Home Karnataka State Politics Updates D K Shivkumar: ಕಾಂಗ್ರೆಸ್ ನದ್ದು ಗೃಹ ಜ್ಯೋತಿ ಅಲ್ಲ, ಸುಡುವ ಜ್ಯೋತಿ ಎಂದ ಕುಮಾರಸ್ವಾಮಿ..!!...

D K Shivkumar: ಕಾಂಗ್ರೆಸ್ ನದ್ದು ಗೃಹ ಜ್ಯೋತಿ ಅಲ್ಲ, ಸುಡುವ ಜ್ಯೋತಿ ಎಂದ ಕುಮಾರಸ್ವಾಮಿ..!! ಅಯ್ಯೋ ಪಾಪ ನಮ್ ಕುಮಾರಣ್ಣ… ಎಂದು ಮಾತಲ್ಲೇ ತಿವಿದ ಡಿಕೆಶಿ!!

D K Shivkumar
Image source- Oneindia kannada, Public TV

Hindu neighbor gifts plot of land

Hindu neighbour gifts land to Muslim journalist

Guaranty Schemes :ಕಾಂಗ್ರೆಸ್‌ ಸರ್ಕಾರೋ(Congress Government) ಗ್ಯಾರಂಟಿ ಯೋಜನೆಗಳಲ್ಲಿ(Guaranty Schemes)ಒಂದಾಗಿರುವ ಗೃಹ ಜ್ಯೋತಿ ಯೋಜನೆ ಹಾಗೂ ವಿದ್ಯುತ್ ಬಿಲ್(Current bill) ನಲ್ಲಿ ಹೆಚ್ಚಳವಾಗಿರುವ ಕುರಿತು ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ(H D Kumaraswamy) ಕಿಡಿಕಾರಿದ್ದು, ಗೃಹ ಜ್ಯೋತಿ ಅಲ್ಲ ಇದು ಸುಡುವ ಜ್ಯೋತಿ ಎಂದು ವ್ಯಂಗ್ಯವಾಡಿದ್ದರು. ಇದೀಗ ಕುಮಾರಸ್ವಾಮಿ ಮಾತಿಗೆ ಡಿ ಕೆ ಶಿವಕುಮಾರ್‌(D K Shivkumar) ತಿರುಗೇಟು ನೀಡಿದ್ದಾರೆ.

ಹೌದು, ಗೃಹಜ್ಯೋತಿ ಎಂದು ಹೇಳುತ್ತಾ ಎಲ್ಲರ ಮನೆಗಳಲ್ಲಿ ಜ್ಯೋತಿ ಬೆಳಗಿಸುವ ನಾಟಕ ಆಡುತ್ತಿರುವ ಕಾಂಗ್ರೆಸ್ ಸರ್ಕಾರ, ಜನರ ಮೇಲೆ ಬೆಲೆ ಏರಿಕೆ ಬರೆ ಎಳೆಯುತ್ತಿದೆ. ಎರಡು ಪಟ್ಟು, ಮೂರು ಪಟ್ಟು ಹೆಚ್ಚು ದರ ವಿಧಿಸಿರುವ ವಿದ್ಯುತ್ ಬಿಲ್ಲುಗಳನ್ನು ನೀಡುತ್ತಿರುವುದು ಗೃಹಜ್ಯೋತಿಯೇ? ಅದು ಗೃಹಜ್ಯೋತಿ(Gruha jyoti)ಯಲ್ಲ, ಸುಡುಜ್ಯೋತಿ ಎಂದು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. ಇದಕ್ಕೀಗ ಉಪಮುಖ್ಯಮಂತ್ರಿ ಡಿಕೆಶಿ ಟಾಂಗ್ ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ(Benglore) ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ನಾವು ಎಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದೀವಿ..? ಚುನಾವಣಾ ಫಲಿತಾಂಶ ಬರುವ ಮೊದಲೇ ಎಲ್ಲವೂ ಹೆಚ್ಚಾಗಿತ್ತು. ಕುಮಾರಸ್ವಾಮಿ(Kumaraswamy) ಅವ್ರೇ ನಿಮ್ಮ ಕಾಲದಲ್ಲೇ ಸಾವಿರಾರು ಕೋಟಿ ಜಾಸ್ತಿ ಮಾಡಿದ್ದಾರೆ. ಇದೆಲ್ಲಾ ನಿಮಗೆ ಗೊತ್ತಿಲ್ಲದೇ ಇರಬಹುದು. ಆದರೆ ನಾನೊಬ್ಬ ಪವರ್ ಮಿನಿಸ್ಟರ್ ಆಗಿದ್ದವನು ನನಗೆ ಎಲ್ಲವೂ ಗೊತ್ತಿದೆ. ಪಾಪ ಕುಮಾರಣ್ಣ, ನಿಮಗೇನಾದರೂ ಹೇಳಬೇಕು ಅಂತಿದ್ದರೆ ದಯವಿಟ್ಟು ಸಲಹೆ ಕೊಡಿ ಎಂದರು.

ಈ ಸರ್ಕಾರದಿಂದ ನಮಗೆ ಸಹಾಯವಾಗುತ್ತಿದೆ ಎಂದು ಬಡವರು ಸಂತೋಷದಿಂದ ಇದ್ದಾರೆ. ನಮ್ಮ ಅಕ್ಕ ತಂಗಿಯರು ನಮ್ಮ ಶಕ್ತಿ ಯೋಜನೆಯಿಂದ ದೇವಸ್ಥಾನಗಳಿಗೆ ಭೇಟಿ ನೀಡಿ ಧರ್ಮಯಾತ್ರೆ ಮಾಡುತ್ತಿದ್ದಾರೆ. ಅವರ ಖುಷಿ ನೋಡಲಾಗದೇ, ಒಂದು ಕಾಳು ಅಕ್ಕಿ ಕಡಿಮೆ ಕೊಟ್ಟರೂ ಹೋರಾಟ ಮಾಡುತ್ತೇನೆ ಎಂದು ಸಂಕಟಪಡುತ್ತಿದ್ದಾರೆ. ಯಡಿಯೂರಪ್ಪನವರು ಧರಣಿ ಮಾಡುವುದರಲ್ಲಿ ಸಮರ್ಥರು. ಈಗಲೂ ಅವರು ವಿಧಾನಸಭೆಗೆ ಬಂದು ಹೋರಾಟ ಮಾಡಲಿ ಎಂದು ಹೇಳಿದರು.

ಅಲ್ಲದೆ ಬೆಂಗಳೂರು ಅಭಿವೃದ್ಧಿ(Benglore Development) ಕುರಿತು ಮಾತನಾಡಿದ ಅವರು ಬಸವರಾಜ ಬೊಮ್ಮಾಯಿ ಅವರು 2 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿ ಬೆಂಗಳೂರಿನ ಅಭಿವೃದ್ಧಿಗೆ ಕೆಲವು ಉತ್ತಮ ಯೋಜನೆ ಹಾಕಿಕೊಂಡಿದ್ದರು. ಆದರೆ ಅವರದ್ದು ಸಮ್ಮಿಶ್ರ ಸರ್ಕಾರವಾಗಿದ್ದ ಕಾರಣ ಆ ಯೋಜನೆಗಳನ್ನು ಜಾರಿ ಮಾಡಲು ಬಿಡಲಿಲ್ಲ. ಹೀಗಾಗಿ ಅವರನ್ನು ಭೇಟಿ ಮಾಡಿ ಅವರ ಸಲಹೆ, ಅಭಿಪ್ರಾಯ ಪಡೆಯಲಿದ್ದೇನೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಗೆ ಮಾತಿನಲ್ಲೇ ತಿವಿದರು.

ಇದನ್ನೂ ಓದಿ : ಕ್ಯಾಮರಾಮ್ಯಾನ್‌ಗೆ ತುಂಬಾ ಜೂಮ್ ಮಾಡ್ಬೇಡಿ ಎಂದ ಫುಟ್ಬಾಲ್​ ದಿಗ್ಗಜ ರೊನಾಲ್ಡೊ !ಯಾಕೆ ಗೊತ್ತಾ?