Home Karnataka State Politics Updates ಸ್ವಾತಂತ್ರ್ಯ ಭಾಷಣದಲ್ಲಿ ಎಡವಟ್ಟು ಮಾಡಿ ಬದುಕಿದ್ದವರನ್ನೇ ಕೊಂದರಾ ಡಿಕೆಶಿ!!!

ಸ್ವಾತಂತ್ರ್ಯ ಭಾಷಣದಲ್ಲಿ ಎಡವಟ್ಟು ಮಾಡಿ ಬದುಕಿದ್ದವರನ್ನೇ ಕೊಂದರಾ ಡಿಕೆಶಿ!!!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಇಂದು 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕಾಂಗ್ರೆಸ್ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿದ್ದು, ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರು ಭಾಷಣದ ವೇಳೆ ಎಡವಟ್ಟು ಮಾಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನಡೆಸಿ, ಕಾರ್ಯಕ್ರಮವನ್ನುದ್ದೇಶಿಸಿ ಕಾಂಗ್ರೆಸ್ ನಾಯಕರು ಮಾತನಾಡಿದ್ದಾರೆ. ಈ ವೇಳೆ ಡಿ.ಕೆ. ಶಿ ಯವರು ಭಾಷಣ ಮಾಡುವಾಗ, ಹುತಾತ್ಮರಾದ ಸೋನಿಯಾ ಗಾಂಧಿ ಎಂದು ಬಾಯಿತಪ್ಪಿ ನುಡಿದಿದ್ದಾರೆ ನಂತರ ಸ್ವಾರಿ,ಸ್ವಾರಿ… ಎಂದು ಇಂಗ್ಲಿಷ್ನಲ್ಲಿ ಕ್ಷಮೆ ಯಾಚಿಸಿ ಹುತಾತ್ಮರಾದ ಇಂದಿರಾ ಗಾಂಧಿ ಎಂದು ತಪ್ಪನ್ನು ತಿದ್ದಿಕೊಂಡು ಭಾಷಣವನ್ನು ಮುಂದುವರೆಸಿದ್ದಾರೆ.

ವಿಡಿಯೋ ತುಣುಕು

ಬಳಿಕ ದೇಶ ಕಟ್ಟಲು ಎದುರಾದ ಸವಾಲುಗಳನ್ನು ಮೆಟ್ಟಿ ನಿಂತು ಸ್ವಾತಂತ್ರ್ಯಕ್ಕಾಗಿ ಹಿರಿಯರು ಹೋರಾಟ ಮಾಡಿದ್ದಾರೆ. ಆದರೆ ಈಗ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲಾಗುತ್ತಿದ್ದು, ಇದರ ವಿರುದ್ಧ ಹೋರಾಡಬೇಕಾಗಿದೆ. ಜೊತೆಗೆ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸಲು ಸಂಚು ನಡೆಸಿದ್ದಾರೆ. ಆದರೆ ಅಂತಹ ದೊಡ್ಡ ಮಹಾನೀಯರ ಹೆಸರನ್ನು ಬದಲಿಸಿದರೂ ಅವರು ಜನರ ಮನಸ್ಸಿನಲ್ಲಿ ಎಂದಿಗೂ ಚಿರಸ್ಥಾಯಿ ಎನ್ನುವುದನ್ನು ಮರೆಯಬಾರದು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಮುಖಂಡರು ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.