

ಪುತ್ತೂರು: ವಿಧಾನಸಭೆ ಚುನಾವಣೆಯಲ್ಲಿ ವೀರೋಚಿತ ಸೋಲುಂಡು, ಗ್ರಾಮ ಪಂಚಾಯತ್
ಉಪಚುನಾವಣೆಯಲ್ಲಿ ಸತ್ವ ಪರೀಕ್ಷೆಗೆ ಇಳಿದ ಪುತ್ತಿಲ ಪರಿವಾರ ಜಯದ ಖಾತೆ ತೆರೆದಿದೆ. ಆರ್ಯಾಪು ಗ್ರಾಮ ಪಂಚಾಯತಿನ 2ನೇ ವಾರ್ಡಿಗೆ ನಡೆದ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಜಯಭೇರಿ ಬಾರಿಸುವ ಮೂಲಕ ಪುತ್ತಿಲ ಪರಿವಾರದ ರಾಜಕೀಯ ಆಟ ಶುರುವಾದಂತಾಗಿದೆ.
ಪುತ್ತಿಲ ಪರಿವಾರದ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ 499, ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಗದೀಶ್ ಭಂಡಾರಿ ಗೆಣಸಿನಕುಮೇರು 353ಮತ ,ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಿ. ಪುರುಷೋತ್ತಮ ಪ್ರಭು ಅಬ್ಬುಗದ್ದೆ 146 ಮತ ಪಡೆದುಕೊಂಡಿದ್ದಾರೆ. 1237 ಮತದಾರರನ್ನು ಹೊಂದಿರುವ ಆರ್ಯಾಪಿನ ವಾರ್ಡ್ 2ರಲ್ಲಿ 999 ಮತ ಚಲಾವಣೆಯಾಗಿತ್ತು.
ಆರ್ಯಾಪು ಗ್ರಾ.ಪಂ.ನ ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿದ್ದ ಪಿಡಿಓ ನಾಗೇಶ್ ಎಂ.ರವರ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು.
ಇದನ್ನು ಓದಿ:













