Home Karnataka State Politics Updates B R Patil: ಶಾಸಕ ಸ್ಥಾನಕ್ಕೆ ಕಾಂಗ್ರೆಸ್ ಪ್ರಬಲ ನಾಯಕ ರಾಜೀನಾಮೆ ?! ಸಿದ್ದು ಸರ್ಕಾರದಲ್ಲಿ...

B R Patil: ಶಾಸಕ ಸ್ಥಾನಕ್ಕೆ ಕಾಂಗ್ರೆಸ್ ಪ್ರಬಲ ನಾಯಕ ರಾಜೀನಾಮೆ ?! ಸಿದ್ದು ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ

B R Patil

Hindu neighbor gifts plot of land

Hindu neighbour gifts land to Muslim journalist

B R Patil: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಇದೀಗ ಅಸಮಾಧಾನ ಸ್ಫೋಟಗೊಂಡಿದ್ದು ಪ್ರಬಲ ಶಾಸಕರಾದ ಬಿ ಆರ್ ಪಾಟೀಲ್(B R Patil) ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಸಿದ್ದರಾಮಯ್ಯನವರಿಗೆ ಪತ್ರವನ್ನು ಬರೆದಿದ್ದಾರೆ. ಈ ಮೂಲಕ ಸಿದ್ದು ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ ಶುರುವಾಗಿದೆ.

ಹೌದು, ಈ ಹಿಂದೆಯೂ ಸಚಿವರ ವಿಚಾರವಾಗಿ ಅಸಮಾಧಾನಗೊಂಡಿದ್ದ ಕಾಂಗ್ರೆಸ್ ಪ್ರಬಲ ಶಾಸಕಾರದ ಬಿ ಆರ್ ಪಾಟೀಲ್ ಅವರು ಇದೀಗ ಮತ್ತೆ ಸಿಡಿದೆದ್ದಿದ್ದಾರೆ. ಅಷ್ಟೇ ಅಲ್ಲ ಸಿಎಂ ಸಿದ್ದರಾಮಯ್ಯರಿಗೆ (CM Siddaramaiah) ಪತ್ರ ಬರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ (Resignation) ನೀಡುವ ಸುಳಿವು ನೀಡಿದ್ದಾರೆ.

ಅಂದಹಾಗೆ ಪಾಟೀಲ್ ಅವರು ಪತ್ರದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ವತಿಯಿಂದ ನಡೆಸಲಾದ ಕಾಮಗಾರಿ ಕುರಿತಾಗಿ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕಾ ಖರ್ಗೆ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರದಲ್ಲಿ ಏನಿದೆ?
‘ನಾನು ಈ ಹಿಂದೆ 2013 ರಲ್ಲಿ ಶಾಸಕನಾಗಿದ್ದಾಗ ತಮ್ಮ ನೇತ್ರತ್ವದಲ್ಲಿನ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ನೀಡಿದ್ದೀರಿ. ನಾನು ಕೆಲವು ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತಕ್ಕೆ ನೀಡಿದ್ದು ನಿಜ, ಕಾರಣ ಚುನಾವಣೆ ಹತ್ತಿರ ಬರುತ್ತಿದ್ದ ಸಮಯದಲ್ಲಿ ಬೇರೆ ಸಂಸ್ಥೆಗಳಿಗೆ ಕೊಟ್ಟರೆ ಟೆಂಡರ ಪ್ರಕ್ರಿಯೆ ಮುಗಿಸಿ ಕಾಮಗಾರಿಗಳು ಪ್ರಾರಂಭವಾಗಲಿಕ್ಕೆ ವಿಳಂಬವಾಗುವ ಕಾರಣ ಭೂಸೇನೆ (ಲ್ಯಾಂಡ್ ಆರ್ಮಿ)ಗೆ ಕಾಮಗಾರಿ ಕೊಡಲಾಗಿರುತ್ತದೆ. ಆದರೆ ಇಲ್ಲಿಯವರೆಗೆ ಕಾಮಗಾರಿಗಳು ಮುಗಿದಿಲ್ಲ ಮಾಡಿದ್ದರು ಅರ್ಧಂಬರ್ಧ ಕೆಲಸ ಮಾಡಿರುತ್ತಾರೆ. ಮಾಡಿದರೂ ಕಳಪೆ ಕಾಮಗಾರಿಯಾಗಿರುತ್ತದೆ. 2018 ರ ನಂತರ ಬಂದತಹ ಬಿಜೆಪಿ ಸರ್ಕಾರ ಇದರ ಬಗ್ಗೆ ಗಮನ ಹರಿಸಲಿಲ್ಲ’.

‘ಈ ವಿಷಯಕ್ಕೆ ಸಂಬಂದಿಸಿದಂತೆ ಕಳೆದ ಅಧಿವೇಶನದಲ್ಲಿ ಸಂಬಂದಪಟ್ಟ ಸಚಿವರಾದ ಪ್ರಿಯಾಂಕ ಖರ್ಗೆರವರಿಗೆ ಗಮನ ಸೆಳೆಯಲಾಗಿದ್ದು ಆದರೆ ಅವರು ಅನುಪಸ್ಥಿತಿಯಲ್ಲಿ ಸಚಿವರಾದ ಕೃಷ್ಣಭೈರೇಗೌಡರವರು ಉತ್ತರ ಹೇಳುತ್ತಾ ಇಷ್ಟೇಲ್ಲಾಗೊತ್ತಿದ್ದರು ಕಾಮಗಾರಿಗಳನ್ನು ಯಾಕೆ ಕೊಟ್ಟಿದ್ದರಿವೆಂದು ನನಗೆ ವಾದಮಾಡಿ ಆರೋಪ ಮಾಡಿ ನನ್ನ ಮೇಲೆ ಅನುಮಾನ ಬರುವಂತೆ ಆರೋಪ ಮಾಡಿದ್ದಾರೆ. ಇದರ ಅರ್ಥ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ಕಡೆಯಿಂದ ನಾನು ಹಣ ಪಡೆದು ಕೊಟ್ಟಿದ್ದೇನೆಂಬ ಅರ್ಥದಲ್ಲಿ ಸದನದಲ್ಲಿ ಮಾತನಾಡಿದ್ದಾರೆ. ಇದಕ್ಕೆ ನಾನು ಪ್ರತಿಭಟಿಸಿ ನೀವು ನನಗೆ ಗೂಬೆ ಕೂಡಿಸಲು ಹೇಳುತ್ತಿದ್ದಿರಿ. ಅಂದು ನನಗೆ ಸದನದಲ್ಲಿ ಶಾಸಕರಾದ ಶಿವಲಿಂಗೆಗೌಡರು ಸಹ ಧ್ವನಿಗೂಡಿಸಿದರು. ಸಮಯ ಇತಿಮಿತಿ ಇರುವುದರಿಂದ ಮಾನ್ಯ ಸಭಾಧ್ಯಕ್ಷರು ಬೇರೆ ವಿಷಯಕ್ಕೆ ಹೋದ ಕಾರಣಕ್ಕಾಗಿ ನಾನು ಕೂಡಬೇಕಾಗಿತ್ತು. ಇದೂ ಸದನದಲ್ಲಿ ನಡೆದ ವಿಷಯಗಳು ಎಲ್ಲಾ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಕಾರಣ ಈ ಪತ್ರವನ್ನು ಬರೆಯಲೇಬೇಕಾಗಿದೆ’ ಎಂದು ಬರೆಯಲಾಗಿದೆ.

ಇದನ್ನೂ ಓದಿ:Government holiday : ಹಿಂದೂ ಹಬ್ಬಗಳ ಸರ್ಕಾರಿ ರಜೆ ಕಟ್, ಮುಸ್ಲಿಂ ಹಬ್ಬಗಳಿಗೆ ಮಾತ್ರ ಸಾಲು ಸಾಲು ರಜೆ – ರಾಜ್ಯ ಸರ್ಕಾರದಿಂದ ಹೊಸ ಆದೇಶ !!