Home Karnataka State Politics Updates V Somanna: ಬೆಳಿಗ್ಗೆ 4 ಗಂಟೆಗೆ ಕೆಲಸ ಶುರುಮಾಡ್ತಿದ್ದ ನಾನು ಸದ್ಯ ನಿರುದ್ಯೋಗಿ! ಯಾರ್ದೋ ಮಾತ್...

V Somanna: ಬೆಳಿಗ್ಗೆ 4 ಗಂಟೆಗೆ ಕೆಲಸ ಶುರುಮಾಡ್ತಿದ್ದ ನಾನು ಸದ್ಯ ನಿರುದ್ಯೋಗಿ! ಯಾರ್ದೋ ಮಾತ್ ಕೇಳಿ ಚಿನ್ನದಂತ ಕ್ಷೇತ್ರ ಬಿಟ್ಟೆ; ಹೈಕಮಾಂಡ್ ವಿರುದ್ಧ ವಿ ಸೋಮಣ್ಣ ಆಕ್ರೋಶ!

V Somanna
Image source- The Hindu

Hindu neighbor gifts plot of land

Hindu neighbour gifts land to Muslim journalist

V Somanna: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ(Karnataka Assembly Election) ಬಿಜೆಪಿ(BJP) ಘಟಾನುಘಟಿ ನಾಯಕರೇ ಸೋಲುಂಡಿದ್ದಾರೆ. ಅಂತವರಲ್ಲಿ ವಿ.ಸೋಮಣ್ಣ(V Somanna) ಕೂಡ ಒಬ್ಬರು. ಚಾಮರಾಜನಗರ ಹಾಗೂ ವರಣಾ ಎರಡೂ ಕ್ಷೇತ್ರದಲ್ಲಿ ಸೋಲು ಕಂಡ ಬಳಿಕ, ಫಲಿತಾಂಶದ ಕುರಿತು ಮಾತನಾಡಿದ ಅವರು ಬಿಜೆಪಿ ಹೈಕಮಾಂಡ್(BJP High Command)ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, ಚಾಮರಾಜನಗರ (Chamarajangar) ಮತ್ತು ವರುಣಾ (Varuna) ಕ್ಷೇತ್ರದಲ್ಲಿ ಸೋಲಿನ ಬಳಿಕ ಯಾವುದೇ ಪ್ರತಿಕ್ರಿಯೆ ನೀಡದೇ ಮಾಜಿ ಸಚಿವ ವಿ.ಸೋಮಣ್ಣ (Former Minister V Somanna) ಮೌನಕ್ಕೆ ಶರಣಾಗಿದ್ದರು. ಇಂದು ಬೆಂಗಳೂರಿನಲ್ಲಿ ಸೋಲಿನ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ಹೈಕಮಾಂಡ್ (High Command) ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಸೋತಿದ್ದೇವೆ ಏನ್ ಮಾಡೋಕೆ ಆಗುತ್ತೆ. ಹೈಕಮಾಂಡ್ ಹೇಳಿದ್ರು ಅಂತ ಹೋಗಿದ್ದೆ. ಪ್ರತಿಯೊಂದಕ್ಕೂ ಕಾಲ ಉತ್ತರ ಕೊಡುತ್ತದೆ. ತೀರ್ಮಾನ ಜನ ಮಾಡಿದ್ದಾರೆ ಅನ್ನೋದಕ್ಕಿಂತ ಹೈಕಮಾಂಡ್​ಗೂ ಇದು ಎಚ್ಚರಿಕೆ ಗಂಟೆ ಎಂದು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲನ್ನು ಸ್ವೀಕಾರ ಮಾಡಬೇಕು. ಅದನ್ನು ಸ್ವೀಕಾರ ಮಾಡದಿದ್ದರೆ ನನ್ನಂತ ಹುಚ್ಚ ಮತ್ತೊಬ್ಬರಿಲ್ಲ. ಆದರೆ ಒಂದು ವಿಚಾರವೆಂದರೆ ನನನ್ನು ನಿರುದ್ಯೋಗಿ ಮಾಡಿದ್ದಾರೆ. ಬೆಳಗ್ಗೆ ನಾಲ್ಕು ಗಂಟೆ ಯಿಂದ ಕೆಲಸ ಆರಂಭಿಸುತ್ತಿದ್ದವನು ನಾನು. ಚಿನ್ನದಂತಹ ಗೋವಿಂದರಾಜನಗರ ಕ್ಷೇತ್ರ ಬಿಟ್ಟು ಹೋಗಿ ಈಗ ನಿರುದ್ಯೋಗಿಯಾಗಿದ್ದೇನೆ. ಹೈಕಮಾಂಡ್​ ಹೇಳಿದ್ದರಿಂದ ಕ್ಷೇತ್ರ ಬಿಡಬೇಕಾಯ್ತು. ಕ್ಷೇತ್ರಕ್ಕಿಂತ ಪಕ್ಷ ದೊಡ್ಡದು, ಪಕ್ಷದ ಮಾತು ಕೇಳಿದೆ. ಪಕ್ಷಕ್ಕೂ ಹಿನ್ನಡೆ ಆಗಿದ್ದು, ನಮಗೆಲ್ಲ ಒಂದು ಎಚ್ಚರಿಕೆ ಗಂಟೆಯಾಗಿದೆ ಎಂದಿದ್ದಾರೆ.

ಅಲ್ಲದೆ ಬಿಜೆಪಿ ಯಡಿಯೂರಪ್ಪರನ್ನ(B S Yadiyurappa) ಮೂಲೆಗುಂಪು ಮಾಡಿದ್ಯಾ ಎಂಬ ಕುರಿತು ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಪಕ್ಷ ಮೂಲೆಗುಂಪು ಮಾಡಿಲ್ಲ, ಯಡಿಯೂರಪ್ಪ ಹೇಳಿದ್ದಾರಾ ಮೂಲೆಗುಂಪು ಮಾಡಿದ್ದಾರೆ ಅಂತ. ಸೋತ ತಕ್ಷಣ ಎಲ್ಲವೂ ಮುಗಿದು ಹೋಯ್ತಾ? ಪಕ್ಷಕ್ಕೂ ಹಿನ್ನಡೆ ಆಗಿದ್ದು ನಮಗೆಲ್ಲ ಎಚ್ಚರಿಕೆ ಗಂಟೆ. ಜನರ ತೀರ್ಮಾನ ಇದು, ನಾವು ಬದ್ಧರಾಗಬೇಕು. ದೇಶಕ್ಕೆ ಪ್ರಧಾನಿ ಮೋದಿ ಪ್ರಶ್ನಾತೀತ ನಾಯಕರು, ಅವರ ಕೆಲಸಗಳು ಅವಿಸ್ಮರಣೀಯವಾದದ್ದು ಎಂದು ಹೇಳಿದ್ದಾರೆ.

ಇದನ್ನೂ ಓದಿ:B L Santosh – ಸೋಲುಣಿಸಿ ವ್ಯಂಗ್ಯವಾಡಿದ ಕಾಂಗ್ರೆಸ್ಸಿಗರಿಗೆ ಬಿ.ಎಲ್ ಸಂತೋಷ್ ಹೊಸ ಸವಾಲ್! ಮುಂದುವರೆಸುತ್ತ ಬಿಜೆಪಿ ತನ್ನ ವ್ಯಾಪಾರದ ಹಳೇ ಚಾಳಿ?