Home Karnataka State Politics Updates Karnataka Budget 2023: 1 ರಿಂದ 10 ನೇ ತರಗತಿಯವರೆಗೂ ವಿಸ್ತರಿಸಿದ ಕೋಳಿ ಮೊಟ್ಟೆ, ಚಿಕ್ಕಿ,...

Karnataka Budget 2023: 1 ರಿಂದ 10 ನೇ ತರಗತಿಯವರೆಗೂ ವಿಸ್ತರಿಸಿದ ಕೋಳಿ ಮೊಟ್ಟೆ, ಚಿಕ್ಕಿ, ಬಾಳೆ ಹಣ್ಣು!

Hindu neighbor gifts plot of land

Hindu neighbour gifts land to Muslim journalist

Karnataka Budget 2023: ಈ ಬಾರಿ ಬಜೆಟ್​ನಲ್ಲಿ (Karnataka Budget 2023) ವಿದ್ಯಾರ್ಥಿಗಳಿಗೆ ಸಹಾಯವಾಗುವ ರೀತಿಯಲ್ಲಿ ಮತ್ತು ಶಿಕ್ಷಣಕ್ಕೆ ಒತ್ತು ನೀಡಿ ಹಲವಾರು ಕೊಡುಗೆ ನೀಡಲಾಗಿದೆ. ಮಕ್ಕಳಲ್ಲಿ ಪೌಷ್ಟಿಕಾಂಶ ಕಾಪಾಡುವ ದೃಷ್ಟಿಯಿಂದ ಈ ಹಿಂದೆ ಜಾರಿಯಲ್ಲಿದ್ದ ಯೋಜನೆಯನ್ನು ಮುಂದುವರೆಸುವುದಾಗಿ ಘೋಷಿಸಲಾಗಿದೆ. ಇನ್ಮುಂದೆ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಕೋಳಿ ಮೊಟ್ಟೆ, ಚಿಕ್ಕಿ, ಬಾಳೆ ಹಣ್ಣು ಸಿಗಲಿದೆ.

ಒಂದರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ಬಾರಿ ಮೊಟ್ಟೆ, ಚಿಕ್ಕಿ ಅಥವಾ ಬಾಳೆಹಣ್ಣನ್ನು ನೀಡಲಾಗುತ್ತಿತ್ತು. ಆದರೆ ಇದೀಗ ಅದನ್ನು ಎರಡು ದಿನ ನೀಡುವುದಾಗಿ ಘೋಷಣೆ ಮಾಡಲಾಗಿದೆ. 1 ರಿಂದ 10 ನೇ ತರಗತಿಯವರೆಗೂ ಈ ಸೌಲಭ್ಯ ಸಿಗಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 10ನೇ ತರಗತಿಯ 60 ಲಕ್ಷ ವಿದ್ಯಾರ್ಥಿಗಳಿಗೆ 280 ಕೋಟಿ ರೂ.ಗಳ ವೆಚ್ಚದಲ್ಲಿ ಒಂದು ಬಾರಿ ಮೊಟ್ಟೆ, ಶೇಂಗಾ ಚಿಕ್ಕಿ, ಬಾಳೆಹಣ್ಣನ್ನು ವಾರದಲ್ಲಿ ಎರಡು ದಿನ ವಿತರಿಸಲಾಗುವುದು ಎಂದು ಘೋಷಿಸಿದ್ದಾರೆ.

 

ಇದನ್ನು ಓದಿ: Karnataka budget 2023: ಹೆಚ್ಚಾಯ್ತು ಬಜೆಟ್ ಗಾತ್ರ, ಜನರಿಗೆ ಬಿತ್ತು ತೆರಿಗೆಯ ಹೊಡ್ತ !! ಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ದುಡ್ಡು ಗೊತ್ತಾ?