Home Karnataka State Politics Updates Lakshmana savadi: ಬಿಜೆಪಿ ಸೇರ್ಪಡೆ ವಿಚಾರ- ಬಿಗ್ ಅಪ್ಡೇಟ್ ನೀಡಿದ ಲಕ್ಷ್ಮಣ ಸವದಿ !!

Lakshmana savadi: ಬಿಜೆಪಿ ಸೇರ್ಪಡೆ ವಿಚಾರ- ಬಿಗ್ ಅಪ್ಡೇಟ್ ನೀಡಿದ ಲಕ್ಷ್ಮಣ ಸವದಿ !!

Hindu neighbor gifts plot of land

Hindu neighbour gifts land to Muslim journalist

 

Lakshmana savadi: ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಲಕ್ಷ್ಮಣ ಸವದಿ(Lakshmana savadi)ಯವರು ಮರಳಿ ಬಿಜೆಪಿ ಸೇರುತ್ತಾರೆ, ಲೋಕಸಭಾ ಟಿಕೆಟ್ ಪಡೆದು ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬೆನ್ನಲ್ಲೇ ನಾನು ಮತ್ತೆ ಬಿಜೆಪಿಗೆ ಹೋಗುವ ಅಗತ್ಯವಿಲ್ಲ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.

ಹೌದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಶಂಕು ಸ್ಥಾಪನೆಯ ಸಮಾರಂಭದ ಸಿದ್ಧತೆ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ನನ್ನ ಪಾಲಿಗೆ ಮುಗಿದ ಅಧ್ಯಾಯವಾಗಿದೆ. ಈಗ ಅವರಿಗೆ ನಾನು ಬೇಕಾಗಿರಬಹುದು. ಆದರೆ ನಾನು ಹೋಗುವುದಿಲ್ಲ. ಅವರು ನನ್ನನ್ನು ನಡೆಸಿಕೊಂಡ ರೀತಿಗೆ ನಾನು ಬಿಜೆಪಿಗೆ ಹಿಂದಿರುಗಿ ಹೋಗಲ್ಲ ಬಿಜೆಪಿ ಗಾಳಕ್ಕೆ ಬೀಳುವ ಆಸಾಮಿ ನಾನಲ್ಲ. ಕಾಂಗ್ರೆಸ್ ನನ್ನನ್ನು ಗೌರವದಿಂದ ಬರ ಮಾಡಿಕೊಂಡಿದೆ. ನನಗೆ ಆಶ್ರಯ ನೀಡಿದೆ ಎಂದರುಹ

ಅಂದಹಾಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ(Lakshmana savadi) ಬಿಜೆಪಿ ತೊರೆದು ಕಾಂಗ್ರೆಸ್ ತೊರೆದಿದ್ದರು. ಆದರೆ ಅಚ್ಚರಿ ಎಂಬಂತೆ ಕೆಲವು ದಿನಗಳ ಹಿಂದಷ್ಟೇ ಜಗದೀಶ್ ಶೆಟ್ಟರ್(Jagadish shetter) ಮರಳಿ ಬಿಜೆಪಿ ಸೇರಿ ಮತ್ತೆ ತಮ್ಮ ಮನೆ ಸೇರಿಕೊಂಡರು. ಈ ಬೆನ್ನಲ್ಲೇ ಸವದಿ ಕೂಡ ಮರಳುತ್ತಾರೆ ಎಂಬ ಚರ್ಚೆ ಜೋರಾಗಿದ. ಆದರೆ ಸವದಿ ಈ ವಿಚಾರವನ್ನು ತಳ್ಳಿಹಾಕಿದ್ದಾರೆ. ಜಗದೀಶ್ ಶೆಟ್ಟರ್ ಕೂಡ ಹೀಗೆ ಹೇಳುತ್ತಲೇ ಸಡನ್ ಆಗಿ ಘರ್ ವಾಪ್ಸಿ ಆದರು. ಸವದಿಯವರೂ ಹೀಗೆ ಆದರೂ ಅಚ್ಚರಿ ಏನಿಲ್ಲ. ರಾಜಕೀಯ ಆಟ ಬಲ್ಲವರಾರು ಅಲ್ಲವೇ?