Home Karnataka State Politics Updates Jagadish shettar: ಬಿಜೆಪಿ ಸೇರಿದ ಜಗದೀಶ್ ಶೆಟ್ಟರ್’ಗೆ ಬಿಗ್ ಶಾಕ್!!

Jagadish shettar: ಬಿಜೆಪಿ ಸೇರಿದ ಜಗದೀಶ್ ಶೆಟ್ಟರ್’ಗೆ ಬಿಗ್ ಶಾಕ್!!

Jagadish shettar

Hindu neighbor gifts plot of land

Hindu neighbour gifts land to Muslim journalist

Jagadish shettar: ನಿನ್ನೆ ತಾನೆ ಕಾಂಗ್ರೆಸ್ ತೊರೆದು ತಮ್ಮ ಮಾತೃ ಪಕ್ಷವಾದ ಬಿಜೆಪಿ ಸೇರಿರುವ ಜಗದೀಶ್ ಶೆಟ್ಟರ್ ಅವರಿಗೆ ಇದೀಗ ಬಿಗ್ ಶಾಕ್ ಒಂದು ಎದುರಾಗಿದೆ.

ಇದನ್ನೂ ಓದಿ: Mallikarjun Kharge: ಕಾಂಗ್ರೆಸ್‌ಗೆ ಕೈ ಕೊಟ್ಟ ಶೆಟ್ಟರ್‌; ಡಿ.ಕೆ.ಶಿವಕುಮಾರ್‌ ಗೆ ಎಚ್ಚರಿಕೆ ನೀಡಿದ ಎಐಸಿಸಿ ಅಧ್ಯಕ್ಷ ಖರ್ಗೆ!!!

ಕರ್ನಾಟಕ ರಾಜಕೀಯದಲ್ಲಿ ನಿನ್ನೆ ಮಹತ್ವದ ಬೆಳವಣಿಗೆಯಾಗಿದೆ. ಕೆಲ ಸಮಯದ ಹಿಂದಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್, ಬಿಜೆಪಿಯ ವಿರುದ್ಧ ವಾಚಾಮ ಗೋಚರವಾಗಿ ವಾಗ್ದಾಳಿ ನಡೆಸುತ್ತಿದ್ದ ಜಗದೀಶ್ ಶೆಟ್ಟರ್(Jagadish shettar) ಅವರು ಭಾರೀ ಅಚ್ಚರಿಯ ಎಂಬಂತೆ ಮತ್ತೆ ಬಿಜೆಪಿಯನ್ನು ಸೇರಿದ್ದಾರೆ. ಇದರಿಂದ ಕಾಂಗ್ರೆಸ್ ಗೆ ದೊಡ್ಡ ಆಘಾತ ಉಂಟಾಗಿದೆ. ಆದರೆ ಈ ಬೆನ್ನಲ್ಲೇ ಜಗದೀಶ್ ಶೆಟ್ಟರ್’ಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಪಕ್ಷಾಂತರ ನಿಷೇದ ಕಾಯ್ದೆಯ ಮೂಲಕ ಶಾಕ್ ನೀಡಲು ಮುಂದಾಗಿದ್ದಾರೆ.

 

ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡ ಹೊರಟ್ಟಿಯವರು ಜಗದೀಶ್ ಶೆಟ್ಟರ್ ಕಾಲ್ ಮಾಡಿ ನಾನು ಬಿಜೆಪಿಗೆ ಹೋಗ್ತಿದ್ದೀನಿ ರಾಜಿನಾಮೇ ಕೊಡುತ್ತೇನೆ. ಪತ್ರವನ್ನು ಮೇಲ್ ಮಾಡ್ತಿನಿ ಎಂದು ಹೇಳಿದರು. ಆದರೃ ಇದು ಪರಿಗಣಿಸಲಾಗದು. ಯಾವುದೇ ಸದಸ್ಯ ನೇರವಾಗಿ ಬಂದು ರಾಜೀನಾಮೆ ಕೊಡಬೇಕು ಎಂದು ಹೊರಟ್ಟಿ ಹೇಳಿದ್ದಾರೆ. ಅಲ್ಲದೆ ಇನ್ನೂ ಜಗದೀಶ್ ಶೆಟ್ಟರ್ ಅವರು ಈಗಲೂ ಕಾಂಗ್ರೆಸ್ ಸದಸ್ಯರು. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆದರೂ ಆಗಬಹುದು ಎಂದು ತಿಳಿಸಿದ್ದಾರೆ.