Home Karnataka State Politics Updates Siddaramaiah Biryani: ಸಿಎಂ ಮನೆಗೆ ಆಟೋದಲ್ಲಿ ಬಂದ ಬಿರಿಯಾನಿ ವಾಪಸ್, ಮತ್ತೆ ಬೆಂಜ್ ಕಾರಲ್ಲಿ ರಾಯಲ್...

Siddaramaiah Biryani: ಸಿಎಂ ಮನೆಗೆ ಆಟೋದಲ್ಲಿ ಬಂದ ಬಿರಿಯಾನಿ ವಾಪಸ್, ಮತ್ತೆ ಬೆಂಜ್ ಕಾರಲ್ಲಿ ರಾಯಲ್ ಆಗಿ ಎಂಟ್ರಿ ಕೊಡ್ತು ಅದೇ ಬಿರ್ಯಾ..ನಿ !!

Siddaramaiah Biryani

Hindu neighbor gifts plot of land

Hindu neighbour gifts land to Muslim journalist

Siddaramaiah Biryani: ದೇಶಾದ್ಯಂತ ಬಕ್ರಿದ್(Bakrid) ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರ ಮನೆಗೆ ಬಿಸಿ ಬಿಸಿಯಾದ, ರುಚಿಕಟ್ಟಾದ ಬಿರಿಯಾನಿ(Biryani) ಬಂದಿದೆ. ಆದರೆ ಈ ಬಿರಿಯಾನಿ ಎಂಟ್ರಿಯೇ ಬೇರೆಯಾಗಿತ್ತು. ಯಾಕೆಂದ್ರೆ ಬೆಂಜ್ ಕಾರಿನ ಮೂಲಕ ಈ ಬಿರಿಯಾನಿ ಸಿಎಂ ಮನೆ ಹೊಕ್ಕಿದೆ.

ಹೌದು, ಬಕ್ರಿದ್‌ ಹಬ್ಬ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಸಚಿವ ಜಮೀರ್‌ ಅಹ್ಮದ್‌(Jameer Ahmad) ಬಿರಿಯಾನಿಯನ್ನು ಕಳುಹಿಸಿದ್ದರು. ಆದರೆ ಆಟೋದಲ್ಲಿ ಬಿರಿಯಾನಿಯನ್ನು ಕಳುಹಿಸಲಾಗಿತ್ತು. ಇದಕ್ಕೆ ಅನುಮತಿ ಇಲ್ಲದ ಹಿನ್ನೆಲೆ ಆಟೋವನ್ನು ಒಳಗೆ ಬಿಡಲು ಪೊಲೀಸರು ಒಪ್ಪಲಿಲ್ಲ ಮತ್ತು ವಾಪಸ್‌ ಕಳುಹಿಸಲಾಯಿತು.

ಬಳಿಕ ಆಟೋದಲ್ಲಿದ್ದ ಬಿರಿಯಾನಿಯನ್ನು ಜಮೀರ್‌ ಬೆಂಬಲಿಗರು ಬೆಂಜ್‌(Benz) ಕಾರಿಗೆ ಶಿಫ್ಟ್‌ ಮಾಡಿ, ವಾಪಸ್‌ ತಂದಿದ್ದಾರೆ. ನಂತರ ಬೆಂಜ್‌ ಕಾರಿಗೆ ಅನುಮತಿ ನೀಡಿದ್ದರಿಂದ ಬಿರಿಯಾನಿ ಒಳಗೆ ತೆಗೆದುಕೊಂಡು ಹೋಗಲಾಗಿದೆ. ಬೆಂಜ್ ಕಾರಿನಲ್ಲಿ ಬಿರಿಯಾನಿ ಇಟ್ಟು ಕೊನೆಗೂ ಸಿಎಂ(CM) ನಿವಾಸದೊಳಗೆ ತೆರಳಿ ಅದನ್ನು ಅಲ್ಲಿ ಇಳಿಸಿ ಜಮೀರ್ ಬೆಂಬಲಿಗರು ವಾಪಸಾಗಿದ್ದಾರೆ.

ಇನ್ನು ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರಿದ್ ಹಬ್ಬದ ಪ್ರಯುಕ್ತ ನಗರದ ಚಾಮರಾಜ ಪೇಟೆಯಲ್ಲಿನ(Chamaraja pete) ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ನಡೆದಿದೆ. ಸಚಿವರಾದ ಜಮೀರ್ ಅಹಮದ್ ಖಾನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಈ ವೇಳೆ ಮಾತನಾದಿದ ಸಿದ್ದರಾಮಯ್ಯ ಅವರು, ನಾವೆಲ್ಲಾರೂ ವಿವಿಧ ಧರ್ಮ, ಜಾತಿಗೆ ಸೇರಿದ್ದರೂ ನಾವೆಲ್ಲ ಮನುಷ್ಯರು. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.