Home Karnataka State Politics Updates V Somanna: ವಿ. ಸೋಮಣ್ಣ ಕಾಂಗ್ರೆಸ್ ಸೇರೋದು ಫಿಕ್ಸ್ ?! ಈ ಕ್ಷೇತ್ರದಿಂದಲೇ ಲೋಕಸಭೆ ಸ್ಪರ್ಧೆ...

V Somanna: ವಿ. ಸೋಮಣ್ಣ ಕಾಂಗ್ರೆಸ್ ಸೇರೋದು ಫಿಕ್ಸ್ ?! ಈ ಕ್ಷೇತ್ರದಿಂದಲೇ ಲೋಕಸಭೆ ಸ್ಪರ್ಧೆ ?!

V Somanna join Congress

Hindu neighbor gifts plot of land

Hindu neighbour gifts land to Muslim journalist

V Somanna join Congress: ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಅವರು ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾದ ಬಳಿಕ ರಾಜ್ಯ ಬಿಜೆಪಿ(BJP)ಯಲ್ಲಿ ಕೆಲವು ಊಹಿಸದ ಬದಲಾವಣೆಗಳು ನಡೆಯುತ್ತಿವೆ. ಕೆಲವು ಹಿರಿಯ ನಾಯಕರು ಅಸಮಾಧಾನಿತರಾಗಿ ಮನದ ನೋವನ್ನು ಪರೋಕ್ಷವಾಗಿ ತೋಡಿಕೊಳ್ಳುತ್ತಿದ್ದಾರೆ. ಅಂತೆಯೇ ಬಹಳ ಹಿಂದಿನಿಂದಲೂ ಕೆಲವು ಬಿಜೆಪಿ ನಾಯಕರ ಕಾಂಗ್ರೆಸ್ ಸೇರ್ಪಡೆ ವಿಚಾರ ಕೂಡ ಈಗ ಗರಿಗೆದರಿವೆ.

ಕರ್ನಾಟಕದಲ್ಲಿ ಬಿಜೆಪಿ ಹೀನಾಯವಾಗಿ ಸೋಲುಂಡ ಬಳಿಕ ನಮಗೆ ರಾಜ್ಯದಲ್ಲಿ ಉಳಿಗಾಲವಿಲ್ಲ ಎಂದು ಅರಿತ ಕೆಲ ಪ್ರಬಲ ನಾಯಕರು ಕಾಂಗ್ರೆಸ್(Congress) ಸೇರಲು ಮುಂದಾಗಿದ್ದು, ರಾಜ್ಯದ್ಯಾಂತ ಭಾರೀ ಸದ್ದು ಮಾಡಿತ್ತು. ಇದೀಗ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗುತ್ತಿದ್ದಂತೆ ಮತ್ತೆ ತೆರೆಮರೆಯಲ್ಲಿ ಈ ವಿಚಾರಗಳು ಜೋರಾಗೀದ್ದು, ಬಿಜೆಪಿ ಪ್ರಬಲ ನಾಯಕ, ಮಾಜಿ ಸಚಿವ ವಿ ಸೋಮಣ್ಣ ಕಾಂಗ್ರೆಸ್ ಸೇರೋದು (V Somanna join Congress) ಬಹುತೇಕ ಫಿಕ್ಸ್ ಎಂದು ಹೇಳಲಾಗುತ್ತಿದ್ದು, ಅವರು ಸ್ಪರ್ಧಿಸುವ ಲೋಕಸಭಾ ಕ್ಷೇತ್ರವೂ ಫಿಕ್ಸ್ ಆಗಿದೆ ಎಂಬ ಸುದ್ದಿಯೊಂದು ಸದ್ದುಮಾಡುತ್ತಿದೆ.

ಹೌದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿ, ಹೀನಾಯವಾಗಿ ಸೋತು ಕೊನೆಗೆ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿದರೂ ಅದೂ ತನ್ನ ಕೈತಪ್ಪಿದ್ದು ಈಗ ಸೋಮಣ್ಣನವರಿಗೆ ಭಾರೀ ನಿರಾಸೆಯಾಗಿದೆ. ಈ ಬೆನ್ನಲ್ಲೇ ಡಿ ಕೆ ಶಿವಕುಮಾರ್ ಜೊತೆ ಸೋಮಣ್ಣನಿರುವ ಫೋಟೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಅಲ್ಲದೆ ಇನ್ನೂ ಮುಖ್ಯವಾದ ವಿಚಾರ ಅಂದ್ರೆ ಈ ಸಲ 20 ಲೋಕಸಭಾ ಸೀಟ್ ಗೆಲ್ಲಬೇಕು ಅಂದುಕೊಂಡಿರುವ ಕಾಂಗ್ರೆಸ್ 20 ಹಳೇ ಮೈಸೂರು ಭಾಗದಲ್ಲಿ ವೀರಶೈವ ಲಿಂಗಾಯತ ನಾಯಕರ ಕೊರತೆಯನ್ನ ಕಾಂಗ್ರೆಸ್‌ ಎದುರಿಸುತ್ತಿದೆ. ವಿ.ಸೋಮಣ್ಣ ಅವರನ್ನು ಕರೆತಂದು ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ತುಮಕೂರಿನ ವೀರಶೈವ-ಲಿಂಗಾಯತ ಮುಖಂಡರು, ಮಠಮಾನ್ಯಗಳ ಜೊತೆ ಉತ್ತಮ ಒಡನಾಟದಲ್ಲಿರೋ ವಿ.ಸೋಮಣ್ಣ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ತುಮಕೂರಿನಲ್ಲಿ ನಿಂತರೆ ಗೆಲುವು ನಿಶ್ಚಿತ ಎಂಬುದು ಕಾಂಗಿಗಳ ಇಂಗಿತ.

ಇನ್ನೂ ರಾಜ್ಯಾಧ್ಯಕ್ಷ ಸ್ಥಾನ ಕೈ ತಪ್ಪಿದ ಹಿನ್ನಲೆ ಬೇಸರಗೊಂಡಿರುವ ಸೋಮಣ್ಣ ವಿಜಯೇಂದ್ರೆ ಹೆಸರು ಘೋಷಣೆ ಬಳಿಕ ಮೌನಕ್ಕೆ ಜಾರಿರುವ ನವೆಂಬರ್ 17ರಂದು ಸುದ್ದಿಗೋಷ್ಠಿ ನಡೆಸೋದಾಗಿ ಮಾಹಿತಿ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿರುವುದಲ್ಲದೆ ಕಮಲ ಪಾಳಯದಲ್ಲಿ ತಳಮಳ ಸೃಷ್ಟಿಸಿದೆ.

ಇದನ್ನೂ ಓದಿ:  ಪ್ರಸಿದ್ಧ ವ್ಯಕ್ತಿಗಳೊಂದಿಗೆ ಸಂಪರ್ಕ, ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನ!