Home Karnataka State Politics Updates Kodi mutt shri: ಚುನಾವಣೆ ಹೊಸ್ತಿಲಲ್ಲೇ ರಾಜ್ಯ ಸರ್ಕಾರದ ಕುರಿತು ಸ್ಪೋಟಕ ಭವಿಷ್ಯ ನುಡಿದ ಕೋಡಿ...

Kodi mutt shri: ಚುನಾವಣೆ ಹೊಸ್ತಿಲಲ್ಲೇ ರಾಜ್ಯ ಸರ್ಕಾರದ ಕುರಿತು ಸ್ಪೋಟಕ ಭವಿಷ್ಯ ನುಡಿದ ಕೋಡಿ ಶ್ರೀ !! ಭಾರೀ ಅಚ್ಚರಿ ಮೂಡಿಸಿದ ಸ್ವಾಮಿಜಿಗಳ ಹೇಳಿಕೆ

Kodi mutt seer

Hindu neighbor gifts plot of land

Hindu neighbour gifts land to Muslim journalist

Kodi mutt seer:ರಾಜ್ಯದಲ್ಲಿ ಕೋಡಿಮಠದ ಶ್ರೀಗಳ(Kodi mutt seer) ಭವಿಷ್ಯ ಎಂದರೆ ಅಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ. ಯಾಕೆಂದರೆ ಇದೂವರೆಗೂ ಅವರು ನುಡಿದ ಭವಿಷ್ಯಗಳು ಸುಳ್ಳಾಗಿಲ್ಲ !! ದೇಶದಲ್ಲಾಗಲಿ, ನಾಡಿನಲ್ಲಾಗಲಿ ಮುಂದೆ ಆಗುವ ವಿಚಾರಗಳನ್ನು ಅವರು ಮೊದಲೆ ಗ್ರಹಿಸಿ ನುಡಿಯುತ್ತಾರೆ. ಅಂತೆಯೇ ರಾಜ್ಯ ಸರ್ಕಾರದ ಕುರಿತು ಸ್ವಾಮಿಗಳು ಆಗಾಗ ಭವಿಷ್ಯವಾಣಿ ನುಡಿಯುತ್ತಿರುತ್ತಾರೆ. ಇದೀಗ ಶ್ರೀಗಳು ಮತ್ತೆ ರಾಜ್ಯ ಸರ್ಕಾರದ(State government)ಕುರಿತು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಹೌದು, ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ, ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆ ಎಂದು ಹೇಳಿದ್ದ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿಯವರ ಹಲವು ಭವಿಷ್ಯಗಳು ನಿಜವಾಗಿವೆ. ಅಂತೆಯೇ ಇದೀಗ ಶ್ರೀಗಳು ಸರ್ಕಾರದ ಕುರಿತು ಮಹತ್ವದ ಭವಿಷ್ಯವೊಂದನ್ನು ನುಡಿದಿದ್ದು, ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗುತ್ತದೆ ಎಂದಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು, ಸರ್ಕಾರದ ಕುರಿತಂತೆ ಮಾತನಾಡಿ ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗ್ತಿದೆ. ಆದರೇ ಏನೂ ಆಗೋದಿಲ್ಲ. ನೋಡೋರಿಲ್ಲ, ಕೇಳೋರಿಲ್ಲ. ಆನಂದ ಪಡುವವರಿಲ್ಲ. ಜೊತೆಗೆ ರಾಜ್ಯ ಸರ್ಕಾರಕ್ಕೆ ಏನೂ ತೊಂದರೆ ಆಗೋದಿಲ್ಲ. ಇದನ್ನು ಬಿಟ್ಟು ನಾನು ಏನೂ ಹೇಳಲ್ಲ. ನನಗೆ ಎಲ್ಲರೂ ಬೇಕಾಗಿರೋರು ಎಂದು ಹೇಳಿದರು.

ಅಲ್ಲದೆ ಈ ವರ್ಷವೂ ಮಳೆಗೂ ತೊಂದರೆ ಇಲ್ಲ. ಅನ್ನಕ್ಕೂ ಕೊರತೆಯಿಲ್ಲ. ದೇಶ, ರಾಜ್ಯದಲ್ಲಿ ವಿಪರೀತ ಮಳೆಯಾಗೋ ಲಕ್ಷಣವಿದೆ ಎಂದು ಭವಿಷ್ಯ ನುಡಿದಿದ್ದಾರೆ. ಮಳೆಗೆ ಯಾವುದೇ ತೊಂದರೆ ಇಲ್ಲ. ಮೊನ್ನೆ ಬಂದ ರೀತಿಯೇ ಇನ್ನೂ ಭಾರೀ ಮಳೆ ಬರಲಿದೆ. ಗುಡುಗು ಸಹಿತ ಮಳೆಯಿಂದ ಅಪಮೃತ್ಯು ಉಂಟಾಗಲಿದೆ. ಪ್ರಕೃತಿಯಿಂದಲೂ ಬಹಳ ಹಾನಿಯಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Big boss-10: ಬಿಗ್ ಬಾಸ್ ಸೀಸನ್-10ರ ಕಂಟೆಸ್ಟೆಂಟ್ಸ್ ಲಿಸ್ಟ್ ವೈರಲ್ ?! ಭಾರೀ ಕುತೂಹಲ ಕೆರಳಿಸಿದ ಈ ಸಲದ ಸ್ಪರ್ಧಿಗಳು