Home Karnataka State Politics Updates Karnataka Assembly election 2023: ಕರ್ನಾಟಕ ವಿಧಾನಸಭೆ ಚುನಾವಣೆ ‘ಮತದಾನ’ ಮುಕ್ತಾಯ! ಯಾವ ಕ್ಷೇತ್ರದಲ್ಲಿ ಎಷ್ಟು...

Karnataka Assembly election 2023: ಕರ್ನಾಟಕ ವಿಧಾನಸಭೆ ಚುನಾವಣೆ ‘ಮತದಾನ’ ಮುಕ್ತಾಯ! ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಇಲ್ಲಿದೆ ನೋಡಿ ಮಾಹಿತಿ.

Karnataka Assembly election 2023
Image source- Mint

Hindu neighbor gifts plot of land

Hindu neighbour gifts land to Muslim journalist

Karnataka Assembly election 2023: ಕರ್ನಾಟಕ ವಿಧಾನಸಭೆಗೆ(Karnataka Assembly election 2023) ಇಂದು ನಡೆದ ಏಕ ಹಂತದ ಮತದಾನ(Election) ಮುಕ್ತಾಯವಾಗಿದ್ದು, ಅಲ್ಲಲ್ಲಿ ಕೆಲವು ಗದ್ದಲಗಳು ನಡೆದಿದ್ದರು, ಬಹುತೇಕ ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆದಿದೆ. ರಾಜ್ಯದಲ್ಲಿ ಇಂದು ಬೆಳಗ್ಗೆಯಿಂದ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದು, ಸದ್ಯ ಸಂಜೆ 5 ಗಂಟೆಯವರೆಗೆ ಶೇಕಡಾ 65.69ರಷ್ಟು ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಇನ್ನು ಯಾವ ಯಾವ ಕ್ಷೇತ್ರಗಳಲ್ಲಿ ಎಷ್ಟು ಮತದಾನವಾಗಿದೆ ಅನ್ನೋದ್ರು ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಹೌದು, ಚುನಾವಣಾ ಆಯೋಗದ(Election Commission) ಅಧಿಕೃತ ಮಾಹಿತಿ ಪ್ರಕಾರ ಇಂದು ಸಂಜೆ 5 ಗಂಟೆ ಹೊತ್ತಿಗೆ ಶೇ 65.69% ಮತದಾನವಾಗಿದೆ ಅಂತ ತಿಳಿಸಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ಅಂತಿಮ ಮತದಾನದ ಶೇಕಡವಾರು ಮಾಹಿತಿಯನ್ನು ಕರ್ನಾಟಕ ಚುನಾವಣಾ ಆಯೋಗದ ಅಧಿಕಾರಿಗಳು(Election Commission Officer’s) ಮಾಹಿತಿಯನ್ನು ನೀಡಲಿದ್ದಾರೆ. ಇಂದು ಬೆಳಗ್ಗೆ ಆರಂಭದಲ್ಲಿ ಮತದಾರರು ಮತದಾನವನ್ನು ಮಾಡಲು ನಿರುತ್ಸಾಹ ಕಂಡು ಬಂದಿತ್ತು, ಆದರೆ ಸಮಯ ಕಳೆದಂತೆ ಮತದಾರರು ಮತದಾನ ಕೇಂದ್ರಗಳತ್ತ ಆಗಮಿಸಿ, ಮತದಾನವನ್ನು ಮಾಡಿ, ಪ್ರಜಾಪ್ರಭುತ್ವದ ಹಬ್ಬದ ಭಾಗವಹಿಸಿ ಸಂಭ್ರಮಿಸಿದರು.

ಈ ಬಾರಿ ಕೂಡ ಬೆಂಗಳೂರಿನಲ್ಲಿ(Bangalore) ಅತಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿರುವುದು ಬೆಂಗಳೂರಿನ ಮತದಾರರ ನೈತಿಕತೆಯನ್ನು ಪ್ರಶ್ನೆ ಮಾಡುವಾಂತಾಗಿದೆ ಅಂತ ಹಲವು ಮಂದಿ ಪ್ರಶ್ನೆಮಾಡುತ್ತಿದ್ದಾರೆ. ಅಂದಹಾಗೆ ಮೇಲುಕೋಟೆ(Melukote) ಯಲ್ಲಿ ಶೇ. 84.53ರಷ್ಟು ಮತದಾನವಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಮತದಾನವಾದ ಕ್ಷೇತ್ರ ಎನಿಸಿಕೊಂಡಿದೆ. ಇದೇ ವೇಳೆ ಹೊಸಕೋಟೆ(Hosakote)ಯಲ್ಲಿ 83.32ರಷ್ಟು ಮತದಾನವಾಗಿದೆ. ಕುಣಿಗಲ್‌(Kunigal) ನಲ್ಲಿ 81.12, ರಾಜ್ಯದ ಹೈವೋಲ್ಟೇಜ್‌ ಕ್ಷೇತ್ರಗಳಲ್ಲಿ ಒಂದಾದ ಕನಕಪುರ(Kanakapura) ದಲ್ಲಿ 80.5ರಷ್ಟು ಹಕ್ಕು ಚಲಾವಣೆಯಾಗಿದೆ. ಇನ್ನುಳಿದ ಕೆಲವು ಪ್ರಮುಖ ಕ್ಷೇತ್ರಗಳ ಮಾಹಿತಿ ಇಲ್ಲಿದೆ ನೋಡಿ.

ಹಾಸನ ಶೇ74.67
ಹಾವೇರಿ ಶೇ 73.25
ಕೊಡಗು ಶೇ 70.26
ಕೋಲಾರ ಶೇ 72.23
ಕೊಪ್ಪಳ ಶೇ70.29
ಮಂಡ್ಯ ಶೇ 75.90
ಮೈಸೂರು ಶೇ 67.99
ರಾಯಚೂರು ಶೇ 63.87
ರಾಮನಗರ ಶೇ 78.22
ಶಿವಮೊಗ್ಗ ಶೇ 70.43
ತುಮಕೂರು ಶೇ 75.24
ಉಡುಪಿ ಶೇ 73.80
ಉ.ಕನ್ನಡ ಶೇ 68.06
ವಿಜಯನಗರ ಶೇ 71.70
ಯಾದಗಿರಿ ಶೇ59.25

ಬಳ್ಳಾರಿ ಶೇ 67.68
ಬೀದರ್‌ ಶೇ 61.93
ಬಿಜಾಪುರ ಶೇ 62.54
ಚಾಮರಾಜನಗರ ಶೇ 69.31
ಚಿಕ್ಕಮಗಳೂರು 72.06
ಚಿಕ್ಕಬಳ್ಳಾಪುರ ಶೇ 76.64
ಚಿತ್ರದುರ್ಗ ಶೇ 70.74
ದ.ಕನ್ನಡ ಶೇ69.88
ದಾವಣಗೆರೆ 70.71
ದಾರವಾಡ ಶೇ 62.98
ಗದಗ ಶೇ 68.30
ಗುಲರ್ಬಗ ಶೇ 57.99

ಬೆಂಗಳೂರು ಸೆಂಟ್ರಲ್‌ ಶೇ 50.10
ಬೆಂಗಳೂರು ನಾರ್ತ್‌ ಶೇ 48.63
ಬೆಂಗಳೂರು ಸೌತ್‌ ಶೇ 48.63
ಬಾಗಲಕೋಟೆ ಶೇ 70.04
ಬೆಂಗಳೂರು ಗ್ರಾಮೀಣ ಶೇ 76.10
ಬೆಂಗಳೂರು ನಗರ ಶೇ 52.19
ಬೆಳಗಾಂ ಶೇ67.44

 

ಇದನ್ನು ಓದಿ: Nail cutter: ನೈಲ್​ ಕಟರ್​ನಲ್ಲಿ ಚಾಕು ಇರೋದು ಯಾಕೆ? ಇಲ್ಲಿದೆ ಇಂಟ್ರೆಸ್ಟಿಂಗ್​ ಮಾಹಿತಿ