Home Karnataka State Politics Updates Kichcha Sudeep: ಇಂದು ಬಿಜೆಪಿ ಪರ ಕಿಚ್ಚ ಸುದೀಪ್‌ ಮತಬೇಟೆ; ಎಲ್ಲೆಲ್ಲಿ ಪ್ರಚಾರ ಗೊತ್ತಾ?

Kichcha Sudeep: ಇಂದು ಬಿಜೆಪಿ ಪರ ಕಿಚ್ಚ ಸುದೀಪ್‌ ಮತಬೇಟೆ; ಎಲ್ಲೆಲ್ಲಿ ಪ್ರಚಾರ ಗೊತ್ತಾ?

Kichcha Sudeep

Hindu neighbor gifts plot of land

Hindu neighbour gifts land to Muslim journalist

Kichcha Sudeep: ರಾಜ್ಯ ವಿಧಾನಸಭೆ ಚುನಾವಣೆ(election) ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ಮೂರು ಪಕ್ಷದ ನಾಯಕರು ಪ್ರಚಾರಬೇಟೆಗೆ ಇಳಿದಿದ್ದಾರೆ. ಇದೀಗ ಮತದಾರರನ್ನು ಸೆಳೆಯಲು ನಾನಾ ಕಸರತ್ತು ನಡೆಸಿದ್ದಾರೆ. ಆಗಾಗ ಕೇಂದ್ರದಿಂದ ನಾಯಕರು ಬಂದು ಚುನಾವಣೆ ರಣಕಳಹೆ ಊದಲಿದ್ದಾರೆ. ಇದೀಗ ಬಿಜೆಪಿ ಪರವಾಗಿ ಸ್ಯಾಂಡಲ್‌ ವುಡ್‌ ನಟ ಕಿಚ್ಚ ಸುದೀಪ್‌(kichcha Sudeep) ಅವರು ಮತಬೇಟೆಗೆ ಇಳಿದಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸುದೀಪ್‌ ಸಾತ್‌ ಕೊಡುತ್ತಿದ್ದಾರೆ . ಇಂದು ಬಿಜೆಪಿ ಅಭ್ಯರ್ಥಿಗಳ ಪರ ಸುದೀಪ್ ಮತ್ತೊಮ್ಮೆ ಭರ್ಜರಿ ಕ್ಯಾಂಪೇನ್ ನಡೆಸಲಿದ್ದಾರೆ. ಕಿಚ್ಚ ಇಂದು ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ ಸೇರಿದಂತೆ ಒಟ್ಟು 6 ಕಡೆ ಪ್ರಚಾರ ಮಾಡಲಿದ್ದಾರೆ.

ಇಂದು ಕೋಟೆನಾಡು ಚಿತ್ರದುರ್ಗಕ್ಕೆ ಕಿಚ್ಚ ಸುದೀಪ್‌ ಎಂಟ್ರಿ ಕೊಡಲಿದ್ದು, ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ಪರ ಪ್ರಚಾರ ನಡೆಸಲಿದ್ದಾರೆ. ಇಂದು ಬೆಳಗ್ಗೆ 10:55ರಿಂದ 11:40ರವರೆಗೆ ರೋಡ್ ಶೋ ನಡೆಸಿ ಮತಯಾಚನೆ ನಡೆಸಲಿದ್ದಾರೆ. ಬಳಿಕ ಜಗಳೂರಿಗೆ ತೆರಳಲಿರುವ ಕಿಚ್ಚ ಸುದೀಪ್, ಅಲ್ಲೂ ಕೂಡ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಮಾಯಕೊಂಡ, ಸಂಜೆ ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರಗಳಲ್ಲಿ ರೋಡ್ ಶೋ ಮಾಡಲಿದ್ದಾರೆ. ಬಳಿಕ ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಮತಯಾಚನೆ ನಡೆಸಲಿದ್ದಾರೆ.
ಒಟ್ಟಾರೆಯಾಗಿ ವಿಧಾನಸಭೆ ಚುನಾವಣೆ ಹತ್ರ ಬರುತ್ತಿದ್ದು, ಬಿಜೆಪಿ ಪರ ಕಿಚ್ಚ ಸುದೀಪ ಪ್ರಚಾರ ಮಾಡುತ್ತಿರುವುದು ಮತ್ತಷ್ಟು ಬಲಬಂದ ಹಾಗೆ ಆಗಿದೆ.

ಇದನ್ನೂ ಓದಿ: CM Bommai: ಮುಖ್ಯಮಂತ್ರಿ ಬೊಮ್ಮಾಯಿ ಲಿಂಗಾಯತರಲ್ಲ – ಸುರ್ಜೇವಾಲ: ಹಾಗಾದ್ರೆ ರಾಹುಲ್ ಗಾಂಧಿ ಲಿಂಗಾಯತರಾ ? – ಬೊಮ್ಮಾಯಿ