Home Karnataka State Politics Updates Hiremagaluru kannan: ರಾಮನ ಪೂಜಿಸೋ ‘ಕನ್ನಡದ ಪೂಜಾರಿ’ ಹಿರೇಮಗಳೂರು ಕಣ್ಣನ್’ಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ...

Hiremagaluru kannan: ರಾಮನ ಪೂಜಿಸೋ ‘ಕನ್ನಡದ ಪೂಜಾರಿ’ ಹಿರೇಮಗಳೂರು ಕಣ್ಣನ್’ಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ !! ಏನಿದು ಸರ್ಕಾರದ ವಿಚಿತ್ರ ನಡೆ ?!

Hiremagaluru kannan

Hindu neighbor gifts plot of land

Hindu neighbour gifts land to Muslim journalist

Hiremagaluru kannan: ಮುಜಿರಾಯಿ ಇಲಾಖೆಯ ಅಧೀನದಲ್ಲಿ ಬರುವ ಚಿಕ್ಕಮಗಳೂರು ಬಳಿಯ ಹಿರೇಮಗಳೂರಿನ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರು, ಕನ್ನಡದ ಪೂಜಾರಿ ಎಂದೇ ಖ್ಯಾತಿ ಗಳಿಸಿರುವ ಹಿರೇಮಗಳೂರು ಕಣ್ಣನ್(Hiremagaluru kannan) ಅವರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ.

ಹೌದು, ರಾಮನನ್ನು ಕನ್ನಡದಲ್ಲೇ ಪೂಜಿಸೋ ಹಿರೇಮಗಳೂರು ಕಣ್ಣನ್ ಅವರಿಗೆ ಸರ್ಕಾರವು ತಮಗೆ ಹೆಚ್ಚುವರಿಯಾಗಿ ಸಂಬಳ ನೀಡಿದ್ದು, ಹೀಗಾಗಿ 4,74,000 ರೂಪಾಯಿ ವಾಪಸ್ ನೀಡುವಂತೆ ನೋಟಿಸ್ ಜಾರಿಮಾಡಿದೆ.

ಇದನ್ನೂ ಓದಿ: Relationship tips: ಹುಡುಗಿಯರೇ ಹುಡುಗರ ಈ 3 ಗುಟ್ಟುಗಳನ್ನು ನೀವು ತಿಳಿದಿರಲೇ ಬೇಕು !!

ಅಂದಹಾಗೆ ಜಿಲ್ಲಾಡಳಿತದಿಂದ ಈ ಕುರಿತು ಸೂಚನೆ ಬಂದಿದ್ದು ದೇವಾಲಯದ ಆದಾಯ ಕಡಿಮೆ, ಆದರೆ ನಿಮಗೆ ಸಂಬಳ ಹೆಚ್ಚು ನೀಡಲಾಗಿದೆ. 4,500 ರೂಪಾಯಿಯಂತೆ 10 ವರ್ಷದ ಹಣವನ್ನ ವಾಪಸ್ ನೀಡಲು ಸೂಚಿಸಲಾಗಿದ್ದು ಒಟ್ಟಾರೆ 4,74,000 ರೂಪಾಯಿ ವಾಪಸ್ ನೀಡುವಂತೆ ಸೂಚನೆ ಬಂದಿದೆ. ಚಿಕ್ಕಮಗಳೂರು ತಹಶೀಲ್ದಾರ್‌ ಸುಮಂತ್ ರಿಂದ ನೋಟಿಸ್ ನೀಡಲಾಗಿದೆ.

ವಿಚಿತ್ರ ಅಂದರೆ ಕಣ್ಣನ್ ಅವರ ಖಾತೆಗೆ ಪ್ರತಿ ತಿಂಗಳು ಜಮೆಯಾಗುತ್ತಿದ್ದ ಸಂಬಳ 7500. ಆದ್ರೆ 7500 ರೂಪಾಯಿ ನೀಡಿದ ಸಂಬಳದಲ್ಲಿ 4500 ವಾಪಸ್ ನೀಡಲು ಸೂಚನೆ ಬಂದಿದೆ. ದೇವಾಲಯದ ಆದಾಯ ಕಡಿಮೆ‌ ಇರುವುದರಿಂದ ಸರ್ಕಾರ ನೀಡಿದ ಸಂಬಳ ವಾಪಸ್ ನೀಡಲು ಸೂಚಿಸಲಾಗಿದೆಯಂತೆ.