Home Karnataka State Politics Updates BIG BREAKING: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ರಹಸ್ಯ ಬಯಲು | ಸಾವಿಗೆ ಈಕೆಯೇ...

BIG BREAKING: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ರಹಸ್ಯ ಬಯಲು | ಸಾವಿಗೆ ಈಕೆಯೇ ಕಾರಣ ಎಂದು ವರದಿ ಸಲ್ಲಿಸಿದ ಕಮಿಷನ್!!!

Hindu neighbor gifts plot of land

Hindu neighbour gifts land to Muslim journalist

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸಾವಿನ ಕುರಿತು ತನಿಖೆ ಮಾಡಿರುವ ಆರುಮುಗಸ್ವಾಮಿ ಕಮೀಷನ್ 608 ಪುಟಗಳ ವರದಿಯನ್ನು ಸಲ್ಲಿಸಿ, ಜಯಲಲಿತಾ ಅವರ ಸಾವಿಗೆ ಶಶಿಕಲಾ ಅವರೇ ಕಾರಣ ಎಂದು ಕಮೀಷನ್ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

ಅಷ್ಟು ಮಾತ್ರವಲ್ಲದೇ, ಶಶಿಕಲಾ ಮತ್ತು ಮಾಜಿ ಆರೋಗ್ಯ ಸಚಿವರ ವಿರುದ್ಧ ತನಿಖೆ ನಡೆಸುವಂತೆ ಆಯೋಗ ಸಲಹೆ ಕೂಡಾ ನೀಡಿದೆ.

ವರದಿಯ ಪ್ರಕಾರ ಶಶಿಕಲಾ, ಜಯಲಲಿತಾರ ಖಾಸಗಿ ವೈದ್ಯ ಮತ್ತು ಶಶಿಕಲಾರ ಸಂಬಂಧಿ ಡಾ. ಶಿವಕುಮಾರ್, ಮಾಜಿ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಧಾಕೃಷ್ಣನ್ ಮತ್ತು ಮಾಜಿ ಆರೋಗ್ಯ ಸಚಿವ ವಿಜಯಭಾಸ್ಕರ್ ಅವರು ತಪ್ಪಿತಸ್ಥರು ಎಂದು ಹೇಳಲಾಗಿದೆ. ಆಯೋಗ ಈ ಎಲ್ಲರ ವಿರುದ್ಧವೂ ತನಿಖೆ ನಡೆಸುವಂತೆ ಸಲಹೆ ನೀಡಿದೆ. 2016ರ ಸೆಪ್ಟೆಂಬರ್ ತಿಂಗಳಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಜಯಲಲಿತಾ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಹಿಡಿದು ಅವರ ಸಾವಿನ ವರೆಗೂ ಅವರಿಗೆ ನೀಡಲಾದ ಚಿಕಿತ್ಸೆ, ಅವರ ಆರೋಗ್ಯದಲ್ಲಾದ ಬದಲಾವಣೆಗಳು ಎಲ್ಲದರ ಕುರಿತು ಆಯೋಗ ವಿಚಾರಣೆ ನಡೆಸಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರಿಗೆ ವರದಿ ನೀಡಿದ್ದರು. ಇಂದು ತಮಿಳುನಾಡು ವಿಧಾಸಭೆಯಲ್ಲಿ ಎಂ ಕೆ ಸ್ಟಾಲಿನ್ ಆಯೋಗದ ವರದಿಯನ್ನು ಪ್ರಸ್ತುತ ಪಡಿಸಿದ್ದಾರೆ ಎಂದು ಮಾಧ್ಯಮವೊಂದು ಪ್ರಕಟಿಸಿದೆ.

ಜಯಲಲಿತಾ 2016ರ ಡಿಸೆಂಬರ್ 5ರಂದು ಮೃತಪಟ್ಟಿದ್ದರು. ಹಿಂದಿನ ಎಐಎಡಿಎಂಕೆ ಆರುಮುಗಸ್ವಾಮಿ ಆಯೋಗವನ್ನು ಸರ್ಕಾರ 2017ರ ನವೆಂಬರ್ 22ರಂದು ರಚನೆ ಮಾಡಿತ್ತು. ಅನಂತರ ಮಡ್ರಾಸ್ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಆರುಮುಗಂ ಅವರು ಆಯೋಗದ ಮುಖ್ಯಸ್ಥರಾಗಿ ತನಿಖೆ ನಡೆಸಿದರು. ತನಿಖೆ ನಡೆದು ಸುಮಾರು ಐದು ವರ್ಷಗಳ ನಂತರ ಇದೀಗ ಆಯೋಗ ತನ್ನ ವರದಿ ನೀಡಿದೆ. ಈ ವರದಿಯಿಂದಾಗಿ ಇನ್ನು ಮುಂದೆ ಶಶಿಕಲಾ ಮತ್ತು ಇತರ ಆರೋಪಿಗಳ ವಿರುದ್ಧ ಶೀಘ್ರ ತನಿಖೆಯಾಗುವ ಸಾಧ್ಯತೆಯಿದೆ. ಜಯಲಲಿತಾ ಅವರ ಸಾವಿನ ದಿನದಿಂದಲೂ ಶಶಿಕಲಾ ಅವರ ಮೇಲೆ ಶಂಕೆ ಕೇಳಿಬಂದಿತ್ತು. ಜಯಲಲಿತಾ ಅವರಿಗೆ ಹಲವು ದಿನಗಳಿಂದ ವಿಷವನ್ನು ನಿಧಾನವಾಗಿ ಶಶಿಕಲಾ ಕೊಡುತ್ತಾ ಬಂದಿದ್ದರು ಎಂಬ ಆರೋಪ ಇತ್ತು. ಈಗ ಈ ಆರೋಪಗಳು ವರದಿಯಲ್ಲಿ ದೃಢಪಟ್ಟಿವೆ ಎಂದು ಹೇಳಲಾಗಿದೆ.