Home Karnataka State Politics Updates K.Annamalai: ಉಡುಪಿಗೆ ಹೆಲಿಕಾಪ್ಟರ್ ನಲ್ಲಿ ಬಂದಿಳಿದ ಮೂಟೆ ಮೂಟೆ ಹಣ, ಏನಿದು ವಿನಯ್ ಕುಮಾರ್ ಸೊರಕೆ...

K.Annamalai: ಉಡುಪಿಗೆ ಹೆಲಿಕಾಪ್ಟರ್ ನಲ್ಲಿ ಬಂದಿಳಿದ ಮೂಟೆ ಮೂಟೆ ಹಣ, ಏನಿದು ವಿನಯ್ ಕುಮಾರ್ ಸೊರಕೆ ಅವರ ಆರೋಪ ?!

Hindu neighbor gifts plot of land

Hindu neighbour gifts land to Muslim journalist

Udupi: ಉಡುಪಿಗೆ ಅಣ್ಣ ಬಂದಾಗ, ಬಂದಿರುವ ಹೆಲಿಕಾಫ್ಟರ್​​​ನಲ್ಲಿ ಹಣ ಗಂಟು ತಂದಿದ್ದಾರೆ. ಉಡುಪಿಯಲ್ಲಿ ಹಣ ಹಂಚಲು ಹೆಲಿಕಾಪ್ಟರ್​​ನಲ್ಲಿ (Helicopter) ಅಣ್ಣಾಮಲೈ ( K.Annamalai) ಬಂದಿದ್ದಾರೆ. ಸಮಯಕ್ಕೆ ಮೊದಲೇ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದು ಅದಕ್ಕೇ. ಅದರಲ್ಲಿ ದುಡ್ಡು ಇತ್ತು ಎಂದು ಮಾಜಿ ಸಂಸದ, ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆಯವರು ಆರೋಪಿಸಿದ್ದಾರೆ.

ಈ ಆರೋಪಕ್ಕೆ ಅಣ್ಣಾಮಲೈ(K.Annamalai) ತಿರುಗೇಟು ನೀಡಿದ್ದಾರೆ. ಆರೋಪದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಣ್ಣಾಮಲೈ, ಸೊರಕೆ ಅವರು ಬಹುಶಃ ಎಲ್ಲರೂ ಅವರ ಥರಾನೇ ಇದ್ದಾರೆ ಅಂದುಕೊಂಡಿರಬೇಕು. ನಾವು ಪ್ರಾಮಾಣಿಕವಾಗಿ ಇದ್ದೇವೆ. ಅಪಪ್ರಚಾರ ಮಾಡುವ ಕಾಂಗ್ರೆಸ್ ಬಾಯಿಗೆ ಬಂದಂತೆ ಮಾತನಾಡುತ್ತಿದೆ. ಪ್ರತಿಸ್ಪರ್ಧಿಗೆ ಹೆದರಿ ಸೊರಕೆ ಈ ರೀತಿ ಮಾತನಾಡುತ್ತಿದ್ದಾರೆ. ಇದರಿಂದ ನಮ್ಮ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಗೆಲುವು ಖಚಿತ ಅನ್ನೋದು ಈಗ ಅವರಿಗೆ ಗೊತ್ತಾಗಿದೆ ಎಂದಿದ್ದಾರೆ.

” ನಾನು ಹೆಲಿಕಾಪ್ಟರ್ ನಲ್ಲಿ ಬಂದಿದ್ದು ನಿಜ. ಉಡುಪಿಯಿಂದ ಇನ್ನೊಂದು ಕಡೆಗೆ ತುರ್ತಾಗಿ ಹೋಗಬೇಕು, ಒಟ್ಟು ಐದು ಕಾರ್ಯಕ್ರಮಗಳು ನಿಗದಿಯಾಗಿದೆ. ಸುಳ್ಯ, ತೀರ್ಥಹಳ್ಳಿ, ಚಿಕ್ಕಮಗಳೂರು ಎಲ್ಲಾ ಕಡೆ ಓಡಾಟ ಇದೆ. ಸಮಯಕ್ಕೆ ಸರಿಯಾಗಿ ಎಲ್ಲಾ ಸ್ಥಳದಲ್ಲಿ ಹಾಜರಿರಬೇಕು. ಸೊರಕೆಯವರು ನನ್ನ ಒಳ್ಳೆ ಮಿತ್ರರು, ಅಸಹಾಯಕತೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಅಷ್ಟೇ ” ಎಂದು ಹೇಳಿದ್ದಾರೆ ಅಣ್ಣಾಮಲೈ.

ಇದನ್ನೂ ಓದಿ:ಬಿ.ಎಲ್ ಸಂತೋಷ್ ಷಡ್ಯಂತ್ರದಿಂದ ಟಿಕೆಟ್ ಕೈತಪ್ಪಿದ್ದು- ಶೆಟ್ಟರ್ ನೇರ ಆರೋಪ