿತಿಯ ಪರಿಶೀಲನೆಯಲ್ಲಿವೆ. ಸೋಮವಾರದ ಸಭೆಯಲ್ಲಿ ಮತ್ತಷ್ಟು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳಲಿದೆ ಎಂದು ತಿಳಿಸಿದರು. ಆಯ್ಕೆ ಪ್ರಕ್ರಿಯೆ ಹೇಗೆ ಎಂಬ ಬಗ್ಗೆ ಸ್ಥಳೀಯ ಶಾಸಕರು, ವಿಧಾನಸಭಾ ಚುನಾವಣೆಯಲ್ಲಿ ಸೋತಿರುವವರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಆಲಿಸಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಉತ್ತರಿಸಿದರು.

 

ಕರ್ನಾಟಕದಲ್ಲಿ ಆಯ್ಕೆಯಾದ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಇಲ್ಲಿದೆ ನೋಡಿ.

1. ತುಮಕೂರು – ಮುದ್ದಹನುಮೇಗೌಡ – ಒಕ್ಕಲಿಗ

2. ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್ – ಈಡಿಗ

3. ಹಾಸನ – ಶ್ರೇಯಸ್ ಪಟೇಲ್ – ಒಕ್ಕಲಿಗ

4. ವಿಜಯಪುರ – ರಾಜು ಆಲಗೂರು – ಎಸ್.ಸಿ

5. ಮಂಡ್ಯ – ವೆಂಕಟರಮಣೇಗೌಡ (ಸ್ಟಾರ್ ಚಂದ್ರು) – ಒಕ್ಕಲಿಗ

6. ಬೆಂಗಳೂರು ಗ್ರಾಮಾಂತರ – ಡಿಕೆ ಸುರೇಶ್ – ಒಕ್ಕಲಿಗ

7. ಹಾವೇರಿ – ಆನಂದ್ ಸ್ವಾಮಿ ಗಡ್ಡದೇವರಮಠ

*ಇನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾದ ಕರ್ನಾಟಕ ಎರಡು ಕ್ಷೇತ್ರಗಳ ಅಭ್ಯರ್ಥಿಗಳು*

1. ಉಡುಪಿ-ಚಿಕ್ಕಮಗಳೂರು – ಜಯಪ್ರಕಾಶ್ ಹೆಗ್ಡೆ – ಬಂಟ್ಸ್

2. ಚಿತ್ರದುರ್ಗ – ಬಿ.ಎನ್ ಚಂದ್ರಪ್ಪ – ಎಸ್.ಸಿ

ಇದನ್ನೂ ಓದಿ : ಮಂಡ್ಯದಲ್ಲಿ ಶಾಲಾ ಬಾಲಕಿ ಮೇಲೆ ಹಲ್ಲೆ,ದುಷ್ಕರ್ಮಿಯನ್ನು ವಶಕ್ಕೆ ಪಡೆದ ಪೊಲೀಸರು